ಬೆಂಗಳೂರು : PM kisan Man dhan Yojna: ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳಿಗೆ ಸಿಹಿಸುದ್ದಿಯಿದೆ. ಈ ಯೋಜನೆಯಡಿ ರೈತರು ಪ್ರತಿ ತಿಂಗಳು 3000 ರೂಪಾಯಿಗಳನ್ನು ಪಡೆಯಬಹುದು. ಅಲ್ಲದೆ ಇದಕ್ಕಾಗಿ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ. ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ (PM Kisan Yojana)  ಇಲ್ಲಿಯವರೆಗೆ ರೈತರು ವಾರ್ಷಿಕವಾಗಿ  6000 ರೂಪಾಯಿಗಳನ್ನು  2,000 ರೂಗಳಂತೆ ಮೂರು ಕಂತುಗಳಲ್ಲಿ ಪಾವತಿಸುತ್ತಿದೆ. ಆದರೆ ಈಗ ಈ ಯೋಜನೆಯಡಿ ವಾರ್ಷಿಕವಾಗಿ 36000 ರೂ.ಗಳನ್ನೂ ನೀಡುತ್ತಿದೆ. 


COMMERCIAL BREAK
SCROLL TO CONTINUE READING

ವಾರ್ಷಿಕವಾಗಿ ಸಿಗಲಿದೆ 36000 ರೂ. :
ಪಿಎಂ ಕಿಸಾನ್ ಮಾನ್ ಧನ್ ಯೋಜನೆ (PM kisan Man dhan Yojna) ಅಡಿಯಲ್ಲಿ ರೈತರಿಗೆ ಪ್ರತಿ ತಿಂಗಳು ಪಿಂಚಣಿ ನೀಡಲಾಗುತ್ತದೆ. ಈ ಯೋಜನೆಯಡಿ, 60 ವರ್ಷ ವಯಸ್ಸಿನ ನಂತರ, ರೈತರಿಗೆ ಪ್ರತಿ ತಿಂಗಳು 3000 ರೂ. ಪಿಂಚಣಿ (Pension) ನೀಡಲಾಗುತ್ತದೆ. ಅಂದರೆ ವರ್ಷಕ್ಕೆ 36000 ರೂ. ಪಾವತಿಸಿದಂತಾಗುತ್ತದೆ.  ರೈತರಿಗೆ ಆರ್ಥಿಕ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ (Central government Scheme).


ಇದನ್ನೂ ಓದಿ : ಹೀಗೆ ಮಾಡಿದರೆ ವಿದ್ಯುತ್ ಇಲ್ಲದೆಯೇ ನಡೆಯುತ್ತದೆ AC-Cooler, ಹಿತವಾಗಿರಲಿದೆ ಬೇಸಿಗೆ


ಅಗತ್ಯ ದಾಖಲೆಗಳು :
ಕೇಂದ್ರ ಸರ್ಕಾರವು ನಡೆಸುತ್ತಿರುವ ಈ ಯೋಜನೆಯ ಲಾಭ ಪಡೆಯಲು, ಕೆಲವು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆಧಾರ್ ಕಾರ್ಡ್ (Aadhaar Card), ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕಾಗುತ್ತದೆ.  ಆದರೆ ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದರೆ (PM Kisan Benefits), ಇದಕ್ಕಾಗಿ  ಯಾವುದೇ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. 18 ವರ್ಷದಿಂದ 40 ವರ್ಷದೊಳಗಿನ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರಲ್ಲಿ ವಯಸ್ಸಿಗೆ ಅನುಗುಣವಾಗಿ ಹೂಡಿಕೆ ಮೊತ್ತವನ್ನು ನಿಗದಿಪಡಿಸಲಾಗಿದೆ. 


ಈ ಯೋಜನೆಯ ಲಾಭ ಯಾರಿಗೆ ಸಿಗಲಿದೆ?
1. ಈ ಯೋಜನೆಯ ಲಾಭವನ್ನು 18 ರಿಂದ 40 ವರ್ಷಗಳವರೆಗೆ ಯಾವುದೇ ರೈತರು ತೆಗೆದುಕೊಳ್ಳಬಹುದು.
2. ಸಾಗುವಳಿ ಭೂಮಿ   ಗರಿಷ್ಠ 2 ಹೆಕ್ಟೇರ್ ವರೆಗೆ ಇರಬೇಕು.
3. ಇದರಲ್ಲಿ, ಕನಿಷ್ಠ 20 ವರ್ಷ ಮತ್ತು ಗರಿಷ್ಠ 40 ವರ್ಷಗಳವರೆಗೆ ರೈತರು ರೈತರ ವಯಸ್ಸಿಗೆ ಅನುಗುಣವಾಗಿ ಮಾಸಿಕ  55 ರೂ ಯಿಂದ  200 ರೂ ವರೆಗೆ ಹೂಡಿಕೆ ಮಾಡಬೇಕಾಗುತ್ತದೆ.
4. 18 ನೇ ವಯಸ್ಸಿನಲ್ಲಿ ಸೇರುವ ರೈತರು ಮಾಸಿಕ 55 ರೂ.ಗಳ ಕೊಡುಗೆಯನ್ನು ಪಾವತಿಸಬೇಕಾಗುತ್ತದೆ.
5. ರೈತರ ವಯಸ್ಸು 30 ವರ್ಷವಾಗಿದ್ದರೆ, ಅವರು 110 ರೂ. ಪಾವತಿಸಬೇಕಾಗುತ್ತದೆ
6. 40 ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿಕೊಂಡರೆ, ಪ್ರತಿ ತಿಂಗಳು 200 ರೂ. ಪಾವತಿಸಬೇಕಾಗುತ್ತದೆ


ಇದನ್ನೂ ಓದಿ : Arecanut Price: ರಾಜ್ಯದಲ್ಲಿ ರಾಶಿ ಅಡಿಕೆಗೆ ಬಂಪರ್ ಬೆಲೆ, ಇಂದಿನ ಧಾರಣೆ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.