Budget 2023 : ಇಂದು ದೇಶದ ಬಜೆಟ್ ಮಂಡನೆಯಾಗಲಿದೆ. ಎಲ್ಲರ ನಿರೀಕ್ಷೆ ಕಣ್ಣುಗಳು ಈ ಬಾರಿಯ ಬಜೆಟ್‌ ಮೇಲೆ ನೆಟ್ಟಿದೆ. ಈ ಬಾರಿ ಹಣಕಾಸು ಸಚಿವರು ಯಾವ ಹೊಸ ಯೋಜನೆಗಳನ್ನು ತರುತ್ತಾರೆ ಎನ್ನುವತ್ತ ಎಲ್ಲರ ದೃಷ್ಟಿ ಹರಿದಿದೆ. ಪ್ರತಿ ಬಾರಿಯಂತೆ, ಈ ಬಾರಿಯೂ ಮಧ್ಯಮ ವರ್ಗದ ಕಣ್ಣುಗಳು ಆದಾಯ ತೆರಿಗೆ ವಿನಾಯಿತಿ ಮೇಲೆ ಕೇಂದ್ರೀಕೃತವಾಗಿವೆ. ಹಣಕಾಸು ಸಚಿವರು ಈ ಬಾರಿ ತೆರಿಗೆ ವಿನಾಯಿತಿಯನ್ನು ಘೋಷಿಸಬಹುದೇ? ಎನ್ನುವ ನಿರೀಕ್ಷೆ ಬಹುತೇಕರದ್ದು. ಇದೆಲ್ಲದರ ನಡುವೆ, ಆದಾಯ ತೆರಿಗೆ ಪಾವತಿಸದೆ ಇರುವ ಪ್ರದೇಶಗಳು ಕೂಡಾ ಇವೆ. ಈ ಐದು ದೇಶಗಳಲ್ಲಿ ಸರ್ಕಾರ ಜನರ ಮೇಲೆ ಆದಾಯ ತೆರಿಗೆ ವಿಧಿಸುವುದೇ ಇಲ್ಲ. 


COMMERCIAL BREAK
SCROLL TO CONTINUE READING

ಆದಾಯ ತೆರಿಗೆ ವಿಧಿಸದ ವಿಶ್ವದ 5 ದೇಶಗಳು : 
ಸೌದಿ ಅರೇಬಿಯಾದಲ್ಲಿ ಶೂನ್ಯ ತೆರಿಗೆ : 
ಸೌದಿ ಅರೇಬಿಯಾ ವಿಶ್ವದ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರವಾಗಿದೆ. ಇಲ್ಲಿನ ತೈಲ ವ್ಯಾಪಾರವು ಪ್ರಪಂಚದಾದ್ಯಂತ ಹರಡಿದೆ. ಇದರ ಮೂಲಕ  ಉತ್ತಮ ಆದಾಯವನ್ನು ಗಳಿಸುವುದು ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿ, ಸರ್ಕಾರವು ನಾಗರಿಕರ ಮೇಲೆ ಆದಾಯ ತೆರಿಗೆ ವಿಧಿಸುವುದಿಲ್ಲ. ಆದರೆ ಇಲ್ಲಿ ಸೋಶಿಯಲ್ ಸೆಕ್ಯೂರಿಟಿ ಪೇಮೆಂಟ್ ಮತ್ತು ಕ್ಯಾಪಿಟಲ್ ಗೇನ್ ತೆರಿಗೆಯನ್ನು ನಾಗರಿಕರಿಂದ  ಸಂಗ್ರಹಿಸಲಾಗುತ್ತದೆ. 


ಇದನ್ನೂ ಓದಿ : Budget 2023: ಬಜೆಟ್‌ ಬಳಿಕ ನಿಮ್ಮ Income Tax ಅನ್ನು ನೀವೇ ಹೀಗೆ ಲೆಕ್ಕ ಹಾಕಿ.! ಇಲ್ಲಿದೆ ಸಂಪೂರ್ಣ ಮಾಹಿತಿ


ಕತಾರ್‌ನಲ್ಲಿಯೂ ಆದಾಯ ತೆರಿಗೆ ಅನ್ವಯಿಸುವುದಿಲ್ಲ :
ಕತಾರ್ ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು. ಇಲ್ಲಿನ ಸರ್ಕಾರ ಕೂಡಾ  ತನ್ನ ಪ್ರಜೆಗಳಿಂದ ಯಾವುದೇ ರೀತಿಯ ತೆರಿಗೆಯನ್ನು ಸಂಗ್ರಹಿಸುವುದಿಲ್ಲ.   ಇಲ್ಲಿ ಕ್ಯಾಪಿಟಲ್ ಗೈನ್ ಮತ್ತು ಹಣ ಅಥವಾ ಆಸ್ತಿಯ ವರ್ಗಾವಣೆಯ ಸಂದರ್ಭದಲ್ಲಿ ಕೂಡಾ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಕತಾರ್ ಕೂಡ ತೈಲ ನಿಕ್ಷೇಪಗಳನ್ನು ಹೊಂದಿದೆ.


ಒಮಾನ್‌ನಲ್ಲಿ ತೆರಿಗೆ ಮುಕ್ತ ವ್ಯವಸ್ಥೆ :
ಒಮಾನ್ ತೈಲದ ದೊಡ್ಡ ಸಂಗ್ರಹವನ್ನು ಹೊಂದಿದೆ. ಈ ದೇಶ ಕೂಡಾ  ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು  ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ಇಲ್ಲಿ ಅಪಾರ ಪ್ರಮಾಣದ ತೈಲ ಸಂಗ್ರಹವೂ ಇದೆ. ಇದರಿಂದ ಸರ್ಕಾರಕ್ಕೆ ಸಾಕಷ್ಟು ಆದಾಯ ಬರುತ್ತಿದೆ. ಒಮಾನ್ ಸರ್ಕಾರ ತನ್ನ ನಾಗರಿಕರ ಮೇಲೆ ಆದಾಯ ತೆರಿಗೆಯನ್ನು ವಿಧಿಸದಿರುವುದಕ್ಕೆ ಇದೇ ಕಾರಣ. 


ಇದನ್ನೂ ಓದಿ : Budget 2023: ಬಜೆಟ್‌ಗಿಂತ ಮೊದಲು ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ವಿಷಯಗಳಿವು


ಕುವೈತ್‌ನಲ್ಲಿ ಆದಾಯ ತೆರಿಗೆ ವ್ಯವಸ್ಥೆ ಇಲ್ಲ: 
ಇಲ್ಲಿ ಸರ್ಕಾರವು ಆದಾಯ ತೆರಿಗೆಯ ಹೆಸರಿನಲ್ಲಿ ಯಾವುದೇ ದೇಶದವರಿಂದ ಯಾವುದೇ ರೀತಿಯ ಶುಲ್ಕವನ್ನು  ಸಂಗ್ರಹಿಸುವುದಿಲ್ಲ.  ಇಲ್ಲಿನ ನಾಗರಿಕರು ಆದಾಯ ತೆರಿಗೆಯಿಂದ ಮುಕ್ತ. ಆದರೆ ಇಲ್ಲಿ ಪ್ರತಿಯೊಬ್ಬ ದೇಶವಾಸಿಯೂ ಸಾಮಾಜಿಕ ವಿಮೆಗೆ ಕೊಡುಗೆ ನೀಡುವುದು ಅವಶ್ಯಕ.


ಬರ್ಮುಡಾದಲ್ಲಿ ಬೇರೆಯೇ ಲೆಕ್ಕಾಚಾರ :
ಬರ್ಮುಡಾ ಬಹಳ ಚಿಕ್ಕ ದೇಶವಾಗಿದೆ. ಇಲ್ಲಿ ಸರ್ಕಾರವು ವೇತನ ವೇಗದ ಮೇಲೆ 14 ಪ್ರತಿಶತದಷ್ಟು ಪೇ ರೋಲ್ ತೆರಿಗೆಯನ್ನು ವಿಧಿಸುತ್ತದೆ. ವೇತನದಾರರ ತೆರಿಗೆಯನ್ನು ಹೊರತುಪಡಿಸಿ, ಯಾವುದೇ ನಾಗರಿಕರ ಮೇಲೆ ಯಾವುದೇ ಆದಾಯ ತೆರಿಗೆ ವಿಧಿಸಲಾಗುವುದಿಲ್ಲ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.