Free Ration Card: ಕೇಂದ್ರ ಚುನಾವಣಾ ಆಯೋಗ ಶನಿವಾರ ಲೋಕಸಭೆ ಚುನಾವಣೆ 2024ರ ದಿನಾಂಕ ಘೋಷಣೆ ಮಾಡಿದೆ. ದೇಶಾದ್ಯಂತ ಒಟ್ಟು ಏಳು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿ ಮುಕ್ತಾಯವಾಗಲಿದೆ. ಮೋದಿ ಸರ್ಕಾರವು ತನ್ನ ಮೊದಲ ಮತ್ತು ಎರಡನೇ ಅವಧಿಯಲ್ಲಿ ಜನಸಾಮಾನ್ಯರಿಗಾಗಿ ಹಲವು ಯೋಜನೆಗಳನ್ನು ಆರಂಭಿಸಿದೆ. ಸರ್ಕಾರದ ಈ ಯೋಜನೆಗಳಿಂದ ಕೋಟ್ಯಾಂತರ ಜನರು ಸಾಕಷ್ಟು ಪ್ರಯೋಜನ ಪಡೆದಿದ್ದಾರೆ. ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅಡಿಯಲ್ಲಿ ಉಚಿತ ಪಡಿತರ ವಿತರಿಸುವ ಯೋಜನೆಯನ್ನು ಆರಂಭಿಸಿದೆ. 


COMMERCIAL BREAK
SCROLL TO CONTINUE READING

ನವೆಂಬರ್ 2023 ರಲ್ಲಿ ಅನುಮೋದನೆ ನೀಡಲಾಗಿದೆ (Central government free ration scheme)
ಕೇಂದ್ರ ಸರ್ಕಾರದ ಈ ಯೋಜನೆಯಡಿ, ದೇಶದ ಸುಮಾರು 81 ಕೋಟಿ ಜನರು 2028 ರವರೆಗೆ ಉಚಿತ ಪಡಿತರವನ್ನು ಪಡೆಯಲಿದ್ದಾರೆ(Free ration scheme extended). ನವೆಂಬರ್ 2023 ರಲ್ಲಿ, ಕೇಂದ್ರ ಸಚಿವ ಸಂಪುಟ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ. ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ಸರ್ಕಾರವು ಸುಮಾರು 11.8 ಲಕ್ಷ ಕೋಟಿ ರೂ.ಅನುದಾನ ಮೀಸಲಿರಿಸಿದೆ. ಯೋಜನೆಯ ವಿಸ್ತರಣೆಯನ್ನು ಜನವರಿ 1, 2024 ರಿಂದ ಜಾರಿಗೆ ತರಲಾಗಿದೆ.


5 ಕೆಜಿ ಅಕ್ಕಿ ಮತ್ತು 5 ಕೆಜಿ ಗೋಧಿ ಉಚಿತ
ಕೋವಿಡ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ವಿಧಿಸಲಾದ ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರವು ಮೊದಲ ಬಾರಿಗೆ ಮೂರು ತಿಂಗಳ ಕಾಲ ಈ ಯೋಜನೆಯನ್ನು ಆರಂಭಿಸಿದೆ.  ಕಾರ್ಖಾನೆಗಳು ಮುಚ್ಚಿದ ನಂತರ ಪ್ರತಿಯೊಬ್ಬರಿಗೂ ಆಹಾರ ಧಾನ್ಯಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಉಚಿತ ಪಡಿತರ ಯೋಜನೆಯಡಿ, ಸರ್ಕಾರವು ಬಡ ಕುಟುಂಬಗಳಿಗೆ ಮಾಸಿಕ ಆಧಾರದ ಮೇಲೆ 5 ಕೆಜಿ ಅಕ್ಕಿ ಮತ್ತು 5 ಕೆಜಿ ಗೋಧಿಯನ್ನು ಉಚಿತವಾಗಿ ನೀಡುತ್ತದೆ. ಇದಲ್ಲದೇ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಒಂದು ಕೆಜಿ ಬೇಳೆಕಾಳುಗಳನ್ನು ಕೂಡ ಉಚಿತವಾಗಿ ನೀಡಲಾಗುತ್ತದೆ.


ಇದನ್ನೂ ಓದಿ-Fixed Deposit ನಲ್ಲಿ ಹೂಡಿಕೆ ಮಾಡಿದ ಹಣ ಬೇಗ ಡಬಲ್ ಆಗಬೇಕೆ? ಹಾಗಾದರೆ ಈ Rule Of 72 ನಿಮಗೆ ಗೊತ್ತಿರಬೇಕು!


ಪಡಿತರ ಅಂಗಡಿಗಳ ಮೂಲಕ ಧಾನ್ಯಗಳು ವಿತರಣೆ (PM Free Ration Scheme Apply Online)
ಹೆಚ್ಚಿನ ಆಹಾರ ಧಾನ್ಯಗಳನ್ನು ಒದಗಿಸಲು 2020 ರಲ್ಲಿ ಪ್ರಾರಂಭವಾದ ಈ ಯೋಜನೆಯನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿ (NFSA) ಸೇರಿಸಲು ಕೇಂದ್ರವು ನಿರ್ಧರಿಸಿದೆ. ಇದು ಸುಮಾರು ಶೇ. 75 ರಷ್ಟು ಗ್ರಾಮೀಣ ಮತ್ತು ಶೇ. 50ರಷ್ಟು ನಗರ ಜನಸಂಖ್ಯೆಯನ್ನು ಒಳಗೊಂಡಿದೆ. ಸರಕಾರ ನೀಡುವ ಪಡಿತರವನ್ನು ನ್ಯಾಯಬೆಲೆ ಅಂಗಡಿ (ಎಫ್‌ಪಿಎಸ್) ಮೂಲಕ ವಿತರಿಸಲಾಗುತ್ತದೆ. ಫಲಾನುಭವಿಗಳು ತಮ್ಮ ಪಡಿತರ ಚೀಟಿ ಮೂಲಕ ಪಡಿತರ ಪಡೆಯಬಹುದು.


ಇದನ್ನೂ ಓದಿ-Gratuity: 7 ವರ್ಷದ ನೌಕರಿ, ವೇತನ 35,000 ರೂ.ಗಳಾಗಿದ್ದರೆ, ಗ್ರ್ಯಾಚುಟಿ ವೇಳೆ ಎಷ್ಟು ಮೊತ್ತದ ಚೆಕ್ ಕೈಸೇರುತ್ತದೆ?


ಸರ್ಕಾರದ ಈ ಯೋಜನೆಯು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನ್ವಯಿಸುತ್ತದೆ. ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಫಲಾನುಭವಿಗಳು ಮಾನ್ಯವಾದ ಪಡಿತರ ಚೀಟಿಯನ್ನು ಹೊಂದಿರಬೇಕು. ನೀವು ಪಡಿತರ ಚೀಟಿ ಹೊಂದಿಲ್ಲದಿದ್ದರೆ, ನೀವು ನಿಮ್ಮ ಹತ್ತಿರದ ಎಫ್‌ಪಿಎಸ್ ಅಥವಾ ಆಹಾರ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು. ಯೋಜನೆಯು ಬಡವರು ಮತ್ತು ನಿರ್ಗತಿಕರಿಗೆ ಆಹಾರ ಭದ್ರತೆಯನ್ನು ಒದಗಿಸುತ್ತದೆ ಮತ್ತು ಅವರ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. (Central government free ration scheme)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI