Fixed Deposit ಹೊಂದಿದವರು ಜೂನ್ 30ರೊಳಗೆ ಈ ಫಾರ್ಮ್ ಸಲ್ಲಿಸಿ, ಇಲ್ಲದಿದ್ದರೆ ಹಾನಿ ತಪ್ಪಿದ್ದಲ್ಲ
Fixed Deposit: ಇತ್ತೀಚೆಗಷ್ಟೇ CBDT, ಸ್ಥಿರ ಠೇವಣಿಯಲ್ಲಿ ಹಣ ಹೂಡಿಕೆ ಮಾಡುವವರಿಗೊಂದು ಅಧಿಸೂಚನೆ ಜಾರಿಗೊಳಿಸಿದ್ದು, ಜೂನ್ 30ರೊಳಗೆ ಫಾರ್ಮ್ 15H ಹಾಗೂ ಫಾರ್ಮ್ 15G ಭರ್ತಿ ಮಾಡಲು ಸಲಹೆ ನೀಡಿದೆ. ಒಂದು ವೇಳೆ ನೀವು ಈ ರೀತಿ ಮಾಡದೆ ಹೋದಲ್ಲಿ ನಿಮ್ಮ ಹಣ ಕಡಿತವಾಗಲಿದೆ.
ನವದೆಹಲಿ: Fixed Deposit: ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಇತ್ತೀಚೆಗೆ ಹೊಸ ಅಧಿಸೂಚನೆ ಹೊರಡಿಸಿದೆ. ಇದರ ಅಡಿಯಲ್ಲಿ, ಸ್ಥಿರ ಠೇವಣಿ (FD) ಯಲ್ಲಿ ಹಣವನ್ನು ಹೂಡಿಕೆ ಮಾಡುವ ಜನರು ಜೂನ್ 30 ರೊಳಗೆ 15 ಜಿ ಮತ್ತು 15 ಹೆಚ್ ಫಾರ್ಮ್‌ಗಳನ್ನು ಸಲ್ಲಿಸಬೇಕು ಎಂದು ಸಲಹೆ ನೀಡಿದೆ. ಒಂದು ವೇಳೆ ಗ್ರಾಹಕರು ಈ ರೀತಿ ಮಾಡದೆ ಹೋದಲ್ಲಿ ಬ್ಯಾಂಕ್ ಅವರ ಹಣ ಕಡಿತಗೊಳಿಸಲಿದೆ ಎಂದು ಹೇಳಿದೆ.
FD ಹೂಡಿಕೆಗೆ ಈ ಫಾರ್ಮ್ ಗಳ ಸಂಬಂಧವೇನು?
ಆದರೆ, ಈ ಎರಡೂ ಫಾರ್ಮ್ ಹಾಗೂ FDಗೆ ಏನು ಸಂಬಂಧ? ಎಂಬುದು ಹಲವರ ಪ್ರಶ್ನೆಯಾಗಿರಬಹುದು. 15G ಹಾಗೂ 15H ಈ ಎರಡೂ ಫಾರ್ಮ್ ಗಳು FD ಜೊತೆಗೆ ನೇರ ಸಂಬಂಧಹೊಂದಿವೆ. ಇದರಿಂದ TDS(Tax Deduction at Source) ಕಡಿತದಲ್ಲಿ ಸಹಾಯ ಸಿಗುತ್ತದೆ. ಇಂದಿನ ದಿನಗಳಲ್ಲಿ ಜನರು ಉತ್ತಮ ಆದಾಯ ಹಾಗೂ ಹಾಗೂ ಆಕರ್ಷಕ ಬಡ್ಡಿ ಪಡೆಯಲು ಫಿಕ್ಸೆಡ್ ಡಿಪಾಸಿಟ್ ನಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಆದರೆ, FD ಮೇಲೆ ಸಿಗುವ ಆದಾಯಕ್ಕೆ ತೆರಿಗೆ (Income Tax) ಪಾವತಿಸಬೇಕಾಗುತ್ತದೆ. ಕೇಂದ್ರೀಯ ಬ್ಯಾಂಕ್ ಆಗಿರುವ RBI, ತೆರಿಗೆಗಾಗಿ ಒಂದು ಥ್ರಶ್ ಹೋಲ್ಡ್ ಮಿತಿಯನ್ನು ನಿರ್ಧರಿಸಿದೆ. ಈ ಮಿತಿಯನ್ನು ದಾಟಿದ ಬಳಿಕ TDS ಕಡಿತಗೊಳಿಸಲಾಗುತ್ತದೆ.
TDS ಆಪರ್ ಲಿಮಿಟ್ ಎಷ್ಟಾಗಿರುತ್ತದೆ
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ ಮೊದಲು TDS ಥ್ರಶ್ಹೋಲ್ಡ್ ಮಿತಿ ರೂ.10 ಸಾವಿರ ರೂ.ಗಳಾಗಿತ್ತು. ಅದನ್ನು ಈ ಆರ್ಥಿಕ ವರ್ಷದಲ್ಲಿ 40 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಆದರೆ, ಈ ಮಿತಿ ಕೇವಲ ಬ್ಯಾಂಕುಗಳು ಹಾಗೂ ಪೋಸ್ಟ್ ಆಫಿಸ್ ನಲ್ಲಿ ಮಾಡಲಾಗುವ ಹೂಡಿಕೆಗೆ ಸೀಮಿತವಾಗಿದೆ. ಒಂದು ವೇಳೆ ನೀವು ಈ TDS ಕಡಿತದಿಂದ ಪಾರಾಗಬೇಕು ಎಂದಾದರೆ 15G ಹಾಗೂ 15H ಫಾರ್ಮ್ ಗಳನ್ನು ಭರ್ತಿ ಮಾಡಬೇಕು. ಇದು ಕೂಡ ಆದಾಯ ತೆರಿಗೆಯ ಒಂದು ಭಾಗವಾಗಿದೆ.
ಫಾರ್ಮ್ 15 ತುಂಬುವ ಮೊದಲು ಈ ನಿಯಮಗಳು ನಿಮಗೆ ತಿಳಿದಿರಲಿ
ಆದಾಯದ ಮೇಲೆ TDS ಕಡಿತದಿಂದ ಪಾರಾಗಲು ಫಾರ್ಮ್ 15G ತುಂಬಬೇಕು. ಇದಕ್ಕಾಗಿ ಒಟ್ಟು ಐದು ಷರತ್ತುಗಳಿವೆ. ಈ ಷರತ್ತುಗಳ ಆಧಾರದ ಮೇಲೆ ನೀವು ಫಾರ್ಮ್ ಭರ್ತಿ ಮಾಡಬೇಕು. ಹಾಗಾದರೆ ಬನ್ನಿ ಆ ಐದು ನಿಯಮಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
- ಯಾವುದೇ ಭಾರತೀಯ ನಾಗರಿಕ ಅಥವಾ ಅವಿಭಕ್ತ ಹಿಂದೂ ಕುಟುಂಬ ಅಥವಾ ಟ್ರಸ್ಟ್ ಈ ಫಾರ್ಮ್ ಭರ್ತಿ ಮಾಡಬೇಕು.
- 60 ವಯಸ್ಸಿಗಿಂತ ಕೆಳಗಿನವರು ಈ ಫಾರ್ಮ್ ಭರ್ತಿ ಮಾಡಬೇಕು.
- ಕಂಪನಿ ಅಥವಾ ಸಂಸ್ಥೆಗಳಿಗೆ ಈ ಫಾರ್ಮ್ ಮಾನ್ಯತೆ ಇರುವುದಿಲ್ಲ.
- ಒಟ್ಟು ಆದಾಯದ ಮೇಲೆ ತೆರಿಗೆ ಪಾವತಿ ಶೂನ್ಯವಾಗಿರಬೇಕು.
- ಒಂದು ವರ್ಷದ ಬಡ್ಡಿಯಿಂದಾಗುವ ಆದಾಯ, ತೆರಿಗೆ ವಿನಾಯ್ತಿ ಮಿತಿಗಿಂತ ಕಡಿಮೆಯಾಗಿರಬೇಕು.
ಇದನ್ನೂ ಓದಿ-8th Pay Commission ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೊಂದು ಉಪಯುಕ್ತ ಮಾಹಿತಿ
15H ಫಾರ್ಮ್ ಭರ್ತಿ ಮಾಡುವ ಮುನ್ನ ಈ ಷರತ್ತು ಗಳು ನಿಮಗೆ ತಿಳಿದಿರಲಿ
TDS ಕಡಿತದಿಂದ ಪಾರಾಗಲು 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಈ ಫಾರ್ಮ್ ಭಾರ್ತಿ ಮಾಡಬೇಕು. ಆದರೆ, ಇದಕ್ಕೂ ಕೂಡ ಕೆಲ ಷರತ್ತುಗಳು ಅನ್ವಯಿಸುತ್ತವೆ. ಹಾಗಾದರೆ ಆ ಷರತ್ತುಗಳು ಯಾವುವು ತಿಳಿಯೋಣ ಬನ್ನಿ.
- ಯಾವುದೇ ಭಾರತೀಯ ನಾಗರಿಕರು ಈ ಫಾರ್ಮ್ ಭರ್ತಿ ಮಾಡಬಹುದು.
- ಫಾರ್ಮ್ ಭರ್ತಿ ಮಾಡುವ ವ್ಯಕ್ತಿಯ ಕನಿಷ್ಠ ವಯಸ್ಸು 60 ಆಗಿರಬೇಕು.
- ಒಟ್ಟು ಆದಾಯದ ಮೇಲೆ ಟ್ಯಾಕ್ ಪಾವತಿ ಶೂನ್ಯವಾಗಿರಬೇಕು.
ಇದನ್ನೂ ಓದಿ-Sovereign Gold Bond : ಕಡಿಮೆ ಬೆಲೆಯಲ್ಲಿ ಚಿನ್ನ ಖರೀದಿಸಲು ಇಲ್ಲಿದೆ ಅವಕಾಶ..!
ಫಾರ್ಮ್ ಭರ್ತಿ ಮಾಡುವಾಗ ಪ್ಯಾನ್ ಕಾರ್ಡ್ ಲಗತ್ತಿಸುವುದನ್ನು ಮರೆಯದಿರಿ
ಈ ಎರಡೂ ಫಾರ್ಮ್ ಗಳಲ್ಲಿ ನಿಮಗೆ ಸಂಬಂಧಿಸಿದ ಕೆಲ ಮೂಲ ಮಾಹಿತಿಗಳನ್ನು ಕೇಳಲಾಗುತ್ತದೆ. ಈ ಮಾಹಿತಿಗಳನ್ನು ತುಂಬಾ ಎಚ್ಚರಿಕೆಯಿಂದ ಭರ್ತಿ ಮಾಡಬೇಕು. ಫಾರ್ಮ್ ತುಂಬಿದ ಬಳಿಕ ಟ್ಯಾಕ್ಸ್ ಡಿಕ್ಲೆರೇಶನ್ ಜೊತೆಗೆ ನಿಮ್ಮ ಪ್ಯಾನ್ ಕಾರ್ಡ್ ನ ಪ್ರತಿಯನ್ನು ಲಗತ್ತಿಸಬೇಕು. ಇದಾದ ಬಳಿಕ ನೀವು ನಿಮ್ಮ ಫೈನಾನ್ಸಿಯರ್ ಬಳಿ ಈ ಫಾರ್ಮ್ ಅನ್ನು ಸಲ್ಲಿಸಬೇಕು. ಈ ಎರಡು ಫಾರ್ಮ್ ಗಳು ಕೇವಲ ಒಂದು ವರ್ಷದ ಮಾನ್ಯತೆಯನ್ನು ಹೊಂದಿರುತ್ತವೆ. ಆರ್ಥಿಕ ವರ್ಷದ ಆರಂಭದಲ್ಲಿಯೇ ಈ ಎರಡು ಫಾರ್ಮ್ ಗಳನ್ನು ನೀವು ಫೈನಾನ್ಸಿಯರ್ ಬಳಿ ಸಲ್ಲಿಸಬೇಕು. ಫಾರ್ಮ್ ಸಲ್ಲಿಸುವ ಮೊದಲು ನಿಮ್ಮ ಫೈನಾನ್ಸಿಯರ್ ನಿಮ್ಮ ತೆರಿಗೆಯನ್ನು ಕಡಿತಗೊಳಿಸಿಲ್ಲ ಎಂಬುದನ್ನು ಒಮ್ಮೆ ಸುನಿಶ್ಚಿತಗೊಳಿಸಿ. ಏಕೆಂದರೆ ಬ್ಯಾಂಕ್ ನಿಮಗೆ ನಂತರ ರಿಫಂಡ್ ಮಾಡುವುದಿಲ್ಲ. ಬ್ಯಾಂಕ್ ನಿಂದ TDS ಹಣವನ್ನು ವಾಪಸ್ ಪಡೆಯಲು ನೀವು ITR ದಾಖಲಿಸಬೇಕು.
ನಿಮ್ಮ SBI ಖಾತೆಯಿಂದಲು ಹಣ ಕಟ್ ಆಗಿದೆಯಾ? SBI ಗ್ರಾಹಕರು ಈ ಸುದ್ದಿ ತಪ್ಪದೆ ಓದಿಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.