ಬೆಂಗಳೂರು : ಬೇಸಿಗೆ ಕಾಲ ಬರುತ್ತಿದೆ. ಬೇಸಿಗೆಯಲ್ಲಿ ಮಧ್ಯಾಹ್ನದ ವೇಳೆ ಬಿಸಿಯ ಧಗೆ ತಡೆಯುವುದು ಬಹಳ ಕಷ್ಟ. ಬೇಸಿಗೆ ಬಂತೆಂದರೆ ವಿದ್ಯುತ್ ವ್ಯತ್ಯಯ ಕೂಡಾ ಹೆಚ್ಚು (Summer tricks). ವಿದ್ಯುತ್ ಕೈಕೊಟ್ಟ ತಕ್ಷಣ ಫ್ಯಾನ್, ಕೂಲರ್, ಎಸಿ ಎಲ್ಲವು ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತವೆ (AC-Cooler without Electricity). ಈ ಸಮಸ್ಯೆ ನೀಗಿಸಲು ಜನರು ಇನ್ವರ್ಟರ್ ಮತ್ತು ಜನರೇಟರ್ ಗಳ ಮೊರೆ ಹೋಗುತ್ತಾರೆ. ಆದರೆ ದೀರ್ಘ ಕಾಲದವರೆಗೆ ವಿದ್ಯುತ್ ಇಲ್ಲದೆ ಹೋದಾಗ ಇನ್ವರ್ಟರ್ ಅನ್ನು ಚಾರ್ಜ್ ಮಾಡುವುದು ಕೂಡಾ ಬಹಳ ಕಷ್ಟ. ಇನ್ನು ತೈಲ ಇಲ್ಲದೆ ಜನರೇಟರ್ ನಡೆಯುವುದಿಲ್ಲ. ಆದರೆ ಈಗ ಮಾರುಕಟ್ಟೆಗೆ ಬಂದಿರುವ ಜನರೇಟರ್ ಅನ್ನು ಮನೆಯಲ್ಲಿ ಎಲ್ಲಿ ಬೇಕಾದರೂ ಇಟ್ಟುಕೊಳ್ಳಬಹುದು (Generator) . ಮಾತ್ರವಲ್ಲ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ತೆಗೆದುಕೊಂಡು ಕೂಡಾ ಹೋಗಬಹುದು.
ಸೌರಶಕ್ತಿ ಚಾಲಿತ ಜನರೇಟರ್ :
SARRVAD ಕ್ಯಾಂಪಿಂಗ್ ಸೌರ ಚಾಲಿತ ಜನರೇಟರ್ S-150 ಬೆಲೆ :
SARRVAD ಕ್ಯಾಂಪಿಂಗ್ ಸೌರ ಚಾಲಿತ ಜನರೇಟರ್ S-150 ಅನ್ನು Amazon ನಿಂದ ಖರೀದಿಸಬಹುದು. ಇದರ ಬೆಲೆಯೂ ತುಂಬಾ ಕಡಿಮೆ (SARRVAD Camping Solar Powered Generator S-150 Price). ಈ ಸೌರಶಕ್ತಿಯ ಜನರೇಟರ್ ಅನ್ನು ಕೇವಲ 16 ಸಾವಿರ ರೂಪಾಯಿಗಳಿಗೆ ಖರೀದಿಸಬಹುದು. ಬಜೆಟ್ ಕಡಿಮೆಯಿದ್ದರೆ, ಇದನ್ನು ಮಾಸಿಕ ಕಂತುಗಳಲ್ಲಿ ಖರೀದಿಸಬಹುದು. ಮಾಸಿಕ ಕಂತಿನಲ್ಲಿ ಖರೀದಿಸಿದರೆ ತಿಂಗಳಿಗೆ ಕೇವಲ ಸಾವಿರ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ : ನಿಮ್ಮ ವೇತನದಲ್ಲಿ ₹20,484 ಏರಿಕೆ, ಮಾರ್ಚ್ 16 ರಂದು ಪ್ರಕಟ!
SARRVAD ಕ್ಯಾಂಪಿಂಗ್ ಸೌರ ಚಾಲಿತ ಜನರೇಟರ್ S-150 ನ ವೈಶಿಷ್ಟ್ಯಗಳು :
SARRVAD ಕ್ಯಾಂಪಿಂಗ್ ಸೌರ ಚಾಲಿತ ಜನರೇಟರ್ S-150 ಹೆಚ್ಚಿನ ವೇಗದ ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿರುತ್ತದೆ. ಇದು 42000mAh ಬ್ಯಾಟರಿಯನ್ನು ಹೊಂದಿದೆ. ಇದು ಎಲೆಕ್ಟ್ರಾನಿಕ್ ಉಪಕರಣಗಳಿಗೆ ಶಕ್ತಿಯನ್ನು ನೀಡುತ್ತದೆ. ಇದು ಫೋನ್ಗಳು, ಟ್ಯಾಬ್ಲೆಟ್ಗಳು, ಲ್ಯಾಪ್ಟಾಪ್ಗಳು (laptop), ರೇಡಿಯೋಗಳು, ಫ್ಯಾನ್ಗಳು, ಟಿವಿಗಳು (Tv)ಮಾತ್ರವಲ್ಲದೆ ದೊಡ್ಡ ಉಪಕರಣಗಳನ್ನು ಸಹ ರನ್ ಮಾಡುತ್ತದೆ.
SARRVAD ಕ್ಯಾಂಪಿಂಗ್ ಸೌರ ಚಾಲಿತ ಜನರೇಟರ್ S-150 ಅನ್ನು ಸೂರ್ಯನ ಬೆಳಕಿನಿಂದ ಚಾರ್ಜ್ ಮಾಡಲಾಗುತ್ತದೆ :
ಇದು ಸೌರ ವಿದ್ಯುತ್ ಜನರೇಟರ್ ಆಗಿದೆ. ಅಂದರೆ, ಇದನ್ನು ಸೂರ್ಯನ ಬೆಳಕಿನಿಂದ ಚಾರ್ಜ್ ಮಾಡಬಹುದು (Solar Generator). ಇದರೊಂದಿಗೆ, ಜನರೇಟರ್ನಲ್ಲಿ 2 ವೋಲ್ಟ್ ಗಳ ಅಲ್ಟ್ರಾ ಬ್ರೈಟ್ ಎಲ್ಇಡಿ ಸಹ ಲಭ್ಯವಿರುತ್ತದೆ. ಹಾಗಾಗಿ ಇದನ್ನು ಕತ್ತಲೆಯಲ್ಲಿಯೂ ಬಳಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ : SBI Offer: ಎಸ್ಬಿಐ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ 2 ಲಕ್ಷ ರೂ.ಗಳ ಲಾಭ, ಕೇವಲ ಈ ಕೆಲಸ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.