ನವದೆಹಲಿ : ರೈತರಿಗೆ ಸಿಹಿ ಸುದ್ದಿ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kissan samman  Nidhi) ಯೋಜನೆಯ 8 ನೇ ಕಂತಿನ ಹಣಕ್ಕಾಗಿ ಎದುರುನೋಡುತ್ತಿರುವವರಿಗೆ ಸಿಹಿ ಸುದ್ದಿ. ಮೇ. 2ರ ಬಳಿಕ ಯಾವುದೇ ದಿನ ಪಿಎಂ ಕಿಸಾನ್ ಯೋಜನೆಯ ಹಣ 2000 ರೂಪಾಯಿ ರೈತರ ಖಾತೆಗೆ ಬರಲಿದೆ. ಇದು ಏಪ್ರಿಲ್ ಜುಲೈ  ಅವಧಿಯ ಕಂತಿನ ದುಡ್ಡಾಗಲಿದೆ. 


COMMERCIAL BREAK
SCROLL TO CONTINUE READING

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಂತೆ (PM Kisan samman Nidhi) ಮೋದಿ ಸರ್ಕಾರ ಪ್ರತಿ ವರ್ಷ ಅರ್ಹ ರೈತರ ಖಾತೆಗೆ 6000 ರೂಪಾಯಿ ಮೂರು ಕಂತುಗಳಲ್ಲಿ ವರ್ಗಾಯಿಸುತ್ತದೆ.  ಪ್ರತಿ ವರ್ಷ ಮೊದಲು ಕಂತು 1 ಏಪ್ರಿಲ್‍ನಿಂದ 31 ಜುಲೈ ಅವಧಿಗೆ, ಎರಡನೇ ಕಂತು ಆಗಸ್ಟ್  - ನವೆಂಬರ್, ಮೂರನೇ ಕಂತು ಡಿಸೆಂಬರ್ - ಮಾರ್ಚ್ ಅವಧಿಗೆ ರಿಲೀಸ್ ಆಗುತ್ತದೆ.


ಇದನ್ನೂ ಓದಿ : ತಪ್ಪಿ ಬೇರೆಯವರ ಖಾತೆಗೆ ದುಡ್ಡು ಟ್ರಾನ್ಸ್ಫರ್ ಆದರೆ ಹೀಗೆ ಮಾಡಿ ..


ಚೆಕ್ ಮಾಡುವುದು ಹೇಗೆ..?
ನೀವು ಮೊಬೈಲ್ (Mobile) ಅಥವಾ ಕಂಪ್ಯೂಟರಿನಲ್ಲಿ ಸ್ಟೇಟಸ್ ಚೆಕ್ ಮಾಡಿದ್ದರೆ, 8 ನೇ ಕಂತಿನ ದುಡ್ಡು `Waiting for approval by state ವೈಟಿಂಗ್ ಫಾರ್ ಅಪ್ರೂವಲ್ ಬೈ ಸ್ಟೇಟ್' ಎಂದು ಕಾಣಿಸಿಕೊಳ್ಳುತ್ತದೆ.  ಇದರರ್ಥ ನಿಮ್ಮ ಖಾತೆಗೆ ಈ ದುಡ್ಡು ಬರಲು ಇನ್ನೂ ರಾಜ್ಯ ಸರ್ಕಾರದ ಅಪ್ರೂವಲ್ ಸಿಕ್ಕಿಲ್ಲ ಎಂದು. ಯಾವುದಾದರೂ ರಾಜ್ಯದಲ್ಲಿ ಆರ್ ಎಫ್‍ಟಿ ಸೈನ್ಡ್ ಬೈ ಸ್ಟೇಟ್ ಗವರ್ನಮೆಂಟ್ ( RFT signed by state government) ಎಂದು ಬರುತ್ತಿದ್ದರೆ ಅದರ ಅರ್ಥ ರಾಜ್ಯ ಸರ್ಕಾರವು ಲಾಭಾರ್ಥಿಗಳ ಡಾಟಾ ಚೆಕ್ ಮಾಡಿದೆ. ಅದು ಸರಿಯಾಗಿದೆ. ಈಗ ಕೇಂದ್ರ ಸರ್ಕಾರವು (Central government) ಲಾಭಾರ್ಥಿಗಳ ಖಾತೆಗೆ ದುಡ್ಡು ಸೆಂಡ್ ಮಾಡಬಹುದು ಎಂಬುದು. 


ನಿಮ್ಮ ಖಾತೆಗೆ ದುಡ್ಡು ಬಂದಿರುವುದು ಚೆಕ್ ಮಾಡುವುದು ಹೇಗೆ..?
-ಪಿಎಂ ಕಿಸಾನ್ ಸಮ್ಮಾನ್ ನಿಧಿ ವೆಬ್ ಸೈಟ್‍ನಲ್ಲಿ (Website) ಫಾರ್ಮರ್ ಕಾರ್ನರ್ ಕ್ಲಿಕ್ ಮಾಡಿ. 
-ನಂತರ ಬೆನೆಫಿಶಿಯರಿ ಸ್ಟಾಟಸ್ ಕ್ಲಿಕ್ ಮಾಡಿ. 
-ನಂತರ ಹೊಸ ಪೇಜ್ ಓಪನ್ ಆಗುತ್ತದೆ. 
-ಇದರಲ್ಲಿ ನಿಮ್ಮ ಆಧಾರ ನಂಬರ್(Aadhaar ), ಮೊಬೈಲ್ ನಂಬರ್ ಹಾಕಿ. 
ಬಳಿಕ ನಿಮಗೆ ನಿಮ್ಮ ಎಲ್ಲಾ ಮಾಹಿತಿ ಸಿಗುತ್ತದೆ.


ಇದನ್ನೂ ಓದಿ : ಪೋಸ್ಟ್ ಆಫೀಸಿನ ಈ ಸ್ಕೀಮ್ ಗಳಲ್ಲಿ ಹಣ ಡಬಲ್ ಆಗಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.