BJP New State Incharges : ಭಾರತೀಯ ಜನತಾ ಪಕ್ಷ (ಬಿಜೆಪಿ) ಮಿಷನ್ 2024 ಕ್ಕೆ ಭಾರಿ ತಯಾರಿ ನಡೆಸುತ್ತಿದೆ. ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಶುಕ್ರವಾರ ನೂತನ ರಾಜ್ಯ ಉಸ್ತುವಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಬಿಹಾರದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಹರೀಶ್ ದ್ವಿವೇದಿ ಅವರು ಮೊದಲಿನಂತೆ ಸಹ-ಪ್ರಭಾರಿ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಛತ್ತೀಸ್‌ಗಢದ ಉಸ್ತುವಾರಿಯಾಗಿ ಓಂ ಮಾಥುರ್ ಮತ್ತು ಸಹ ಉಸ್ತುವಾರಿ ನಿತಿನಿ ನಬಿನ್ ಅವರನ್ನು ನೇಮಿಸಲಾಗಿದೆ. ತ್ರಿಪುರಾ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಹರಿಯಾಣ, ಲಕ್ಷ್ಮೀಕಾಂತ್ ಬಾಜ್‌ಪೇಯ್ ಜಾರ್ಖಂಡ್ ಮತ್ತು ವಿನೋದ್ ಸೋಂಕರ್ ಅವರನ್ನು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಉಸ್ತುವಾರಿಯನ್ನಾಗಿ ಮಾಡಲಾಗಿದೆ.
ಇದನ್ನೂ ಓದಿ : Rahul Gandhi : ಮತ್ತೆ ಕಾಂಗ್ರೆಸ್ ಅಧ್ಯಕ್ಷ ಆಗ್ತಾರಾ ರಾಹುಲ್ ಗಾಂಧಿ? ಯಾಕೆ ಹೀಗೆ ಹೇಳಿದ್ದು
ಪ್ರಕಾಶ್ ಜಾವೇಡ್ಕರ್ ಅವರನ್ನು ಕೇರಳದ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ರಾಧಾ ಮೋಹನ್ ಅಗರ್ವಾಲ್ ಅವರಿಗೆ ಲಕ್ಷದ್ವೀಪದ ಉಸ್ತುವಾರಿ ಹಾಗೂ ಕೇರಳದ ಸಹ-ಪ್ರಭಾರಿ ಜವಾಬ್ದಾರಿಯನ್ನು ನೀಡಲಾಗಿದೆ. ಪಿ.ಮುರಳೀಧರ್ ರಾವ್ ಅವರನ್ನು ಮಧ್ಯಪ್ರದೇಶದ ಉಸ್ತುವಾರಿಯನ್ನಾಗಿ ಮಾಡಲಾಗಿದ್ದು, ಅವರೊಂದಿಗೆ ಇಬ್ಬರು ನಾಯಕರಾದ ಪಂಕಜಾ ಮುಂಡೆ ಮತ್ತು ರಾಮಶಂಕರ್ ಕಥೇರಿಯಾ ಅವರನ್ನು ರಾಜ್ಯ ಉಸ್ತುವಾರಿ ವಹಿಸಲಾಗಿದೆ.
ವಿಜಯ್ ಭಾಯ್ ರೂಪಾನಿ ಅವರನ್ನು ಪಂಜಾಬ್ ಮತ್ತು ಚಂಡೀಗಢದ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ನರೀಂದರ್ ಸಿಂಗ್ ರೈನಾ ಅವರನ್ನು ಪಂಜಾಬ್‌ನ ಸಹ-ಪ್ರಭಾರಿಯಾಗಿ ನೇಮಿಸಲಾಗಿದೆ. ತರುಣ್ ಚುಗ್ ಅವರು ತೆಲಂಗಾಣದ ಉಸ್ತುವಾರಿ ವಹಿಸಿಕೊಳ್ಳಲಿದ್ದು, ಅರವಿಂದ್ ಮೆನನ್ ಅವರನ್ನು ರಾಜ್ಯ ಸಹ-ಪ್ರಭಾರಿಯಾಗಿ ನೇಮಿಸಲಾಗಿದೆ. ಅರುಣ್ ಸಿಂಗ್ ಅವರು ರಾಜಸ್ಥಾನದ ಉಸ್ತುವಾರಿ ಜವಾಬ್ದಾರಿಯನ್ನು ಮೊದಲಿನಂತೆ ನಿರ್ವಹಿಸಲಿದ್ದು, ಅವರೊಂದಿಗೆ ವಿಜಯ ರಾಹತ್ಕರ್ ಅವರನ್ನು ಸಹ-ಪ್ರಭಾರಿಯಾಗಿ ನೇಮಿಸಲಾಗಿದೆ.
BJP appoints party's state incharges & co-incharges for states
Ex-Tripura CM Biplab Deb to be the incharge of Haryana,ex-Gujarat CM Vijay Rupani to be that of Punjab-Chandigarh, ex-Bihar Minister Mangal Pandey to be that of WB & Sambit Patra to be coordinator of northeast states pic.twitter.com/z80tMyGYQw
— ANI (@ANI) September 9, 2022
ಮಹೇಶ್ ಶರ್ಮಾ ಅವರನ್ನು ತ್ರಿಪುರಾ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಮಂಗಲ್ ಪಾಂಡೆ ಅವರನ್ನು ಉಸ್ತುವಾರಿ ಮಾಡುವ ಮೂಲಕ ಪಶ್ಚಿಮ ಬಂಗಾಳದ ಜವಾಬ್ದಾರಿಯನ್ನು ವಹಿಸಲಾಗಿದೆ. ಅಮಿತ್ ಮಾಳವೀಯ ಅವರು ಮೊದಲಿನಂತೆ ರಾಜ್ಯದ ಸಹ-ಪ್ರಭಾರಿಯಾಗಿ ಮುಂದುವರಿಯಲಿದ್ದಾರೆ ಮತ್ತು ಅವರ ಜೊತೆಗೆ ಆಶಾ ಲಾಕ್ರಾ ಅವರನ್ನು ಪಶ್ಚಿಮ ಬಂಗಾಳದ ಸಹ-ಪ್ರಭಾರಿಯಾಗಿ ಮಾಡಲಾಗಿದೆ. ಸಂಬಿತ್ ಪಾತ್ರ ಅವರನ್ನು ಈಶಾನ್ಯ ವಲಯದ ಸಂಚಾಲಕರನ್ನಾಗಿ ಮತ್ತು ರಿತುರಾಜ್ ಸಿನ್ಹಾ ಅವರನ್ನು ಸಹ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ : ಬ್ರಿಟನ್ ರಾಣಿ 2ನೇ ಎಲಿಜಬೆತ್ ನಿಧನ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸಂತಾಪ
ಈ ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳು ಹಾಗೂ 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯಲ್ಲಿ ಈ ದೊಡ್ಡ ಮತ್ತು ಮಹತ್ವದ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.