ನವದೆಹಲಿ : ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಇತ್ತೀಚೆಗೆ ಆನ್‌ಲೈನ್ ಫಾರ್ಮಸಿ SastaSundar.com ಅನ್ನು ಖರೀದಿಸಿದೆ. ಇದಾದ ನಂತರ ಹೊಸ ವ್ಯವಹಾರವಾದ Flipkart Health+ ಅನ್ನು ಘೋಷಿಸಿದೆ. ಇದೊಂದು ವಿಶೇಷ ಆರೋಗ್ಯ ಸೇವೆಯಾಗಿದ್ದು, , ಈ ಮೂಲಕ ಬಳಕೆದಾರರು ತಮ್ಮಗೆ ಅಗತ್ಯವಿರುವ ಔಷಧಿಗಳನ್ನು ಆರ್ಡರ್ ಮಾಡಲು ಸಾಧ್ಯವಾಗುತ್ತದೆ.  


COMMERCIAL BREAK
SCROLL TO CONTINUE READING

ಏನಿದು Flipkart Health+ :
ಫ್ಲಿಪ್‌ಕಾರ್ಟ್‌ನ ಈ ಕಾರ್ಯಕ್ರಮದಲ್ಲಿ, ಮೊದಲನೆಯದಾಗಿ ಇ-ಫಾರ್ಮಸಿಯನ್ನು ಪ್ರಾರಂಭಿಸಲಾಗುವುದು. ಇದರಿಂದಾಗಿ ಬಳಕೆದಾರರು ತಮ್ಮ ಔಷಧಿಗಳನ್ನು ಫ್ಲಿಪ್‌ಕಾರ್ಟ್‌ನಿಂದ (Flipkart) ಮನೆಯಲ್ಲಿಯೇ ಕುಳಿತು ಆರ್ಡರ್ ಮಾಡಬಹುದಾಗಿದೆ. ಔಷಧಿಗಳ ಜೊತೆಗೆ, ಪರ್ಸನಲ್ ಕನ್ಸಲ್ಟೇಶನ್, ಪರ್ಸನಲ್ ಕೌನ್ಸೆಲಿಂಗ್ ಸೇವೆಯನ್ನು ಕೂಡಾ ಒದಗಿಸಲಾಗುವುದು.


ಇದನ್ನೂ ಓದಿ : Upcoming Royal Enfield Motorcycle: ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿವೆ Royal Enfieldನ 4 ಬೈಕ್ ಗಳು


SastaSundar.com ಎಂದರೇನು ?
SastaSundar.com ಭಾರತದಲ್ಲಿನ ಪ್ರಸಿದ್ಧ ಡಿಜಿಟಲ್ ಹೆಲ್ತ್ ಕೇರ್(Digital healthcare) ಮತ್ತು ಫಾರ್ಮಸಿ ಪ್ಲಾಟ್‌ಫಾರ್ಮ್ ಆಗಿದೆ. ಇದು ದೇಶಾದ್ಯಂತ 490 ಕ್ಕೂ ಹೆಚ್ಚು ಔಷಧಾಲಯಗಳ ಬೆಂಬಲವನ್ನು ಪಡೆದುಕೊಂಡಿದೆ.  ಈ ಔಷಧಾಲಯವು ಅಧಿಕೃತ ಮೂಲಗಳಿಂದ ಔಷಧಿಗಳನ್ನು ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ಜನರ ಮನೆಗಳಿಗೆ ತಲುಪಿಸುತ್ತದೆ. ಈಗ ಈ ಪ್ಲಾಟ್‌ಫಾರ್ಮ್ ಅನ್ನು ಫ್ಲಿಪ್‌ಕಾರ್ಟ್ (Flipkart) ಸ್ವಾಧೀನಪಡಿಸಿಕೊಂಡಿದೆ.  


ಈ ಹೊಸ ವ್ಯಾಪಾರದ ಹಿಂದಿನ ಕಾರಣ :
ಫ್ಲಿಪ್‌ಕಾರ್ಟ್ ಹೆಲ್ತ್+ (Flipkart health +) ಎಂಬ ಈ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಹಿಂದಿನ ಕಾರಣವೆಂದರೆ ಜನರಿಗೆ ಸೂಕ್ತ ಸಮಯಕ್ಕೆ ಔಷಧಿಗಳನ್ನು ಒದಗಿಸುವುದು. ಇಲ್ಲಿಯವರೆಗೆ ತಮ್ಮ ಬಳಕೆದಾರರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸರಕುಗಳನ್ನು ಮಾರಾಟ ಮಾಡಲಾಗಿದೆ. ಇಷ್ಟಾದ ನಂತರ ಈ ಕ್ಷೇತ್ರಕ್ಕೆ ಕಾಲಿಡಲಾಗಿದೆ ಎಂದು ಕಂಪನಿ ಹೇಳಿದೆ.  


ಇದನ್ನೂ ಓದಿ : LIC: ಈಗ ಏಜೆಂಟ್ ಗಳ ಅಗತ್ಯವಿಲ್ಲ, ವಿಮೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಒಂದೇ ಕರೆಯಲ್ಲಿ ಲಭ್ಯ


ಅಮೆಜಾನ್ ಕಳೆದ ವರ್ಷ ಬೆಂಗಳೂರಿನಲ್ಲಿ ಅಮೆಜಾನ್ (Amazon) ಫಾರ್ಮಸಿಯನ್ನು ಪ್ರಾರಂಭಿಸಿತು ಮತ್ತು ಟಾಟಾ ಡಿಜಿಟಲ್ ಸಹ ಈ ಕೆಲಸವನ್ನು ಮಾಡುತ್ತಿದೆ. ಇದೀಗ, ಈ ಪ್ರದೇಶದಲ್ಲಿ ಫ್ಲಿಪ್‌ಕಾರ್ಟ್‌ನ ಎಂಟ್ರಿ ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಗೆ ಪೈಪೋಟಿ ನೀಡುವಂತಿದೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.