EPF Account UAN Password: ನೌಕರರ ಭವಿಷ್ಯ ನಿಧಿ ಅಥವಾ ಇಪಿಎಫ್ ಖಾತೆಯನ್ನು ನಿರ್ವಹಿಸಲು ಯುನಿವರ್ಸಲ್ ಖಾತೆ ಸಂಖ್ಯೆ ಅಥವಾ ಯುಎಎನ್   ಅತ್ಯಂತ ಪ್ರಮುಖ ಮಾಹಿತಿಯಾಗಿದೆ. ಯುಎಎನ್ ಖಾತೆಯನ್ನು ನಿರ್ವಹಿಸಲು ಪಾಸ್‌ವರ್ಡ್ ಕೊಡೋಯ ಅಗತ್ಯ. ಆದಾಗ್ಯೂ, ನೀವು ಈ ಯುಎಎನ್ ಖಾತೆಯ ಪಾಸ್‌ವರ್ಡ್ ಮರೆತಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವೇ ಕೆಲವು ಸುಲಭ ಹಂತಗಳನ್ನು ಅನುಸರಿಸಿ ಈ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಬಹುದು. 


COMMERCIAL BREAK
SCROLL TO CONTINUE READING

ಯುಎಎನ್ ಪಾಸ್‌ವರ್ಡ್ ಮರು ಹೊಂದಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ!
ಹಂತ 1:- ಇಪಿಎಫ್  ವೆಬ್‌ಸೈಟ್‌ಗೆ ಭೇಟಿ ನೀಡಿ

ನೀವು ನಿಮ್ಮ ಯುಎಎನ್ ಪಾಸ್‌ವರ್ಡ್ ಮರುಹೊಂದಿಸಲು (Retrieve UAN Password) ಮೊದಲಿಗೆ ಯುಎಎನ್   ಪೋರ್ಟಲ್‌ಗೆ unifiedportal-mem.epfindia.gov.in. ಭೇಟಿ ನೀಡಬೇಕು.


ಹಂತ 2: - ಪಾಸ್‌ವರ್ಡ್ ಮರೆತುಹೋಗಿದೆ ಆಯ್ಕೆಯನ್ನು ಆರಿಸಿ 
ಪೋರ್ಟಲ್‌ನಲ್ಲಿ ಪಾಸ್‌ವರ್ಡ್ ಮರೆತು ಹೋಗಿದೆ (Forgot Password) ಎಂಬ ಆಯ್ಕೆಯನ್ನು ಆರಿಸಿ. 


ಹಂತ 3:- ಯುಎಎನ್ ಮತ್ತು ಕ್ಯಾಪ್ಚಾ ನಮೂದಿಸಿ 
ನಂತರ ನಿಗದಿತ ಬಾಕ್ಸ್ ನಲ್ಲಿ ಯುಎಎನ್ (UAN) ನಮೂದಿಸಿ ಸ್ಕ್ರೀನ್ ಮೇಲೆ ಕಾಣಿಸುವ ಕ್ಯಾಪ್ಚಾವನ್ನು ನಮೂದಿಸಿ. 


ಇದನ್ನೂ ಓದಿ- Bank Scheme: ಎಚ್‌ಡಿ‌ಎಫ್‌ಸಿ ಬ್ಯಾಂಕ್‌ನ ವಿಶೇಷ ಯೋಜನೆ, ಸಿಗುತ್ತೆ ಬಂಪರ್ ಲಾಭ


ಹಂತ 4:- ಓ‌ಟಿ‌ಪಿ ಪರಿಶೀಲನೆ 
ಯುಎಎನ್ ಕ್ಯಾಪ್ಚಾವನ್ನು ನಮೂದಿಸಿಸ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಓ‌ಟಿ‌ಪಿ (ಒನ್ ಟೈಮ್ ಪಾಸ್‌ವರ್ಡ್) ಅನ್ನು ಪೋರ್ಟಲ್‌ನಲ್ಲಿ ನಮೂದಿಸಿ. 


ಹಂತ 5:- ಪಾಸ್‌ವರ್ಡ್ ಮರುಹೊಂದಿಸಿ 
ಓಟಿಪಿ ನಮೂದಿಸಿದ ಬಳಿಕ ಪಾಸ್‌ವರ್ಡ್ ಮರುಹೊಂದಿಸಲು ಕೇಳಲಾಗುತ್ತದೆ. ನಿಗದಿತ ಮಾನದಂಡಗಳನ್ನು ಪೂರೈಸುವ ಬಲವಾದ ಪಾಸ್‌ವರ್ಡ್ ನಮೂದಿಸಿ. 


ಇದನ್ನೂ ಓದಿ- ನಿಮ್ಮ ಬಳಿ ಇದೊಂದಿದ್ದರೆ ಸಾಕು, ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು !


ಹಂತ 6:- ಹೊಸ ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಇನ್ ಆಗಿ 
ನೀವು ಹೊಸ ಪಾಸ್‌ವರ್ಡ್ ಅನ್ನು ಮರುಹೊಂದಿಸಿದ ಬಳಿಕ ಪೇಜ್ ರಿಫ್ರೇಶ್ ಮಾಡಿ, ಹೊಸ ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಇನ್ ಮಾಡಿ. ಸುರಕ್ಷತೆ ದೃಷ್ಟಿಯಿಂದ ನಿಮ್ಮ ಈ ಪಾಸ್‌ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.