Sovereign Gold Bond : ಕಡಿಮೆ ಬೆಲೆಯಲ್ಲಿ ಚಿನ್ನ ಖರೀದಿಸಲು ಇಲ್ಲಿದೆ ಅವಕಾಶ..!

ಬಾಂಡ್‌ ಖರೀದಿಸಲು ಆನ್‌ಲೈನ್‌ ಮೂಲಕ ಹಣ ಪಾವತಿಸುವವರಿಗೆ ಪ್ರತಿ ಗ್ರಾಂಗೆ ₹ 50ರಂತೆ ವಿನಾಯಿತಿ ಸಿಗಲಿದೆ. ಹೀಗಾಗಿ ಇಂತಹ ಹೂಡಿಕೆದಾರರಿಗೆ ನೀಡಿಕೆ ಬೆಲೆ ₹ 4,792 ಇರಲಿದೆ.

Last Updated : May 22, 2021, 05:54 PM IST
  • ಚಿನ್ನದ ಬಾಂಡ್‌ನ ಎರಡನೇ ಕಂತು ಸೋಮವಾರ ಆರಂಭವಾಗಲಿದೆ.
  • ಭಾರತೀಯ ರಿಸರ್ವ್ ಬ್ಯಾಂಕ್‌ ನೀಡಿಕೆ ಬೆಲೆಯನ್ನು ಪ್ರತಿ ಗ್ರಾಂಗೆ ₹ 4,842ರಷ್ಟು ನಿಗದಿಪಡಿಸಿದೆ.
  • ಬಾಂಡ್‌ ಖರೀದಿಸಲು ಆನ್‌ಲೈನ್‌ ಮೂಲಕ ಹಣ ಪಾವತಿಸುವವರಿಗೆ ಪ್ರತಿ ಗ್ರಾಂಗೆ ₹ 50
Sovereign Gold Bond : ಕಡಿಮೆ ಬೆಲೆಯಲ್ಲಿ ಚಿನ್ನ ಖರೀದಿಸಲು ಇಲ್ಲಿದೆ ಅವಕಾಶ..! title=

ನವದೆಹಲಿ : ಕೇಂದ್ರ ಸರ್ಕಾರವು 2021-22ರ ಸಾಲಿನ ಸಾವರಿನ್ ಗೋಲ್ಡ್ ಬಾಂಡಿನ (Sovereign Gold Bond) ಮೊದಲ ಸೀರಿಸ್ ಇಶ್ಯೂ ಪ್ರೈಸ್ ಜಾರಿ ಮಾಡಿದೆ. ಇದರ ಮೊದಲ ಕಂತಿನ ಖರೀದಿ ಮೇ 17ರಂದು ಆರಂಭವಾಗಿತ್ತು. ಮೇ 25, 2021ರಂದು ಅದರ ಸೆಟಲ್ ಮೆಂಟ್ ಆಗುತ್ತದೆ. ​ಚಿನ್ನದ ಬಾಂಡ್‌ನ ಎರಡನೇ ಕಂತು ಸೋಮವಾರ ಆರಂಭವಾಗಲಿದೆ. ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್‌ (RBI) ನೀಡಿಕೆ ಬೆಲೆಯನ್ನು ಪ್ರತಿ ಗ್ರಾಂಗೆ ₹ 4,842ರಷ್ಟು ನಿಗದಿಪಡಿಸಿದೆ.

ಬಾಂಡ್‌ ಖರೀದಿಸಲು ಆನ್‌ಲೈನ್‌(Online Payment) ಮೂಲಕ ಹಣ ಪಾವತಿಸುವವರಿಗೆ ಪ್ರತಿ ಗ್ರಾಂಗೆ ₹ 50ರಂತೆ ವಿನಾಯಿತಿ ಸಿಗಲಿದೆ. ಹೀಗಾಗಿ ಇಂತಹ ಹೂಡಿಕೆದಾರರಿಗೆ ನೀಡಿಕೆ ಬೆಲೆ ₹ 4,792 ಇರಲಿದೆ.

ಇದನ್ನೂ ಓದಿ : LIC Policy : ಈ ಯೋಜನೆಯಡಿ ಪ್ರತಿದಿನ ₹ 150 ಹೂಡಿಕೆ ಮಾಡಿ, ಮಗಳ ಮದುವೆ ವೇಳೆಗೆ ಪಡೆಯಿರಿ ₹ 22 ಲಕ್ಷ!

ಸೋಮವಾರದಿಂದ ಶುಕ್ರವಾರದವರೆಗೆ ಬಾಂಡ್‌(Bond) ಖರೀದಿಸಲು ಅವಕಾಶ ಇರಲಿದೆ. ಮೇ 25ರಂದು ಬಾಂಡ್‌ ವಿತರಣೆ ಆಗಲಿದೆ.

\ಇದನ್ನೂ ಓದಿ : ನಿಮ್ಮ SBI ಖಾತೆಯಿಂದಲು ಹಣ ಕಟ್ ಆಗಿದೆಯಾ? SBI ಗ್ರಾಹಕರು ಈ ಸುದ್ದಿ ತಪ್ಪದೆ ಓದಿ

ಬ್ಯಾಂಕುಗಳು, ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ(Stock Holding Corporation of India), ಅಂಚೆ ಕಚೇರಿ, ಬಿಎಸ್‌ಇ ಮತ್ತು ಎನ್‌ಎಸ್‌ಇ ಮೂಲಕ ಚಿನ್ನದ ಬಾಂಡ್‌ ಮಾರಾಟ ನಡೆಯಲಿದೆ.

ಇದನ್ನೂ ಓದಿ : 'PM Kisanʼ 8ನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿಲ್ಲವೇ? ಹಾಗಿದ್ರೆ ತಕ್ಷಣ ಈ ನಂಬರ್ ಗೆ ಕರೆ ಮಾಡಿ!

ಕನಿಷ್ಠ ಹೂಡಿಕೆ 1 ಗ್ರಾಂ ಇರಲಿದೆ. ವೈಯಕ್ತಿಕ ಖರೀದಿದಾರರಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಕ್ಕೆ 4 ಕೆ.ಜಿ ಹಾಗೂ ಟ್ರಸ್ಟ್‌(Trust)ಗಳಿಗೆ 20 ಕೆ.ಜಿಯ ಗರಿಷ್ಠ ಮಿತಿ ನೀಡಲಾಗಿದೆ.

ಇದನ್ನೂ ಓದಿ : PPF vs NPS ಇವೆರಡರಲ್ಲಿ ನಿವೃತ್ತಿ ಜೀವನಕ್ಕೆ ಯಾವುದು ಉತ್ತಮ, ತಿಂಗಳಿಗೆ 3000 ರೂ. ಜಮಾ ಮಾಡಿ, 44 ಲಕ್ಷ ರೂ. ಗಳಿಸಿ 

ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಒಟ್ಟು ಆರು ಕಂತುಗಳಲ್ಲಿ ಚಿನ್ನದ ಬಾಂಡ್ (Gold Bond)ವಿತರಣೆ ನಡೆಯಲಿದೆ ಎಂದು ಆರ್‌ಬಿಐ ಹೇಳಿದೆ.

ಇದನ್ನೂ ಓದಿ : Gold-Silver Rate : ಚಿನ್ನ ಖರೀದಿದಾರರೆ ಗಮನಕ್ಕೆ : ಬಂಗಾರದ ಬೆಲೆ ₹ 160ರಷ್ಟು ಏರಿಕೆ!

ಭೌತಿಕ ರೂಪದ ಚಿನ್ನ(Gold)ದ ಬೇಡಿಕೆ ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2015ರಲ್ಲಿ ಚಿನ್ನದ ಬಾಂಡ್‌ ಯೋಜನೆ ಜಾರಿಗೆ ತಂದಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News