SBI ಪ್ರಸ್ತುತಪಡಿಸಿದೆ ಒಂದು ಜಬರ್ದಸ್ತ್ ಯೋಜನೆ, ಹೂಡಿಕೆಯ ಮೇಲೆ ಶೇ.7.6 ರಷ್ಟು ಬಡ್ಡಿಯ ಲಾಭ!

SBI Scheme: ಭಾರತೀಯ ಸ್ಟೇಟ್ ಬ್ಯಾಂಕ್ 'ಅಮೃತ ಕಲಶ ಡೆಪಾಸಿಟ್' ಹೆಸರಿನಡಿ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ಬ್ಯಾಂಕ್ ಜಬರ್ದಸ್ತ್ ಬಡ್ಡಿಯ ಲಾಭ ತನ್ನ ಗ್ರಾಹಕರಿಗೆ ನೀಡುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹೆಚ್ಚಿನ ಬಡ್ಡಿ ದರಗಳೊಂದಿಗೆ ಹೊಸ ವಿಶೇಷ FD ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯು ಸಾಮಾನ್ಯ ವರ್ಗದ ಹೂಡಿಕೆದಾರರು ಮತ್ತು ಹಿರಿಯ ನಾಗರಿಕರಿಗೆ ಲಭ್ಯವಿದೆ.  

Written by - Nitin Tabib | Last Updated : Feb 17, 2023, 05:08 PM IST
  • ಈ ಯೋಜನೆಯು ಸಾಮಾನ್ಯ ವರ್ಗದ ಹೂಡಿಕೆದಾರರು ಮತ್ತು ಹಿರಿಯ ನಾಗರಿಕರಿಗೆ ಲಭ್ಯವಿದೆ.
  • ಆದರೆ, ಇದೊಂದು ಸೀಮಿತ ಅವಧಿಯ ಕೊಡುಗೆಯಾಗಿದ್ದು,
  • ಮುಂದಿನ ತಿಂಗಳಾಂತ್ಯದವರೆಗೆ ಮಾತ್ರ ಇದು ಗ್ರಾಹಕರಿಗೆ ಹೂಡಿಕೆಗೆ ಅವಕಾಶ ಕಲ್ಪಿಸಲಿದೆ.
SBI ಪ್ರಸ್ತುತಪಡಿಸಿದೆ ಒಂದು ಜಬರ್ದಸ್ತ್ ಯೋಜನೆ, ಹೂಡಿಕೆಯ ಮೇಲೆ ಶೇ.7.6 ರಷ್ಟು ಬಡ್ಡಿಯ ಲಾಭ! title=
ಭಾರತೀಯ ಸ್ಟೇಟ್ ಬ್ಯಾಂಕ್ ಹೊಸ ಎಫ್ ಡಿ ಯೋಜನೆ

SBI New Scheme: ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಉಳಿತಾಯದ ಮೇಲೆ ಹಲವು ರೀತಿಯ ಕೊಡುಗೆಗಳನ್ನು ನೀಡುತ್ತದೆ. ಇದರ ಸಹಾಯದಿಂದ ಜನರು ತಮ್ಮ ಹಣವನ್ನು ಬ್ಯಾಂಕ್‌ಗಳಲ್ಲಿ ವಿವಿಧ ಯೋಜನೆಗಳಲ್ಲಿ ಠೇವಣಿ ಮಾಡಬಹುದು ಮತ್ತು ಅದರ ಮೇಲೆ ಉತ್ತಮ ಆದಾಯ ಪಡೆಯಬಹುದು. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಅದರಲ್ಲಿ ಗ್ರಾಹಕರಿಗೆ ಅತ್ಯುತ್ತಮ ಬಡ್ಡಿ ಲಾಭ ನೀಡುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹೆಚ್ಚಿನ ಬಡ್ಡಿ ದರಗಳೊಂದಿಗೆ ಹೊಸ ವಿಶೇಷ FD ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯು ಸಾಮಾನ್ಯ ವರ್ಗದ ಹೂಡಿಕೆದಾರರು ಮತ್ತು ಹಿರಿಯ ನಾಗರಿಕರಿಗೆ ಲಭ್ಯವಿದೆ. ಆದರೆ, ಇದೊಂದು ಸೀಮಿತ ಅವಧಿಯ ಕೊಡುಗೆಯಾಗಿದ್ದು, ಮುಂದಿನ ತಿಂಗಳಾಂತ್ಯದವರೆಗೆ ಮಾತ್ರ ಇದು ಗ್ರಾಹಕರಿಗೆ ಹೂಡಿಕೆಗೆ ಅವಕಾಶ ಕಲ್ಪಿಸಲಿದೆ.

ಅಮೃತ ಕಲಶ ಠೇವಣಿ
ಎಸ್‌ಬಿಐ ಆರಂಭಿಸಿರುವ ಈ ಹೊಸ ಎಫ್‌ಡಿ ಯೋಜನೆಯ ಹೆಸರು ಅಮೃತ್ ಕಲಶ ಠೇವಣಿ. ಈ ಯೋಜನೆಯಲ್ಲಿ ಆಕರ್ಷಕ ಬಡ್ಡಿ ದರ, 400 ದಿನಗಳ ಅವಧಿ ಮತ್ತು ಹೆಚ್ಚಿನ ಲಾಭ ನೀಡಲಾಗುತ್ತಿದೆ. ದೇಶೀಯ ಮತ್ತು ಎನ್‌ಆರ್‌ಐ ಗ್ರಾಹಕರಿಗಾಗಿ ಈ "ಅಮೃತ್ ಕಲಶ ಠೇವಣಿ" ಯೋಜನೆಯನ್ನು ಪರಿಚಯಿಸಲಾಗಿದೆ.

ಅರ್ಹತೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೊಸ 400 ದಿನಗಳ FD ದೇಶೀಯ ಮತ್ತು NRI ಗ್ರಾಹಕರಿಗೆ ಲಭ್ಯವಿದೆ. ಇಬ್ಬರೂ ಗ್ರಾಹಕರು ಈ ಯೋಜನೆಯ ಲಾಭವನ್ನು ಪಡೆಯಬಹುದು.

ಮಾನ್ಯತೆ
ಈ ಹೊಸ ಠೇವಣಿ ಯೋಜನೆಯು ಫೆಬ್ರವರಿ 15, 2023 ರಿಂದ ಮಾರ್ಚ್ 31, 2023 ರವರೆಗೆ ಮಾನ್ಯವಾಗಿರುತ್ತದೆ. ಈ ಅವಧಿಯಲ್ಲಿ ಜನರು ಈ ಯೋಜನೆಯನ್ನು ಪ್ರಾರಂಭಿಸಬಹುದು.

ಬಡ್ಡಿ ದರ
ಅಮೃತ್ ಕಲಶ ಠೇವಣಿಯು ಹಿರಿಯ ನಾಗರಿಕರಿಗೆ ಶೇಕಡಾ 7.6 ಬಡ್ಡಿಯನ್ನು ನೀಡುತ್ತದೆ. ಇದಲ್ಲದೇ ಇತರ ನಾಗರಿಕರಿಗೆ ಶೇ.7.1ರ ಬಡ್ಡಿ ದರವನ್ನು ನೀಡುತ್ತದೆ.

ಅಧಿಕಾರಾವಧಿ
ಹೊಸ ಎಫ್‌ಡಿ ಯೋಜನೆಯು 400 ದಿನಗಳವರೆಗೆ ಇರುತ್ತದೆ. ಅಂದರೆ, ಈ ಯೋಜನೆಯು 400 ದಿನಗಳ ಬಳಿಕ ಪರಿಪಕ್ವವಾಗಲಿದೆ

ಇದನ್ನೂ ಓದಿ-Karnataka Budget 2023: ಈ ಬಾರಿಯ ಬಜೆಟ್ ನಲ್ಲಿ ಪರಿಶಿಷ್ಟ ಜಾತಿ-ಪಂಗಡದವರಿಗೆ ಸಿಕ್ಕಿದ್ದೇನು?

ಬಡ್ಡಿ ಪಾವತಿ
ಇನ್ನೊಂದೆಡೆ ಎಸ್‌ಬಿಐನ ಈ ಯೋಜನೆಯಲ್ಲಿ, ಯೋಜನೆಯ ಮ್ಯಾಚುರಿಟಿ ಬಳಿಕ ನಿಮಗೆ ಬಡ್ಡಿಯನ್ನು ಪಾವತಿಸಲಾಗುವುದು.

ಇದನ್ನೂ ಓದಿ-Karnataka Budget 2023: ಈ ಬಾರಿಯ ಬಜೆಟ್ ನಲ್ಲಿ ಯಾವ ಇಲಾಖೆಗೆ ಸಿಕ್ಕಿದೆಷ್ಟು?

ಟಿಡಿಎಸ್
ಈ ಯೋಜನೆಯಲ್ಲಿ ಟಿಡಿಎಸ್ ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಅನ್ವಯವಾಗಲಿದೆ.

ಇದನ್ನೂ ಓದಿ-ಇನ್ಮುಂದೆ ನೀವು ನಿಮ್ಮ ಕೂದಲುಗಳಿಂದಲೂ ಆದಾಯ ಗಳಿಸಬಹುದು, ತಿಂಗಳಿಗೆ ರೂ. 25,000 ಗಳಿಸುವ ಐಡಿಯಾ ಇಲ್ಲಿದೆ!

ಅಕಾಲಿಕ ವಾಪಸಾತಿ
ಯಾರಾದರೂ ಈ ಯೋಜನೆಯಲ್ಲಿ ಅಕಾಲಿಕವಾಗಿ ತಮ್ಮ ಹಣವನ್ನು ಹಿಂಪಡೆಯಲು ಬಯಸಿದರೆ, ಅವರು ಹಾಗೆ ಮಾಡಬಹುದು. ಹೊಸ ಅಮೃತ ಕಲಶ ಠೇವಣಿಗಳ ಮೇಲೆ ಅವಧಿಪೂರ್ವ ಹಿಂಪಡೆಯುವಿಕೆ ಮತ್ತು ಸಾಲ ಸೌಲಭ್ಯವೂ ಲಭ್ಯವಿರುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News