PAN-Aadhaar ಲಿಂಕ್ ಆಗಿಲ್ಲವಾದರೆ ತಕ್ಷಣ ಮಾಡಿಕೊಳ್ಳಿ.. ಇಲ್ಲವಾದರೆ ಬೀಳಲಿದೆ ದಂಡ..!

ಲಭ್ಯ ಮಾಹಿತಿಯ ಪ್ರಕಾರ, ಪ್ಯಾನ್  ಮತ್ತು ಆಧಾರ್ ಅನ್ನು ಲಿಂಕ್ ಮಾಡಲು ಇದು ಕೊನೆಯ ಅವಕಾಶ ಎನ್ನಲಾಗಿದೆ. ಸರ್ಕಾರ ಇನ್ನು ಈ ಗಡುವನ್ನು ವಿಸ್ತರಿಸುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Written by - Ranjitha R K | Last Updated : Apr 12, 2021, 03:48 PM IST
  • ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ
  • ಪ್ಯಾನ್, ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದಲ್ಲಿ ತೆರಬೇಕಾಗುತ್ತದೆ ಭಾರೀ ದಂಡ
  • ಪ್ಯಾನ್, ಆಧಾರ್ ಲಿಂಕ್ ಪ್ರಕ್ರಿಯೆ ಬಹಳ ಸರಳ
PAN-Aadhaar ಲಿಂಕ್ ಆಗಿಲ್ಲವಾದರೆ ತಕ್ಷಣ ಮಾಡಿಕೊಳ್ಳಿ.. ಇಲ್ಲವಾದರೆ ಬೀಳಲಿದೆ ದಂಡ..! title=
ಪ್ಯಾನ್, ಆಧಾರ್ ಲಿಂಕ್ ಪ್ರಕ್ರಿಯೆ ಬಹಳ ಸರಳ (file photo)

ನವದೆಹಲಿ: PAN-Aadhaar Link:ಪ್ಯಾನ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿದ್ದೀರಾ? ಇಲ್ಲ ಎಂದಾದರೆ ತಡ ಮಾಡಬೇಡಿ. ಒಂದು ವೇಳೆ, ಪ್ಯಾನ್ ಮತ್ತು ಆಧಾರ್ ಕಾರ್ಡ್ (Aadhaar) ಅನ್ನು ಲಿಂಕ್ ಮಾಡಿಲ್ಲ ಎಂದಾದರೆ ಭಾರಿ ಬೆಲೆ ತೆರಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಬೇಕಾದರೆ ಪ್ಯಾನ್ ಆಧಾರ್ ಲಿಂಕ್ ಮಾಡುವುದು ಅನಿವಾರ್ಯ. ಅಲ್ಲದೆ ನಿಗದಿತ ಸಮಸಯದೊಳಗೆ ಪ್ಯಾನ್ ಆಧಾರ್ ಲಿಂಕ್ ಆಗಿಲ್ಲ ಎಂದಾದರೆ ನಿಮ್ಮ ಪ್ಯಾನ್ ಕಾರ್ಡ್ (PAN CARD)ನಿಷ್ಕ್ರಿಯಗೊಳ್ಳಲಿದೆ. 

ಲಭ್ಯ ಮಾಹಿತಿಯ ಪ್ರಕಾರ, ಪ್ಯಾನ್ (PAN) ಮತ್ತು ಆಧಾರ್ ಅನ್ನು ಲಿಂಕ್ ಮಾಡಲು ಇದು ಕೊನೆಯ ಅವಕಾಶ ಎನ್ನಲಾಗಿದೆ. ಸರ್ಕಾರ ಇನ್ನು ಈ ಗಡುವನ್ನು ವಿಸ್ತರಿಸುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ನಿಗದಿತ ಸಮಯದ ನಂತರವೂ ಪ್ಯಾನ್, ಆಧಾರ್ ಲಿಂಕ್ (PAN Aadhaar Link) ಮಾಡದೇ ಹೋದಲ್ಲಿ ಸರ್ಕಾರ ದಂಡ ವಿಧಿಸಲಿದೆ.   

ಇದನ್ನೂ ಓದಿ : Public Provident Fund: ಪಿಪಿಎಫ್‌ನಲ್ಲಿ ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿ, 26 ಲಕ್ಷ ರೂ. ಗಳಿಸಿ

'ನಿಷ್ಕ್ರಿಯ' ಗೊಳ್ಳಲಿದೆ ಪ್ಯಾನ್ : 
ಪ್ಯಾನ್ ಅನ್ನು ಆಧಾರ್ ಗೆ ಲಿಂಕ್ ಮಾಡುವ ಕಾರ್ಯಕ್ಕೆ ನೀಡುವ ಗಡುವನ್ನೇನು ಸರ್ಕಾರ ವಿಸ್ತರಿಸಿದೆ. ಆದರೆ ಆ ಸಮಯದ ಒಳಗೆ ಕೂಡಾ ಲಿಂಕ್ ಮಾಡಿಲ್ಲವಾದರೆ ನಿಮ್ಮ ಪ್ಯಾನ್ ಕಾರ್ಡ್ 'ನಿಷ್ಕ್ರಿಯ' ಆಗಿರುತ್ತದೆ. ಮಾತ್ರವಲ್ಲ, ಆದಾಯ ತೆರಿಗೆ (Income tax) ಕಾಯ್ದೆಯ ಸೆಕ್ಷನ್ 272 ಬಿ ಅಡಿಯಲ್ಲಿ 10,000 ರೂ.ಗಳ ದಂಡವನ್ನು ಕೂಡಾ ಪಾವತಿಸಬೇಕಾಗಬಹುದು.

ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದೆಯೇ ಎನ್ನುವುದನ್ನು ಹೀಗೆ ಚೆಕ್ ಮಾಡಿ : 

ಮೊದಲನೆಯದ್ದು  ಐಟಿ ವೆಬ್‌ಸೈಟ್ ಮೂಲಕ : 
ಆದಾಯ ತೆರಿಗೆ ಅಧಿಕೃತ ವೆಬ್‌ಸೈಟ್ www.incometaxindiaefiling.gov.in/aadhaarstatus ಲಿಂಕ್‌ಗೆ ಭೇಟಿ ನೀಡಿ
ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಇಲ್ಲಿ ಹಾಕಿ
'View Link Aadhaar Status' ಮೇಲೆ ಕ್ಲಿಕ್ ಮಾಡಿ
ಇಲ್ಲಿ ನಿಮ್ಮ ಪ್ಯಾನ್  ಮತ್ತು ಆಧಾರ್ ಲಿಂಕ್ ಆಗಿದೆಯೇ ಎಂಬುದು ನಿಮಗೆ ತಕ್ಷಣ ತಿಳಿಯುತ್ತದೆ.

ಇದನ್ನೂ ಓದಿ : Gold Rate: ಚಿನ್ನ ಕೊಳ್ಳಬೇಕೆ ಹಾಗಿದ್ರೆ, ಇಲ್ಲಿದೆ ಇಂದಿನ ಬಂಗಾರದ ಬೆಲೆ..!

ಎರಡನೇಯದ್ದು - SMS ಮೂಲಕ : 
ಎಸ್‌ಎಂಎಸ್ (SMS) ಮೂಲಕ ಕೂಡಾ ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್‌ ಆಗಿದೆಯೋ ಇಲ್ಲವೋ ಎನ್ನುವುದನ್ನು ತಿಳಿಯಬಹುದು . 
-SMS - UIDPAN <12 ಅಂಕೆಯ ಆಧಾರ್> <10 ಅಂಕಿಯ ಪ್ಯಾನ್>ಟೈಪ್ ಮಾಡಿ 
-ಈ ಎಸ್‌ಎಂಎಸ್ ಅನ್ನು 567678 ಅಥವಾ 56161 ಗೆ ಕಳುಹಿಸಿ 
ಇವೆರಡೂ ಲಿಂಕ್ ಆಗಿದ್ದರೆ  "Aadhaar...is already associated with PAN..in ITD database. Thank you for using our services." ಎಂಬ ಮೆಸೇಜ್ ಬರುತ್ತದೆ. 

 ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿರದಿದ್ದರೆ ಅದನ್ನು ಲಿಂಕ್  ಮಾಡುವ ಪ್ರಕ್ರಿಯೆ ಕೂಡ ಸರಳವಾಗಿದೆ. 

SMS ಮೂಲಕ ಆಧಾರ್-ಪ್ಯಾನ್ ಲಿಂಕ್ ಮಾಡುವುದು ಹೇಗೆ ?  
SMS ಮೂಲಕ ಆಧಾರ್-ಪ್ಯಾನ್ ಲಿಂಕ್ ಮಾಡಲು ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಯಿಂದ UIDPAN <12-digit Aadhaar> <10-digit PAN> ಟೈಪ್ ಮಾಡಿ  567678 ಅಥವಾ  56161 ಸಂಖ್ಯೆಗೆ ಸಂದೇಶ ಕಳುಹಿಸಿ. ಬಳಿಕ ನಿಮ್ಮ ಪ್ಯಾನ್ ಸಂಖ್ಯೆ ನಿಮ್ಮ ಆಧಾರ್ ಸಂಖ್ಯೆಯ ಜೊತೆಗೆ ಲಿಂಕ್ ಆಗಿರುವ ಸೂಚನೆ ನಿಮಗೆ ಸಿಗಲಿದೆ.

ಇದನ್ನೂ ಓದಿ : Post Office scheme: ಪೋಸ್ಟ್ ಆಫೀಸ್ ಈ ಯೋಜನೆಯಿಂದ ನೀವು ಗಳಿಸಬಹುದು ₹ 10 ಲಕ್ಷ : ಹೇಗೆ ಇಲ್ಲಿದೆ!

ವೆಬ್ಸೈಟ್ ಮೂಲಕ ಲಿಂಕ್ ಮಾಡುವುದು ಹೇಗೆ? 
-ಇದಕ್ಕಾಗಿ ಮೊದಲು ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ https://incometaxindiaefiling.gov.in ಭೇಟಿ ನೀಡಬೇಕು. 
-ಇಲ್ಲಿ ನಿಮ್ಮ ಮುಂದೆ ಹೋಮ್ ಪೇಜ್ ತೆರೆದುಕೊಳ್ಳಲಿದೆ.
-ಈ ಹೋಮ್ ಪೇಜ್ ನಲ್ಲಿ ನಿಮಗೆ Link Aadhaar ಮೇಲೆ ಕ್ಲಿಕ್ಕಿಸಿ.
-ಇದಾದ ಬಳಿಕ ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಇತರೆ ಆವಶ್ಯಕ ಮಾಹಿತಿ ನಮೂದಿಸುವ ಆಯ್ಕೆ  ಕಾಣಿಸಲಿದೆ.
-ಸಂಪೂರ್ಣ ಮಾಹಿತಿ ತುಂಬಿದ ಬಳಿಕ ಕ್ಯಾಪ್ಚಾ ಕೋಡ್ ನಮೂದಿಸಿ. ಲಿಂಕ್ ಆಧಾರ್ ಮೇಲೆ ಕ್ಲಿಕ್ಕಿಸಿ. 
-ಈ ವಿಧಾನ ಪೂರ್ಣಗೊಳ್ಳುತ್ತಲೇ ನಿಮ್ಮ ಮುಂದೆ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆದ ಸೂಚನೆ ಸಿಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News