Fixed Deposit ನಲ್ಲಿ ಹೂಡಿಕೆ ಮಾಡಿದ ಹಣ ಬೇಗ ಡಬಲ್ ಆಗಬೇಕೆ? ಹಾಗಾದರೆ ಈ Rule Of 72 ನಿಮಗೆ ಗೊತ್ತಿರಬೇಕು!

Fixed deposit double tips calculator: ಕಳೆದ ಕೆಲ ತಿಂಗಳುಗಳಿಂದ ಸ್ಥಿರ ಠೇವಣಿಗಳ ಮೇಲೆ ಎಲ್ಲಾ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಉತ್ತಮ ಬಡ್ಡಿಯ ಲಾಭವನ್ನು ನೀಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕೆಲವೇ ವರ್ಷಗಳಲ್ಲಿ ಸ್ಥಿರ ಠೇವಣಿ ಮೂಲಕ ನಿಮ್ಮ ಹೂಡಿಕೆಯ ಮೊತ್ತವನ್ನು ದ್ವಿಗುಣಗೊಳಿಸಬಹುದು. ಎಫ್‌ಡಿ ಅಥವಾ ಇನ್ನಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ ಎಷ್ಟು ಅವಧಿಯಲ್ಲಿ ದ್ವಿಗುಣಗೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಒಂದು ಸೂತ್ರ ಇದೆ. ಅದುವೇ ರೂಲ್ ಆಫ್ 72. (Business News In Kannada)  

Written by - Nitin Tabib | Last Updated : Mar 16, 2024, 03:36 PM IST
  • ಈ ಸೂತ್ರದ ಆಧಾರದ ಮೇಲೆ, ನೀವು ಕೇವಲ ಸ್ಥಿರ ಠೇವಣಿ ಅಷ್ಟೇ ಅಲ್ಲ, ಬೇರೆ ಯಾವುದೇ ಇತರ ಯೋಜನೆಗಳನ್ನು ಸುಲಭವಾಗಿ ಲೆಕ್ಕ ಹಾಕಬಹುದು
  • ಮತ್ತು ಯಾವ ಯೋಜನೆಯು ಎಷ್ಟು ವರ್ಷಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು.
  • ಈ ಸೂತ್ರವನ್ನು ಬಳಸುವ ಮೂಲಕ, ನೀವು ಎಲ್ಲಾ ಸ್ಕೀಮ್‌ಗಳನ್ನು ಹೋಲಿಸಬಹುದು ಮತ್ತು ನಿಮಗಾಗಿ ಉತ್ತಮ ಸ್ಕೀಮ್ ಅನ್ನು ಆಯ್ಕೆ ಮಾಡಬಹುದು.
Fixed Deposit ನಲ್ಲಿ ಹೂಡಿಕೆ ಮಾಡಿದ ಹಣ ಬೇಗ ಡಬಲ್ ಆಗಬೇಕೆ? ಹಾಗಾದರೆ ಈ Rule Of 72 ನಿಮಗೆ ಗೊತ್ತಿರಬೇಕು! title=

Fixed Deposit Double Formula: ಇಂದು ಜನರಿಗೆ ಹೂಡಿಕೆಯ ಹಲವು ಆಯ್ಕೆಗಳು ಲಭ್ಯವಿದ್ದರೂ ಕೂಡ, ಇಂದಿಗೂ ಬಹುತೇಕ ಜನರು ಇನ್ನೂ ಸ್ಥಿರ ಠೇವಣಿಗಳ ಮೇಲೆ ಅವಲಂಭಿಸಿದ್ದಾರೆ. ಇದಕ್ಕೆ ಕಾರಣ ಸ್ಥಿರ ಠೇವಣಿಗಳಲ್ಲಿ ಹೂಡಿಕೆದಾರರ ಹಣ ಸುರಕ್ಷಿತವಾಗಿರುತ್ತದೆ ಮತ್ತು ಅವರಿಗೆ ಖಾತರಿಯ ಆದಾಯ ನೀಡುತ್ತದೆ ಎಂಬ ವಿಶ್ವಾಸ. ಕಳೆದ ಕೆಲ ತಿಂಗಳುಗಳಿಂದ  ಗ್ರಾಹಕರಿಗೆ ಅವರ ಸ್ಥಿರ ಠೇವಣಿಗಳ ಮೇಲೆ ಉತ್ತಮ ಬಡ್ಡಿ ಸಿಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕೆಲವೇ ವರ್ಷಗಳಲ್ಲಿ ನಿಮ್ಮ ಎಫ್ಡಿ ಮೊತ್ತವನ್ನು ದುಪ್ಪಟ್ಟಾಗಿಸಬಹುದು (fixed deposit double in how many years,). ನೀವು ಎಫ್‌ಡಿ ಅಥವಾ ಇನ್ನಾವುದೇ ಸ್ಕೀಮ್‌ನಲ್ಲಿ ಹೂಡಿಕೆ ಮಾಡಿದ ಹಣವು ಎಷ್ಟು ಸಮಯದಲ್ಲಿ ದ್ವಿಗುಣ ಗೊಳ್ಳುತ್ತಿದೆ ಎಂಬುದನ್ನು ಅರ್ಥೈಸಿಕೊಳ್ಳಲು ಒಂದು ನಿಯಮವಿದೆ. (Business News In Kannada)

Rule Of 72 ನಿಮಗೆ ತಿಳಿದಿರಲಿ (Fixed deposit double tips calculator)
ರೂಲ್ ಆಫ್ 72 ಒಂದು ಸೂತ್ರವಿದೆ (simple rule), ಹೆಚ್ಚಿನ ತಜ್ಞರು ಹೂಡಿಕೆಯ ದೃಷ್ಟಿಕೋನದಿಂದ ಇದನ್ನು ಸಾಕಷ್ಟು ನಿಖರ ಪರಿಗಣಿಸುತ್ತಾರೆ. ಈ ಸೂತ್ರದ ಸಹಾಯದಿಂದ, ನೀವು ಹೂಡಿಕೆ ಮಾಡಿದ ಮೊತ್ತ ಎಷ್ಟು ದಿನಗಳಲ್ಲಿ ದ್ವಿಗುಣಗೊಳ್ಳುತ್ತದೆ ಎಂಬುದನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ಈ ಸೂತ್ರವನ್ನು ಅನ್ವಯಿಸಲು, ನೀವು ಲೆಕ್ಕಾಚಾರ ಮಾಡಲು ಬಯಸುವ ಯೋಜನೆಯಲ್ಲಿ ಲಭ್ಯವಿರುವ ಬಡ್ಡಿಯ ಬಗ್ಗೆ ನೀವು ತಿಳಿದಿರಬೇಕು. ಆ ಬಡ್ಡಿಯನ್ನು 72 ರಿಂದ ಭಾಗಿಸುವ ಮೂಲಕ, ಯಾವ ಯೋಜನೆಯು ಎಷ್ಟು ವರ್ಷಗಳಲ್ಲಿ ನಿಮ್ಮ ಹೂಡಿಕೆಯನ್ನು ದ್ವಿಗುಣಗೊಳಿಸುತ್ತದೆ ಎಂದು ನಿಮಗೆ ತಿಳಿಯುತ್ತದೆ.

ಇದನ್ನೂ ಓದಿ-Gratuity: 7 ವರ್ಷದ ನೌಕರಿ, ವೇತನ 35,000 ರೂ.ಗಳಾಗಿದ್ದರೆ, ಗ್ರ್ಯಾಚುಟಿ ವೇಳೆ ಎಷ್ಟು ಮೊತ್ತದ ಚೆಕ್ ಕೈಸೇರುತ್ತದೆ?

ಉದಾಹರಣೆಗಾಗಿ ನೀವು ಅಂಚೆ ಕಚೇರಿಯಲ್ಲಿ 5 ಲಕ್ಷ ರೂಪಾಯಿ ಹೂಡಿಕೆ ಮಾಡಲು ಬಯಸುತ್ತೀರಿ ಎಂದು ಭಾವಿಸೋಣ. ನೀವು 5 ವರ್ಷಗಳ ಕಾಲ ಈ ಹೂಡಿಕೆಯನ್ನು ಮಾಡಿದರೆ. ನೀವು 5 ವರ್ಷಗಳ ಫಿಕ್ಸ್ದ್ ಡೆಪಾಸಿಟ್ ಮೇಲೆ ಶೇ. 7.5 ರಷ್ಟು ಬಡ್ಡಿಯನ್ನು ಪಡೆಯುವಿರಿ. ನಿಮ್ಮ ಹೂಡಿಕೆಯು ಎಷ್ಟು ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಲು ನೀವು 72 ಅನ್ನು 7.5 ರಿಂದ ಭಾಗಿಸಿ. 72/7.5 = 9.6.  ಅಂದರೆ ನಿಮ್ಮ ಹಣವು 9 ವರ್ಷ ಮತ್ತು 6 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ. ಅಂಚೆ ಕಚೇರಿಯಲ್ಲಿ ನೇರವಾಗಿ 10 ವರ್ಷ ಅಥವಾ 9, 9 ವರ್ಷ ಮತ್ತು ಆರು ತಿಂಗಳವರೆಗೆ ಯಾವುದೇ ಎಫ್‌ಡಿ ಇಲ್ಲದಿರುವುದರಿಂದ. ಇಂತಹ ಪರಿಸ್ಥಿತಿಯಲ್ಲಿ, ಮೊದಲು 5 ವರ್ಷಗಳವರೆಗೆ ಎಫ್ಡಿ ಹೂಡಿಕೆ ಮಾಡಿ ಮತ್ತು ಅದನ್ನು ಮುಂದಿನ ಐದು ವರ್ಷಗಳ ವರೆಗೆ ಬಡ್ಡಿ ಸಮೇತ ಪುನಃ ಎಫ್ಡಿ ಮಾಡಿ . ಈ ರೀತಿಯಾಗಿ, ಒಟ್ಟು 10 ವರ್ಷಗಳ ಅವಧಿಯಲ್ಲಿ ನಿಮ್ಮ ಮೊತ್ತವು ದ್ವಿಗುಣಗೊಳ್ಳುತ್ತದೆ. ನೀವು 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, 10 ವರ್ಷಗಳ ಅವಧಿಯಲ್ಲಿ ಈ ಮೊತ್ತವು ಶೇ. 7.5 ಶೇಕಡಾ ದರದಲ್ಲಿ 10,51,175 ರೂಪಾಯಿ ಆಗುತ್ತದೆ. (how many years fd will do deposit double)

ಇದನ್ನೂ ಓದಿ-Electric Scooter In Cheapest Price: ಅಗ್ಗದ ದರದಲ್ಲಿ ಇಲೆಕ್ಟ್ರಿಕ್ ಸ್ಕೂಟರ್ ಖರೀದಿಸಬೇಕೆ? ಇಲ್ಲಿದೆ ಒಂದು ಸುವರ್ಣಾವಕಾಶ!

ಉತ್ತಮ ಯೋಜನೆ ಆಯ್ಕೆ ಮಾಡಲು ಸಹಕಾರಿ
ಈ ಸೂತ್ರದ ಆಧಾರದ ಮೇಲೆ, ನೀವು ಕೇವಲ ಸ್ಥಿರ ಠೇವಣಿ ಅಷ್ಟೇ ಅಲ್ಲ, ಬೇರೆ ಯಾವುದೇ ಇತರ ಯೋಜನೆಗಳನ್ನು ಸುಲಭವಾಗಿ ಲೆಕ್ಕ ಹಾಕಬಹುದು ಮತ್ತು ಯಾವ ಯೋಜನೆಯು ಎಷ್ಟು ವರ್ಷಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಈ ಸೂತ್ರವನ್ನು ಬಳಸುವ ಮೂಲಕ, ನೀವು ಎಲ್ಲಾ ಸ್ಕೀಮ್‌ಗಳನ್ನು ಹೋಲಿಸಬಹುದು ಮತ್ತು ನಿಮಗಾಗಿ ಉತ್ತಮ ಸ್ಕೀಮ್ ಅನ್ನು ಆಯ್ಕೆ ಮಾಡಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಈ ನಿಯಮವು ಬಹುತೇಕ ಸರಿಯಾದ ಅಂಕಿಗಳನ್ನು ನೀಡುತ್ತದೆ. ಆದಾಗ್ಯೂ, ಫಲಿತಾಂಶದಲ್ಲಿ ಸ್ವಲ್ಪ ವ್ಯತ್ಯಾಸವಿರಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News