February 2024 Rule Changes: ಎನ್ಪಿಎಸ್ ನಿಂದ ಹಿಡಿದು ಫಾಸ್ಟ್ ಟ್ಯಾಗ್ ವರೆಗೆ ಫೆಬ್ರುವರಿ ತಿಂಗಳಿನಲ್ಲಾಗಲಿವೆ ಈ 5 ಪ್ರಮುಖ ಬದಲಾವಣೆಗಳು!
February 2024 Rule Changes: ಇಂದಿನ ದಿನ ಸೇರಿದಂತೆ ಮುಂದಿನ ನಾಲ್ಕು ದಿನಗಳ ಬಳಿಕ ಹೊಸ ತಿಂಗಳು ಅಂದರೆ ಫೆಬ್ರವರಿ ಆರಂಭವಾಗಲಿದೆ. ವರ್ಷದ ಹೊಸ ತಿಂಗಳು ಕೂಡ ಕೆಲವು ಬದಲಾವಣೆಗಳನ್ನು ಹೊತ್ತು ತಂದಿತ್ತು. ಫೆಬ್ರವರಿ 2024 ರಲ್ಲಿ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ನೇರ ಪ್ರಭಾವವನ್ನು ಬೀರಲಿವೆ. (Business News In Kannada)
ನವದೆಹಲಿ: ಇಂದಿನ ದಿನ ಸೇರಿದಂತೆ ಮುಂದಿನ ನಾಲ್ಕು ದಿನಗಳ ಬಳಿಕ ಹೊಸ ತಿಂಗಳು ಅಂದರೆ ಫೆಬ್ರವರಿ ಆರಂಭವಾಗಲಿದೆ. ವರ್ಷದ ಹೊಸ ತಿಂಗಳು ಕೂಡ ಕೆಲವು ಬದಲಾವಣೆಗಳನ್ನು ಹೊತ್ತು ತಂದಿತ್ತು. ಫೆಬ್ರವರಿ 2024 ರಲ್ಲಿ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ನೇರ ಪ್ರಭಾವವನ್ನು ಬೀರಲಿವೆ. (Business News In Kannada)
ಮುಂದಿನ ತಿಂಗಳು ನಡೆಯುವ ಈ ಬದಲಾವಣೆಗಳ ಬಗ್ಗೆ ನೀವೂ ಕೂಡ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಮುಂದಿನ ತಿಂಗಳಿನಿಂದ, ಎನ್‌ಪಿಎಸ್‌ನಿಂದ ಎಸ್‌ಬಿಐ ವಿಶೇಷ ಗೃಹ ಸಾಲ ಅಭಿಯಾನ, ಸಾವರಿನ್ ಗೋಲ್ಡ್ ಬಾಂಡ್ ಯೋಜನೆಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳು ನಡೆಯಲಿವೆ. ಮುಂದಿನ ತಿಂಗಳ 1 ರಿಂದ ಜಾರಿಗೆ ಬರಲಿರುವ ಆ ನಿಯಮಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ಫಾಸ್ಟ್ಯಾಗ್ ನಿಯಮಗಳನ್ನು ಬದಲಾಯಿಸುವ ಮೂಲಕ NHAI KYC ಅನ್ನು ಕಡ್ಡಾಯಗೊಳಿಸಲಿದೆ. KYC ಮಾಡದಿದ್ದರೆ ಫೆಬ್ರವರಿ 1 ರಿಂದ ಬ್ಯಾಂಕ್‌ಗಳು ಫಾಸ್ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಲಿವೆ ಮತ್ತು ಕಪ್ಪುಪಟ್ಟಿಗೆ ಸೇರಿಸಲಿವೆ. ಈ ರೀತಿಯಾಗಿ, ಫಾಸ್ಟ್ಯಾಗ್‌ನಲ್ಲಿ KYC ಪೂರ್ಣಗೊಳ್ಳದ ವಾಹನಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. KYC ಅನ್ನು ಪೂರ್ಣಗೊಳಿಸಲು ಜನವರಿ 31 ಕೊನೆಯ ದಿನಾಂಕವಾಗಿದೆ.
ಫೆಬ್ರವರಿ 1 ರಿಂದ IMPS ನಿಯಮಗಳಲ್ಲಿ ಬದಲಾವಣೆಯಾಗಲಿದೆ. IMPS ಒಂದು ಸೇವೆಯಾಗಿದ್ದು, ಇದರಿಂದ ಒಂದು ಬ್ಯಾಂಕ್ ನಿಂದ ಕೆಲವೇ ನಿಮಿಷಗಳಲ್ಲಿ ಇನ್ನೊಂದು ಬ್ಯಾಂಕ್‌ಗೆ ಹಣವನ್ನು ಕಳುಹಿಸಬಹುದು. ಫೆಬ್ರವರಿ 1 ರಿಂದ, ಒಬ್ಬ ವ್ಯಕ್ತಿಯು ಯಾವುದೇ ಫಲಾನುಭವಿಯ ಹೆಸರನ್ನು ಸೇರಿಸದೆಯೇ 5 ಲಕ್ಷದವರೆಗೆ ಹಣವನ್ನು ವರ್ಗಾಯಿಸಲು ಸಾಧ್ಯವಾಗಲಿದೆ. ಇದಕ್ಕಾಗಿ ಎನ್‌ಪಿಸಿಐ ಅಕ್ಟೋಬರ್ 31ರಂದು ಸುತ್ತೋಲೆ ಹೊರಡಿಸಿತ್ತು.
ಇದನ್ನೂ ಓದಿ-Cashew City Of Jharkhand: ₹1000 ಪ್ರತಿ ಕೆಜಿ ಮಾರಾಟವಾಗುವ ಗೋಡಂಬಿಯನ್ನು ಇಲ್ಲಿ ನೀವು ₹30 ಕೆಜಿ ಖರೀದಿಸಬಹುದು!
ಮುಂದಿನ ತಿಂಗಳು ನೀವು ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆ ಮಾಡಲು ಸಾಧ್ಯವಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ SGB 2023-24 ಸರಣಿ IV ನ್ನು ಜಾರಿಗೊಳಿಸಲಿದೆ. ನೀವು 12 ಫೆಬ್ರವರಿಯಿಂದ 16 ಫೆಬ್ರವರಿ 2024 ರವರೆಗೆ ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆ ಮಾಡಲು ಸಾಧ್ಯವಾಗಲಿದೆ.
ಇದನ್ನೂ ಓದಿ-Union Budget 2024: ದೇಶಾದ್ಯಂತದ ರೈತ ಬಾಂಧವರಿಗೊಂದು ಸಂತಸದ ಸುದ್ದಿ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗಾಗಿ ವಿಶೇಷ ಗೃಹ ಸಾಲ ಅಭಿಯಾನವನ್ನು ನಡೆಸುತ್ತಿದೆ. ಇದರ ಅಡಿಯಲ್ಲಿ, ಗ್ರಾಹಕರು ಗೃಹ ಸಾಲದ ಮೇಲೆ 65 ಬೇಸಿಸ್ ಪಾಯಿಂಟ್‌ಗಳ ವಿಶೇಷ ರಿಯಾಯಿತಿಯನ್ನು ಪಡೆಯಬಹುದು. ಸಂಸ್ಕರಣಾ ಶುಲ್ಕದ ಮೇಲಿನ ರಿಯಾಯಿತಿಯ ಪ್ರಯೋಜನವೂ ಲಭ್ಯವಿದೆ. ಈ ಅಭಿಯಾನ ಜನವರಿ 31ಕ್ಕೆ ಮುಕ್ತಾಯವಾಗಲಿದ್ದು. ಅಂದರೆ ಫೆಬ್ರವರಿ 1ರಿಂದ ಮನೆ ಖರೀದಿಗೆ ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ