Upcoming Royal Enfield Motorcycle: ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿವೆ Royal Enfieldನ 4 ಬೈಕ್ ಗಳು

Royal Enfield: 2022 ರಾಯಲ್ ಎನ್‌ಫೀಲ್ಡ್‌ಗೆ ತುಂಬಾ ಆಸಕ್ತಿದಾಯಕವಾಗಿದೆ ಏಕೆಂದರೆ ಮುಂದಿನ ವರ್ಷ ಕಂಪನಿಯು ತನ್ನ 4 ಹೊಸ ಮೋಟಾರ್‌ಸೈಕಲ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ ಮತ್ತು ಅವೆಲ್ಲವೂ ವಿಭಿನ್ನ ಶೈಲಿಯದ್ದಾಗಿರುತ್ತವೆ.

Written by - Nitin Tabib | Last Updated : Nov 21, 2021, 02:00 PM IST
  • ರಾಯಲ್ ಎನ್‌ಫೀಲ್ಡ್ ಹಂಟರ್ ಬಿಡುಗಡೆಯಾಗುವ ಮೊದಲ ಬೈಕ್ ಆಗಿರುವ ಸಾಧ್ಯತೆ ಇದೆ.
  • ಕಂಪನಿಯು 2022 ರಲ್ಲಿ ಹೊಸ ಸ್ಕ್ರ್ಯಾಂಬ್ಲರ್ ಅನ್ನು ಸಹ ಬಿಡುಗಡೆ ಮಾಡಲಿದೆ.
  • ಇದರಲ್ಲಿ ಹೊಸ ತಲೆಮಾರಿನ ಬುಲೆಟ್ 350 ಮತ್ತು ಬಾಬ್ಬರ್ ಕೂಡ ಶಾಮೀಲಾಗಿವೆ
Upcoming Royal Enfield Motorcycle: ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿವೆ Royal Enfieldನ 4 ಬೈಕ್ ಗಳು title=
Upcoming Royal Enfield Motorcycle (File Photo)

ನವದೆಹಲಿ: ರಾಯಲ್ ಎನ್‌ಫೀಲ್ಡ್ (Royal Enfield) ದೀರ್ಘಕಾಲದವರೆಗೆ ಭಾರತದಲ್ಲಿ ಮೋಟಾರ್‌ಸೈಕಲ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದೆ ಮತ್ತು ಕಂಪನಿಯು 2022 ರಲ್ಲಿ ಈ ಪ್ರಾಬಲ್ಯವನ್ನು ಕಾಯ್ದುಕೊಳ್ಳಲಿದೆ. ಕಂಪನಿಯು ಮುಂದಿನ ವರ್ಷ ಹೊಸ ಪೀಳಿಗೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ 350, ಕ್ಲಾಸಿಕ್ ಬಾಬರ್ 350, ಹಂಟರ್ 350 ಮತ್ತು ರಾಯಲ್ ಎನ್‌ಫೀಲ್ಡ್ ಸ್ಕ್ರೀಮ್ 411 (Royal Enfield Scram) ಸೇರಿದಂತೆ 4 ಹೊಸ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಕಳೆದ ಕೆಲವು ದಿನಗಳಲ್ಲಿ ಅನೇಕ ಹೊಸ ಹೆಸರುಗಳನ್ನು ಟ್ರೇಡ್‌ಮಾರ್ಕ್ ಮಾಡಿದೆ ಮತ್ತು ರಾಯಲ್ ಎನ್‌ಫೀಲ್ಡ್ ತನ್ನ ಮುಂಬರುವ ಬೈಕ್‌ಗಳಿಗೆ ಈ ಹೆಸರುಗಳನ್ನು ಬಳಸಲಿದೆ.

ರಾಯಲ್ ಎನ್‌ಫೀಲ್ಡ್ ಹಂಟರ್ 350 (Royal Enfield Hunter)
ಚೆನ್ನೈ ಮೂಲದ ಬೈಕ್ ತಯಾರಕ ಸಂಸ್ಥೆಯು ಹಂಟರ್ 350 ಅನ್ನು 2022 ರಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದನ್ನು ಇತ್ತೀಚೆಗೆ ಪರೀಕ್ಷೆಯ ವೇಳೆ ಗಮನಿಸಲಾಗಿದೆ ಮತ್ತು  ಶೀಘ್ರದಲ್ಲೇ ಭಾರತಕ್ಕೆ ಬರಲಿದೆ, ಈ ಮೋಟಾರ್‌ಸೈಕಲ್ ಅನ್ನು ರಾಯಲ್ ಎನ್‌ಫೀಲ್ಡ್ ಮೆಟಿಯರ್ 350 ರ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಆದರೆ ಅದರ ಸ್ಟೈಲ್ ಮತ್ತು ವಿನ್ಯಾಸವು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಆದರೆ, ಹೊಸ ಮೋಟಾರ್‌ಸೈಕಲ್ ಟ್ರಿಪ್ಪರ್ ನ್ಯಾವಿಗೇಶನ್ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ, ಇದನ್ನು ಮೇಟಿಯೋರ್ ನೊಂದಿದೆ ಒದಗಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ 350 (Royal Enfield Bullet 350)
ರಾಯಲ್ ಎನ್‌ಫೀಲ್ಡ್ ಹೊಸ ತಲೆಮಾರಿನ ಬುಲೆಟ್ 350 ಅನ್ನು ಮುಂದಿನ ವರ್ಷವೇ ದೇಶದಲ್ಲಿ ಬಿಡುಗಡೆ ಮಾಡಲಿದೆ ಮತ್ತು ಹೊಸ ಕ್ಲಾಸಿಕ್ 350 ನೊಂದಿಗೆ ಒದಗಿಸಲಾದ ಪ್ಲಾಟ್‌ಫಾರ್ಮ್‌ನಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಪ್ರಸ್ತುತ ಮಾದರಿಗೆ ಹೋಲಿಸಿದರೆ ಹೊಸ ತಲೆಮಾರಿನ ಮೋಟಾರ್‌ಸೈಕಲ್‌ನ ಸ್ಟೈಲ್ ಮತ್ತು ವಿನ್ಯಾಸವು ಗಮನಾರ್ಹವಾಗಿ ಬದಲಾಗಲಿದೆ. ಬೈಕ್ ನಲ್ಲಿ ತಾಂತ್ರಿಕ ಸುಧಾರಣೆಯಾಗುವ ಸಾಧ್ಯತೆಯೂ ಇದೆ. ಹೊಸ ಬುಲೆಟ್ 350 ಹೊಸ 350 ಸಿಸಿ ಎಂಜಿನ್ ಅನ್ನು ಪಡೆಯಲಿದ್ದು ಅದು 20.2 ಬಿಎಚ್‌ಪಿ ಪವರ್ ಮತ್ತು 27 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ ಕೂಡ  ಟ್ರಿಪ್ಪರ್ ನ್ಯಾವಿಗೇಷನ್ ಹೊಂದಿರಲಿದೆ.

ಇದನ್ನೂ ಓದಿ-LIC: ಈಗ ಏಜೆಂಟ್ ಗಳ ಅಗತ್ಯವಿಲ್ಲ, ವಿಮೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಒಂದೇ ಕರೆಯಲ್ಲಿ ಲಭ್ಯ

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ (Royal Enfield Himalayan)
ಕಂಪನಿಯು 2022 ರಲ್ಲಿ ಹಿಮಾಲಯನ್‌ನ ಹೊಸ ಮಾದರಿಯನ್ನು ಬಿಡುಗಡೆ ಮಾಡಲಿದೆ, ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ಆಫ್-ರೋಡರ್‌ನಿಂದ ವಿಭಿನ್ನ ರಸ್ತೆಯಲ್ಲಿ ಚಲಾಯಿಸಲು ವಿನ್ಯಾಸಗೊಳಿಸಲಾಗಿದೆ. ಹೊಸ ಬೈಕ್‌ನ ಹೆಸರು ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಆಗಿರಬಹುದು, ಇದು ಹಿಮಾಲಯನ್ ಮೂಲದ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಆಗಿದೆ. ಕಂಪನಿಯು ಈ ಮೋಟಾರ್‌ಸೈಕಲ್‌ನೊಂದಿಗೆ ಸಿಂಗಲ್-ಪಾಡ್ ಇನ್‌ಸ್ಟ್ರುಮೆಂಟ್ ಕನ್ಸೋಲ್ ಮತ್ತು ಟ್ರಿಪ್ಪರ್ ನ್ಯಾವಿಗೇಶನ್ ಸಹ ಒದಗಿಸಲಿದೆ.

ಇದನ್ನೂ ಓದಿ-7th Pay Commission: Good News - ಶೀಘ್ರದಲ್ಲಿಯೇ ಈ ಸರ್ಕಾರಿ ನೌಕರರ ಖಾತೆ ಸೇರಲಿದೆ 4 ತಿಂಗಳ DA ಬಾಕಿ

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬಾಬರ್ (Royal Enfield Bobber)
ರಾಯಲ್ ಎನ್‌ಫೀಲ್ಡ್‌ನ ಹೊಸ ಕ್ಲಾಸಿಕ್ 350 ಆಧಾರಿತ ಮುಂಬರುವ ಬಾಬ್ಬರ್  ಮೋಟಾರ್‌ಸೈಕಲ್ ಕೂಡ 2022 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಬೈಕ್‌ಗೆ ಬಾಬ್ಬರ್ ಶೈಲಿಯನ್ನು ನೀಡಲು, ಅದೇ ರೀತಿಯ ಹ್ಯಾಂಡಲ್‌ಬಾರ್ ಮತ್ತು ಬಾಬ್ಬರ್ ಸೀಟ್ ಅನ್ನು ಅದರೊಂದಿಗೆ ನೀಡಲಿದೆ. ಹಂಟರ್‌ನಂತೆ, ಮೆಟಿಯರ್ 350 ರ ಎಂಜಿನ್ ಅನ್ನು ಹೊಸ ಮೋಟಾರ್‌ಸೈಕಲ್‌ ನಲ್ಲಿ ನೀವು ಕಾಣಬಹುದು. ಈ ಹೊಸ ಬೈಕ್‌ನೊಂದಿಗೆ ಕಂಪನಿಯು ಗ್ರಾಹಕರ ಗಮನವನ್ನು ದೊಡ್ಡ ಮಟ್ಟದಲ್ಲಿ ಸೆಳೆಯುವ ನಿರೀಕ್ಷೆಯನ್ನು ಹೊಂದಿದೆ.

ಇದನ್ನೂ ಓದಿ-Aadhaar-Ration Link: ಕುಳಿತಲ್ಲೇ ಮಾಡಿಬಿಡಬಹುದು ಆಧಾರ್ ಮತ್ತು ರೇಶನ್ ಕಾರ್ಡ್ ಲಿಂಕ್, ಸಿಗಲಿದೆ ಬಹಳಷ್ಟು ಪ್ರಯೋಜನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News