ನವದೆಹಲಿ: ಶೀಘ್ರದಲ್ಲೇ ನಿಮ್ಮ ತಟ್ಟೆಯಲ್ಲಿ 'ಭಾರತ್ ಚಾವಲ್' ನಿಂದ ತಯಾರಿಡಲಾದ ಅನ್ನ ಬಡಿಸಲಾಗುವುದು ಎಂದು NAFED ಇಂಡಿಯಾ ಟ್ವೀಟ್ ಮಾಡಿದೆ. ಮೋದಿ ಸರ್ಕಾರ ಬಡವರಿಗಾಗಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇದರ ಅಡಿಯಲ್ಲಿ ಭಾರತ್ ರೈಸ್ ಕೆಜಿಗೆ 25 ರೂ.ಗೆ ಮಾತ್ರ ಮಾರಾಟವಾಗಲಿದೆ. ಇದಲ್ಲದೇ ಬೇಳೆಕಾಳುಗಳನ್ನೂ ಸಹ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎನ್ನಲಾಗಿದೆ. ಹೆಚ್ಚುತ್ತಿರುವ ಆಹಾರ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ-Union Budget 2024: ಶ್ರೀಸಾಮಾನ್ಯರಿಗೊಂದು ಸಂತಸದ ಸುದ್ದಿ, ದ್ವಿಗುಣವಾಗಲಿದೆ ಈ ಸರ್ಕಾರಿ ಯೋಜನೆಯ ಮಿತಿ!
ಹಿಟ್ಟು ಮತ್ತು ಕಾಳುಗಳು ಮೊದಲಿಗಿಂತ ಅಗ್ಗದ ದರದಲ್ಲಿ ಸಿಗಲಿದೆ.
'ಭಾರತ್ ಚಾವಲ್' ಅನ್ನು NAFED, ನ್ಯಾಷನಲ್ ಕೋ-ಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ ಆಫ್ ಇಂಡಿಯಾ (NCCF) ಮತ್ತು ಕೇಂದ್ರೀಯ ಭಂಡಾರ್‌ನಂತಹ ಕೇಂದ್ರೀಯ ಮಳಿಗೆಗಳ ಮೂಲಕ ಸರ್ಕಾರಿ ಸಂಸ್ಥೆಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಪ್ರಸ್ತುತ, ಭಾರತ್ ಗೋಧಿ ಹಿಟ್ಟು ಮತ್ತು ಚನಾ ದಾಲ್ ಅನ್ನು ರಿಯಾಯಿತಿ ದರದಲ್ಲಿ ಕೆಜಿಗೆ 27.50 ಮತ್ತು ಕೆಜಿಗೆ 60 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಗೋಧಿ ಹಿಟ್ಟು ಮತ್ತು ಚನಾ ದಾಲ್ ಅನ್ನು 2000 ಕ್ಕೂ ಹೆಚ್ಚು ಚಿಲ್ಲರೆ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ-Cashless Everywhere Campaign: ನೀವೂ ಕೂಡ ಆರೋಗ್ಯ ವಿಮೆ ಪಾಲಸಿ ಹೊಂದಿದ್ದೀರಾ? ಈ ಸಂತಸದ ಸುದ್ದಿ ತಪ್ಪದೆ ಓದಿ!
ಆಹಾರ ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿದೆ
ಆಹಾರ ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರ, ಅಕ್ಕಿ, ಕಾಳುಗಳು ಮತ್ತು ಹಿಟ್ಟನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ನಿರ್ಧಾರ ಬಂದಿದೆ. ಚಿಲ್ಲರೆ ಆಹಾರ ಹಣದುಬ್ಬರ ದರವು ಡಿಸೆಂಬರ್‌ನಲ್ಲಿ 9.53 ಪ್ರತಿಶತಕ್ಕೆ ಏರಿಕೆಯಾಗಿದ್ದು, ಇದು ನವೆಂಬರ್‌ನಲ್ಲಿ ಶೇ. 8.7 ರಷ್ಟಿತ್ತು. ಇನ್ನೊಂದೆಡೆ ಚಿಲ್ಲರೆ ಹಣದುಬ್ಬರ ದರ ಶೇ.5.69ರಷ್ಟಿತ್ತು.
'Bharat Chawal' is set to grace your tables soon.
Get ready to savor the journey of flavor and tradition!#NAFED #BharatChawal #LaunchingSoon #FarmersFirst #AgriculturalEmpowerment pic.twitter.com/0IqF0DQfLa— NAFED India (@nafedindia) January 26, 2024
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ