Gold ATM: ಇದು ಡಿಜಿಟಲ್ ಯುಗ. ಈ ಡಿಜಿಟಲ್ ಯುಗದಲ್ಲಿ ಎಲ್ಲವೂ ಆನ್ಲೈನ್ ಮೂಲಕವೇ ನಡೆಯುತ್ತದೆ. ಡಿಜಿಟಲ್ ಹಣ ವರ್ಗಾವಣೆಯು ಜನರಿಗೆ ಹಣ ಪಾವತಿಯನ್ನು ಸುಲಭಗೊಳಿಸಿದೆ. ವಾಸ್ತವವಾಗಿ, ಮೊದಲಿಗೆ ಜನರು ಹಣವನ್ನು ವರ್ಗಾಯಿಸುವ ಅಥವಾ ಹಣಕ್ಕಾಗಿ ಬ್ಯಾಂಕ್‌ಗೆ ಹೋಗುವ ಅಗತ್ಯತೆಯನ್ನು ಬಹುಮಟ್ಟಿಗೆ ಕಡಿಮೆ ಮಾಡಿದ್ದು ಎಟಿಎಂ. ಎಟಿಎಂ ಆಗಮನದೊಂದಿಗೆ ಜನರ ಬ್ಯಾಂಕಿಂಗ್ ವ್ಯವಹಾರಗಳು ಬಹಳ ಸುಲಭವಾಗಿದ್ದವು. ಅದನ್ನು ಇನ್ನಷ್ಟು ಸುಲಭಗೊಳಿಸಿದ್ದು ಡಿಜಿಟಲ್ ಪಾವತಿ ವ್ಯವಸ್ಥೆ. ಇದೀಗ, ಎಟಿಎಂ ಮೂಲಕ ನೀವು ಚಿನ್ನವನ್ನೂ ಖರೀದಿಸಬಹುದು ಎಂದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ವಿಶ್ವದ ಮೊದಲ ಚಿನ್ನದ ಎಟಿಎಂ:
ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಹೈದರಾಬಾದ್‌ನಲ್ಲಿ ಚಿನ್ನದ ಎಟಿಎಂ ಅನ್ನು ಬಿಡುಗಡೆ ಮಾಡಲಾಗಿದೆ. ಇದರ ವಿಶೇಷತೆ ಎಂದರೆ, ಈ ಎಟಿಎಂಗಳ ಮೂಲಕ ಗ್ರಾಹಕರು ಚಿನ್ನವನ್ನು ಖರೀದಿಸಬಹುದಾಗಿದೆ. ಆಭರಣ ತಯಾರಕ ಗೋಲ್ಡ್‌ಸಿಕ್ಕಾ, ಸ್ಟಾರ್ಟ್‌ಅಪ್‌ನ ಸಹಯೋಗದೊಂದಿಗೆ - ಓಪನ್‌ಕ್ಯೂಬ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ - "ಪ್ರಪಂಚದ ಮೊದಲ ನೈಜ-ಸಮಯದ ಚಿನ್ನದ ಎಟಿಎಂ" ಎಂದು ಹೆಸರಿಸಲಾದ ಚಿನ್ನದ ಎಟಿಎಂ ಅನ್ನು ಬಿಡುಗಡೆ ಮಾಡಿದೆ. 


ಇದನ್ನೂ ಓದಿ- ATM New Rules: ಈ ಸರ್ಕಾರಿ ಬ್ಯಾಂಕ್‌ ಗ್ರಾಹಕರು ಎಟಿಎಂನಲ್ಲಿ ಹಣ ಡ್ರಾ ಮಾಡುವ ಮುನ್ನ ಈ ಹೊಸ ನಿಯಮವನ್ನು ತಪ್ಪದೇ ಓದಿ


ಚಿನ್ನದ ಎಟಿಎಂ ಬಿಡುಗಡೆ ಬಳಿಕ ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಗೋಲ್ಡ್ ಸಿಕ್ಕಾ ಲಿಮಿಟೆಡ್, ನಾವು ಚಿನ್ನದ ಎಟಿಎಂ ಅನ್ನು ಯಶಸ್ವಿಯಾಗಿ ಪ್ರಾರಂಭಿಸಿದ್ದೇವೆ ಮತ್ತು ಈ ಸಾಧನೆಯ ಮೂಲಕ ಭಾರತವನ್ನು ಮತ್ತೆ ಚಿನ್ನದ ಹಕ್ಕಿಯನ್ನಾಗಿ ಮಾಡಲು ಮತ್ತು ಬಂಗಾರು ತೆಲಂಗಾಣದ ಮಿಷನ್ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ನಾವು ಹೆಮ್ಮೆಯಿಂದ ಘೋಷಿಸುತ್ತೇವೆ ಎಂದು ತಿಳಿಸಿದೆ.


ಗೋಲ್ಡ್ ಕಾಯಿನ್‌ನ ಉಪಾಧ್ಯಕ್ಷ ಪ್ರತಾಪ್, ಪ್ರತಿ ಗೋಲ್ಡ್ ಎಟಿಎಂ 5 ಕೆಜಿಯಷ್ಟು ಚಿನ್ನವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರ ಬೆಲೆ ಸುಮಾರು ಎರಡರಿಂದ ಮೂರು ಕೋಟಿ ರೂ.ಗಳಷ್ಟಿರುತ್ತದೆ. ಈ ಗೋಲ್ಡ್ ಎಟಿಎಂ ಯಂತ್ರವು 0.5 ಗ್ರಾಂನಿಂದ 100 ಗ್ರಾಂ ವರೆಗಿನ ನಾಣ್ಯಗಳನ್ನು ವಿತರಿಸುತ್ತದೆ. 0.5 ಗ್ರಾಂ ಸೇರಿದಂತೆ ಎಂಟು ಆಯ್ಕೆಗಳಲ್ಲಿ ನಾಣ್ಯಗಳು ಇದರಲ್ಲಿ ಲಭ್ಯವಿರುತ್ತವೆ. ಅವುಗಳೆಂದರೆ 0.5 ಗ್ರಾಂ, 1 ಗ್ರಾಂ, 2 ಗ್ರಾಂ, 5 ಗ್ರಾಂ, 10 ಗ್ರಾಂ, 20 ಗ್ರಾಂ, 50 ಗ್ರಾಂ ಮತ್ತು 100 ಗ್ರಾಂ ನಾಣ್ಯಗಳನ್ನು ಈ ಗೋಲ್ಡ್ ಎಟಿಎಂ ಮೂಲಕ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ- ಬೆಸ್ಟ್ 'Credit Card' ತೆಗೆದುಕೊಳ್ಳಲು ನಿಮಗೆ ಸಹಾಯವಾಗಲಿವೆ ಈ 7 ಟಿಪ್ಸ್!


ಗೋಲ್ಡ್ ಎಟಿಎಂನ ವಿಶೇಷತೆಗಳೇನು?
* ಗೋಲ್ಡ್ ಎಟಿಎಂನ ಪ್ರಮುಖ ವೈಶಿಷ್ಟ್ಯವೆಂದರೆ ದಿನದ 24 * 7 ಯಾರಾದರೂ ಎಲ್ಲಿಂದಲಾದರೂ ಯಂತ್ರದಿಂದ ಚಿನ್ನವನ್ನು ಪಡೆಯಬಹುದು.


* ಗೋಲ್ಡ್ ಎಟಿಎಂಗಳ ಮೂಲಕ ಚಿನ್ನವನ್ನು ಖರೀದಿಸಲು ಗ್ರಾಹಕರು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಹೊರತಾಗಿ, ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಸ್ಮಾರ್ಟ್ ಕಾರ್ಡ್‌ಗಳನ್ನು ಕೂಡ ಬಳಸಬಹುದಾಗಿದೆ.


* ಚಿನ್ನದ ಬೆಲೆ ನವೀಕರಣಗಳು ಲೈವ್ ಬೆಲೆಗಳನ್ನು ಆಧರಿಸಿವೆ.


* ಗುಣಮಟ್ಟದ ದೃಷ್ಟಿಯಿಂದ, ಎಲ್ಲಾ ಚಿನ್ನದ ನಾಣ್ಯಗಳು 24 ಕ್ಯಾರೆಟ್ ಚಿನ್ನ ಎಂದು ಹೇಳಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.