ಆನ್‌ಲೈನ್ ಪಾವತಿಯ ಬೆಳವಣಿಗೆಯ ಪ್ರವೃತ್ತಿಯ ನಡುವೆ, ಡಿಜಿಟಲ್ ಸಾಲದ ಅಪ್ಲಿಕೇಶನ್‌ಗಳ ಸಂಖ್ಯೆಯು ಬಹಳ ವೇಗವಾಗಿ ಹೆಚ್ಚುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಜನರು ಆನ್‌ಲೈನ್ ಅಪ್ಲಿಕೇಶನ್‌ಗಳಿಂದ ಸಾಲ ಪಡೆದು ನಂತರ ಪಶ್ಚಾತ್ತಾಪ ಪಡಬೇಕಾದ ಅನೇಕ ಪ್ರಕರಣಗಳು ಮುನ್ನೆಲೆಗೆ ಬಂದಿವೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Rahul Gandhi : ಮತ್ತೆ ಕಾಂಗ್ರೆಸ್ ಅಧ್ಯಕ್ಷ ಆಗ್ತಾರಾ ರಾಹುಲ್ ಗಾಂಧಿ? ಯಾಕೆ ಹೀಗೆ ಹೇಳಿದ್ದು


ಡಿಜಿಟಲ್ ಆಪ್ ಗಳ ಮೂಲಕ ಸಾಲ ನೀಡುವ ಅಕ್ರಮ ಕಂಪನಿಗಳು ಜನರಿಗೆ ಕಿರುಕುಳ ನೀಡಿವೆ. ಈ ಕಂಪನಿಗಳು ಸಾಲ ನೀಡಿ ಜನರನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತಿವೆ. ಸಾಲಬಾಧೆ ತಾಳಲಾರದೆ ಆತ್ಮಹತ್ಯೆಯಂತಹ ಹೆಜ್ಜೆ ಇಡಲು ಯತ್ನಿಸಿದಂತಹ ಅನೇಕ ಪ್ರಕರಣಗಳು ಕಳೆದ ಎರಡು ವರ್ಷಗಳಲ್ಲಿ ಮುನ್ನೆಲೆಗೆ ಬಂದಿವೆ. ಇದೀಗ ಈ ಸಮಸ್ಯೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧತೆ ನಡೆಸಿದೆ.


RBI ಅಥವಾ ಸರ್ಕಾರದಿಂದ ಅನುಮೋದನೆ:


ಪ್ಲೇ ಸ್ಟೋರ್‌ನಲ್ಲಿ ಅನೇಕ ಆನ್‌ಲೈನ್ ಸಾಲದ ಅಪ್ಲಿಕೇಶನ್‌ಗಳಿವೆ. ಈ ಆ್ಯಪ್‌ಗಳಲ್ಲಿ ಹೆಚ್ಚಿನವು ಆರ್‌ಬಿಐ ಅನುಮೋದನೆಯನ್ನು ಸಹ ಹೊಂದಿಲ್ಲ. ಜೊತೆಗೆ ಯಾವುದೇ ನೋಂದಣಿ ಇಲ್ಲದೆ ವರ್ಷಗಳಿಂದ ತಮ್ಮ ವ್ಯವಹಾರವನ್ನು ಮಾಡುತ್ತಿವೆ. ಈ ಕಂಪನಿಗಳು ಸಾಲ ನೀಡಿದ ನಂತರ ಗ್ರಾಹಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿವೆ. ಇದರಿಂದಾಗಿ ಹಲವರು ಅಸಮಾಧಾನಗೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಕಂಪನಿಗಳ ಕಿರುಕುಳದಿಂದ ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ.


ಹಣಕಾಸು ಸಚಿವಾಲಯ ಕ್ರಮ:


ಇತ್ತೀಚೆಗೆ ಹಣಕಾಸು ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಇದರಲ್ಲಿ ಎಲ್ಲಾ ಕಾನೂನು ಆ್ಯಪ್‌ಗಳ ಪಟ್ಟಿಯನ್ನು ಆರ್‌ಬಿಐ ಸಿದ್ಧಪಡಿಸಲಿದೆ ಎಂದು ನಿರ್ಧರಿಸಲಾಗಿದೆ. ಇದಲ್ಲದೇ, ಪ್ಲೇ ಸ್ಟೋರ್‌ನಲ್ಲಿ ಕಾನೂನು ಆ್ಯಪ್ ಅನ್ನು ಮಾತ್ರ ಇರಿಸಿಕೊಳ್ಳಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEIT) ಗೆ ಟಾಸ್ಕ್ ನೀಡಲಾಗಿದೆ. ಇದಲ್ಲದೆ, ಆರ್‌ಬಿಐ ಅಂತಹ ಖಾತೆಗಳ ಮೇಲೆ ನಿಗಾ ಇಡಲಿದ್ದು, ಇದನ್ನು ಮನಿ ಲಾಂಡರಿಂಗ್‌ಗೆ ಬಳಸಬಹುದು. 


ಇದನ್ನೂ ಓದಿ: 2024 Lok Sabha Election : 'ಮಿಷನ್ 2024'ಗೆ ಬಿಜೆಪಿಯಿಂದ 'Special 13' 


ಹಣಕಾಸು ಸಚಿವಾಲಯವು ಇತ್ತೀಚೆಗೆ ಹೇಳಿಕೆಯನ್ನು ನೀಡಿದ್ದು, ಆರ್‌ಬಿಐ ಪಾವತಿ 'ಅಗ್ರಿಗೇಟರ್‌ಗಳ' ನೋಂದಣಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು, ಅದರ ನಂತರ ಯಾವುದೇ ನೋಂದಾಯಿಸದ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸಲು ಅನುಮತಿಸುವುದಿಲ್ಲ ಎಂದು ತಿಳಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.