ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರು ಮತ್ತು ಹಿರಿಯ ನಾಗರಿಕರಿಗಾಗಿ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. ಇದೀಗ ರಾಜ್ಯ ಸರ್ಕಾರದಿಂದ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಮತ್ತೊಂದು ಗುಡ್​ ನ್ಯೂಸ್​ ದೊರೆತಿದೆ.


COMMERCIAL BREAK
SCROLL TO CONTINUE READING

ಹೌದು, ಇನ್ನು ಮುಂದೆ ಮಹಿಳೆಯರು ಮತ್ತು ಹಿರಿಯ ನಾಗರಿಕರು ಅರ್ಧ ಟಿಕೆಟ್ ಮಾತ್ರ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ಟಿಕೆಟ್ ದರವನ್ನು ಕಡಿತಗೊಳಿಸಿದೆ. ಇನ್ಮುಂದೆ ಪ್ರಯಾಣದ ವೇಳೆ ಕೇವಲ ಶೇ.50ರಷ್ಟು ಅಂದರೆ ಅರ್ಧದಷ್ಟು ದರವನ್ನು ಮಾತ್ರ ಪಾವತಿಸಬೇಕಾಗುತ್ತದೆ.  


ಇದನ್ನೂ ಓದಿ: Wagonr CNG ಅನ್ನು ಕೇವಲ 80 ಸಾವಿರಕ್ಕೆ ಮನೆಗೆ ತನ್ನಿ


ಕೇವಲ ಅರ್ಧದಷ್ಟು ದರ


ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಈ ಯೋಜನೆ ಕರ್ನಾಟಕದಲ್ಲಿ ಜಾರಿಯಾಗಿಲ್ಲ. ಮಹಾರಾಷ್ಟ್ರ ಮತ್ತು ಹರಿಯಾಣ ಸರ್ಕಾರಗಳು ಏಪ್ರಿಲ್ ತಿಂಗಳಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಿವೆ. ಮಹಾರಾಷ್ಟ್ರದಲ್ಲಿ ‘ಮಹಿಳಾ ಸಮ್ಮಾನ್ ಯೋಜನೆ’ ಅಡಿಯಲ್ಲಿ ಮಹಿಳೆಯರಿಗೆ ಬಸ್ ಟಿಕೆಟ್ ದರವನ್ನು ಶೇ.50ರಷ್ಟು ಕಡಿಮೆ ಮಾಡಲಾಗಿದೆ. ಇದೇ ವೇಳೆ ಹಿರಿಯ ನಾಗರಿಕರಿಗೂ ಈ ಸೌಲಭ್ಯ ನೀಡಲಾಗುತ್ತಿದೆ. ಇದರಲ್ಲಿ 65 ರಿಂದ 75 ವರ್ಷದ ಹಿರಿಯ ನಾಗರಿಕರು ಪ್ರಯೋಜನ ಪಡೆಯುತ್ತಿದ್ದಾರೆ. ಅದೇ ರೀತಿ 75 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ರಾಜ್ಯದಲ್ಲಿ ಬಸ್ ಸೇವೆ ಉಚಿತವಾಗಿದೆ.


ಬಜೆಟ್ ಅಧಿವೇಶನದಲ್ಲಿ ಘೋಷಣೆ


ನೀವು ಸಹ ಈ ಯೋಜನೆಗೆ ಅರ್ಹ ವ್ಯಕ್ತಿಯಾಗಿದ್ದಲ್ಲಿ ಬಸ್ ದರದಲ್ಲಿ ಈ ರಿಯಾಯಿತಿ ಪಡೆಯುತ್ತೀರಿ. ಈ ಸೌಲಭ್ಯವನ್ನು ರಾಜ್ಯ ಸಾರಿಗೆ ಸಂಸ್ಥೆ ಒದಗಿಸುತ್ತಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಬಜೆಟ್ ಅಧಿವೇಶನದಲ್ಲಿ ಇದನ್ನು ಘೋಷಿಸಿದ್ದಾರೆ. ಇದರೊಂದಿಗೆ ಹರಿಯಾಣ ಸರ್ಕಾರವು ಹಿರಿಯ ನಾಗರಿಕರಿಗೆ ಟಿಕೆಟ್ ದರವನ್ನು ಕಡಿಮೆ ಮಾಡಿದೆ.


ಇದನ್ನೂ ಓದಿ:  Apple Credit Card: ಭಾರತದಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಚಯಿಸಲು Apple ಪ್ಲಾನ್!


ಏಪ್ರಿಲ್ ತಿಂಗಳಿಂದಲೇ ಈ ಸೌಲಭ್ಯ!  


ಹಿರಿಯ ನಾಗರಿಕರ ಪ್ರಯಾಣ ದರವನ್ನು ಶೇ.50ರಷ್ಟು ಕಡಿಮೆ ಮಾಡಲಾಗಿದೆ. ಈ ಪ್ರಯೋಜನವು ಹರಿಯಾಣ ರಾಜ್ಯದಲ್ಲಿ ವಾಸಿಸುವ ಜನರಿಗೆ ಮಾತ್ರ ಲಭ್ಯವಿದೆ. ಈ ಸೌಲಭ್ಯದ ಪ್ರಯೋಜನವನ್ನು ಪಡೆಯಲು ನೀವು ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್ ಬುಕಿಂಗ್ ಸಮಯದಲ್ಲಿ ಹರಿಯಾಣದ ನಿವಾಸಿ ಪ್ರಮಾಣಪತ್ರವನ್ನು ತೋರಿಸಬೇಕಾಗುತ್ತದೆ.


ಹಲವು ರಾಜ್ಯಗಳಲ್ಲಿಯೂ ಸೌಲಭ್ಯ 


ಈ ಹಿಂದೆ ಹರಿಯಾಣದಲ್ಲಿ 60 ವರ್ಷ ವಯಸ್ಸಿನ ಮಹಿಳೆಯರು ಮಾತ್ರ ಈ ಸೌಲಭ್ಯದ ಪ್ರಯೋಜನವನ್ನು ಪಡೆಯುತ್ತಿದ್ದರು. ಆದರೆ ಇನ್ನು ಮುಂದೆ 65 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಈ ಪ್ರಯೋಜನವನ್ನು ಪಡೆಯಲಿದ್ದಾರೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವಾಗಿದೆ. ಇದಲ್ಲದೆ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಹಿರಿಯ ನಾಗರಿಕರಿಗೆ ಬಸ್ ದರದಲ್ಲಿ ರಿಯಾಯಿತಿ ನೀಡಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.