FD Rate: ಸ್ಥಿರ ಠೇವಣಿಗಳ ಮೇಲೆ ಈ ಹಣಕಾಸು ಸಂಸ್ಥೆಗಳಿಂದ ಶೇ.8.75ರಷ್ಟು ಬಡ್ಡಿ ಪಾವತಿ!
Senior Citizen FD Rate: RBI ರೆಪೋ ದರವನ್ನು ಹೆಚ್ಚಿಸಿದ ನಂತರ ಅನೇಕ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFCs), FD ಗಳ ಬಡ್ಡಿದರಗಳನ್ನು ಹೆಚ್ಚಿಸಿವೆ. ಹಿರಿಯ ನಾಗರಿಕರಿಗೆ ಎಫ್‌ಡಿ ಮಾಡಲು ವಿಶೇಷ ಕೊಡುಗೆ ಇದೆ.
Senior Citizen FD Rate: RBI ರೆಪೋ ರೇಟ್ ಹೆಚ್ಚಿಸಿದ ನಂತರ, ಅನೇಕ ಬ್ಯಾಂಕೇತರ ಹಣಕಾಸು ಕಂಪನಿಗಳು (NBFC ಗಳು) FD ಯ ಬಡ್ಡಿದರಗಳನ್ನು ಹೆಚ್ಚಿಸಿವೆ. ಅನೇಕ ಕಂಪನಿಗಳು ಸಾಮಾನ್ಯ ಗ್ರಾಹಕರು ಹಾಗೂ ಹಿರಿಯ ನಾಗರಿಕರಿಗೆ ಬಡ್ಡಿದರವನ್ನು ಹೆಚ್ಚಿಸಿವೆ. ಪ್ರಸ್ತುತ ಸ್ಥಿರ ಠೇವಣಿಗಳ ಮೇಲೆ ಶೇ.8% ರಿಂದ ಶೇ.8.75 ರಷ್ಟು ಬಡ್ಡಿಯನ್ನು ನೀಡುತ್ತಿರುವ ಕೆಲವು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.
ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಶೇ.8.75ರಷ್ಟು ಬಡ್ಡಿ ನೀಡುತ್ತಿದೆ
ಈ ತಿಂಗಳ ಆಗಸ್ಟ್ 10 ರಂದು ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ತನ್ನ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿದರಗಳನ್ನು ಹೆಚ್ಚಿಸಿದೆ. ಇದೀಗ ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಸಾಮಾನ್ಯ ನಾಗರಿಕರಿಗೆ 8.25% ಮತ್ತು ಹಿರಿಯ ನಾಗರಿಕರಿಗೆ 8.75% ರಷ್ಟು ಹೆಚ್ಚಿನ ಬಡ್ಡಿಯನ್ನು ನೀಡುತ್ತಿದೆ. ಕಂಪನಿಯು 5 ವರ್ಷಗಳ ಮ್ಯಾಚ್ಯುರಿಟಿ ಇರುವ FD ಗಳಲ್ಲಿ ಈ ಬಡ್ಡಿಯನ್ನು ಪಾವತಿಸುತ್ತಿದೆ. ಅಲ್ಲದೆ, ಕಂಪನಿಯು ಸಾಮಾನ್ಯ ಗ್ರಾಹಕರಿಗಿಂತ ಹಿರಿಯ ನಾಗರಿಕರಿಗೆ ಶೇ.0.50 ರಷ್ಟು ಹೆಚ್ಚುವರಿ ಬಡ್ಡಿಯನ್ನು ನೀಡುತ್ತಿದೆ.
ಇದನ್ನೂ ಓದಿ-ವಾಟ್ಸಾಪ್ನಲ್ಲಿ SBI ಬ್ಯಾಂಕಿಂಗ್ ಸೇವೆ : ಅಕೌಂಟ್ ಬ್ಯಾಲೆನ್ಸ್, ಮಿನಿ ಸ್ಟೇಟ್‌ಮೆಂಟ್ ಪರಿಶೀಲಿಸಿ
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ FD ಮೇಲೆ 8.25% ವರೆಗೆ ಬಡ್ಡಿಯನ್ನು ನೀಡುತ್ತಿದೆ
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಆಗಸ್ಟ್ 12 ರಿಂದ ಹೆಚ್ಚಿಸಿದೆ. ಮೆಚ್ಯೂರಿಟಿಯಲ್ಲಿ 700 ದಿನಗಳಿಂದ 5 ವರ್ಷಗಳವರೆಗಿನ ಅವಧಿಗೆ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿದೆ. ಬ್ಯಾಂಕ್ ಇದೀಗ ಸಾಮಾನ್ಯ ನಾಗರಿಕರಿಗೆ 7.50% ಬಡ್ಡಿಯನ್ನು ಪಾವತಿಸುತ್ತಿದ್ದರೆ, ಹಿರಿಯ ನಾಗರಿಕರಿಗೆ 75 ಬೇಸಿಸ್ ಪಾಯಿಂಟ್ ಹೆಚ್ಚುವರಿ ಅಂದರೆ 8.25% ರಷ್ಟು ಪಾವತಿಸುತ್ತದೆ. ಯಾವುದೇ ಕಾಲದಲ್ಲಿ ಹಿರಿಯ ನಾಗರಿಕರು ಸಾಮಾನ್ಯ ಗ್ರಾಹಕರಿಂದ ಹೆಚ್ಚುವರಿ 75 ಬೇಸಿಸ್ ಪಾಯಿಂಟ್‌ಗಳು ಅಥವಾ ಶೇಕಡಾ 0.75 ಬಡ್ಡಿಯನ್ನು ಪಡೆಯುತ್ತಾರೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ-Post Office ಗ್ರಾಹಕರಿಗೆ ಸಿಹಿ ಸುದ್ದಿ : ಕೇವಲ ₹1500 ಠೇವಣಿ ಮಾಡಿದ್ರೆ 35 ಲಕ್ಷ ಲಾಭ
ಜನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 8.15% ಬಡ್ಡಿಯನ್ನು ನೀಡುತ್ತಿದೆ
ಜನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕೂಡ ತನ್ನ ಸ್ಥಿರ ಠೇವಣಿಗಳ (ಎಫ್‌ಡಿ) ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಬ್ಯಾಂಕ್ ಇದೀಗ ಸಾಮಾನ್ಯ ನಾಗರಿಕರಿಗೆ 7.35% ಮತ್ತು ಹಿರಿಯ ನಾಗರಿಕರಿಗೆ 8.15% ರಷ್ಟು ಬಡ್ಡಿಯನ್ನು 3 ದಿನಗಳಿಂದ 5 ವರ್ಷಗಳವರೆಗಿನ ಅವಧಿಗೆ ಮಾಡಿದ FD ಗಳಿಗೆ ಪಾವತಿಸುತ್ತಿದೆ. ಜನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲಿನ ಬಡ್ಡಿದರವನ್ನು 80 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇದರಿಂದ ಹಿರಿಯ ನಾಗರಿಕರಿಗೂ ಸಾಕಷ್ಟು ಅನುಕೂಲವಾಗಲಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.