ನವದೆಹಲಿ: ನೀವು ಒಳ್ಳೆಯ ಕಡೆ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಇಲ್ಲಿದೆ ಸಿಹಿಸುದ್ದಿ. ಕಳೆದ 9 ತಿಂಗಳಲ್ಲಿ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರ ಹೆಚ್ಚಿಸಿದ ನಂತರ, ಬ್ಯಾಂಕ್‌ಗಳು ಸಹ ಬಡ್ಡಿ ದರವನ್ನು ಹೆಚ್ಚಿಸಿವೆ. ಆದರೆ ರೆಪೋ ದರ ಹೆಚ್ಚಿಸಿದಷ್ಟು ಬಡ್ಡಿ ದರವನ್ನು ಕೆಲವು ಬ್ಯಾಂಕ್‍ಗಳು ಹೆಚ್ಚಿಸಿಲ್ಲ. ಈಗ ಗ್ರಾಹಕರಿಗೆ ಲಾಭವನ್ನು ನೀಡುತ್ತಿರುವ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ FD ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ.


COMMERCIAL BREAK
SCROLL TO CONTINUE READING

ಸಾಮಾನ್ಯ ಗ್ರಾಹಕರಿಗೆ ಶೇ.9ರಷ್ಟು ಬಡ್ಡಿ 


ಯೂನಿಟಿ ಬ್ಯಾಂಕ್ ನೀಡಿದ ಮಾಹಿತಿಯಲ್ಲಿ, ಬ್ಯಾಂಕ್ ಈಗ ಹಿರಿಯ ನಾಗರಿಕರಿಗೆ 1,001 ದಿನಗಳ ಎಫ್‌ಡಿಯಲ್ಲಿ ಶೇ.9.50ರಷ್ಟು ಆಕರ್ಷಕ ಬಡ್ಡಿ ನೀಡುತ್ತದೆ ಎಂದು ಹೇಳಲಾಗಿದೆ. ಸಾಮಾನ್ಯ ಗ್ರಾಹಕರು ಈ ಅವಧಿಗೆ ಮಾತ್ರ ಬ್ಯಾಂಕ್ ಪರವಾಗಿ ಶೇ.9ರಷ್ಟು ಬಡ್ಡಿಯನ್ನು ಪಾವತಿಸಲು ಕೇಳಲಾಗಿದೆ. ಯೂನಿಟಿ ಬ್ಯಾಂಕ್‌ನಿಂದ 181 ದಿನಗಳಿಂದ 201 ದಿನಗಳವರೆಗೆ FDಗಳ ಮೇಲೆ ಶೇ.8.75ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ.


ಇದನ್ನೂ ಓದಿ: Senior Citizens : ಹಿರಿಯ ನಾಗರಿಕರರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್..!


7-14 ದಿನಗಳ FDಗಳ ಮೇಲೆ ಶೇ.4.50ರಷ್ಟು ಬಡ್ಡಿ


1002 ದಿನಗಳಿಂದ 5 ವರ್ಷಗಳವರೆಗೆ ಮುಕ್ತಾಯಗೊಳ್ಳುವ FDಗಳ ಮೇಲಿನ ಬಡ್ಡಿ ದರವನ್ನು ಶೇ.7.65ರಷ್ಟಕ್ಕೆ ಬ್ಯಾಂಕ್ ಹೆಚ್ಚಿಸಿದೆ. ಯೂನಿಟಿ ಬ್ಯಾಂಕ್ 7-14 ದಿನಗಳ FDಗಳ ಮೇಲೆ ಶೇ.4.50ರಷ್ಟು ಬಡ್ಡಿಯನ್ನು ಪಾವತಿಸುತ್ತದೆ. 15 ದಿನಗಳಿಂದ 45 ದಿನಗಳ FDಗಳ ಮೇಲೆ ಯೂನಿಟಿ ಬ್ಯಾಂಕ್ ಶೇ.4.75ರಷ್ಟು ಬಡ್ಡಿ ನೀಡುತ್ತಿದೆ. 46 ರಿಂದ 60 ದಿನಗಳ FDಗಳ ಮೇಲೆ ಶೇ.5.25ರಷ್ಟು ಬಡ್ಡಿ ಪಡೆಯಬಹುದು. ಅದೇ ರೀತಿ 61 ದಿನಗಳಿಂದ 90 ದಿನಗಳವರೆಗೆ FDಗಳ ಮೇಲೆ ಶೇ.5.50ರ ದರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ.   


ಬ್ಯಾಂಕ್ 181-201 ದಿನಗಳು ಮತ್ತು 501 ದಿನಗಳ FDಗಳಲ್ಲಿ ಹಿರಿಯ ನಾಗರಿಕರಿಗೆ ಶೇ.9.25ರಷ್ಟು ಮತ್ತು ಸಾಮಾನ್ಯ ಗ್ರಾಹಕರಿಗೆ ಶೇ.8.75ರಷ್ಟು ಬಡ್ಡಿಯನ್ನು ಪಾವತಿಸುತ್ತಿದೆ. 5 ವರ್ಷದಿಂದ 10 ವರ್ಷಗಳವರೆಗಿನ FDಗಳಲ್ಲಿ ಹಿರಿಯ ನಾಗರಿಕರಿಗೆ ಶೇ.7.50ರಷ್ಟು ಮತ್ತು ಸಾಮಾನ್ಯ ಗ್ರಾಹಕರಿಗೆ ಶೇ.7ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ ಎಂದು ಬ್ಯಾಂಕ್ ಘೋಷಿಸಿದೆ.


ಇದನ್ನೂ ಓದಿ: SBI ಪ್ರಸ್ತುತಪಡಿಸಿದೆ ಒಂದು ಜಬರ್ದಸ್ತ್ ಯೋಜನೆ, ಹೂಡಿಕೆಯ ಮೇಲೆ ಶೇ.7.6 ರಷ್ಟು ಬಡ್ಡಿಯ ಲಾಭ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.