Free Cylinder From Deepavali : ಈಗ ಸಾರ್ವಜನಿಕರಿಗೆ ಮತ್ತೊಂದು ಉಡುಗೊರೆ ಸಿಗಲಿದೆ. ಈ ಬಾರಿಯ ದೀಪಾವಳಿಯಂದು ಸರ್ಕಾರವು 2 ಉಚಿತ ಸಿಲಿಂಡರ್‌ಗಳನ್ನು ನೀಡುವ ಯೋಜನೆಯನ್ನು ಪ್ರಾರಂಭಿಸಲಿದೆ. ಚುನಾವಣೆಯ ಸಮಯದಲ್ಲಿ, ಉತ್ತರಪ್ರದೇಶ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಒಂದು ವರ್ಷದಲ್ಲಿ 2 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದಾಗಿ ಘೋಷಿಸಿತ್ತು. ಇದೀಗ ಈ ಯೋಜನೆಗೆ ಸರ್ಕಾರ ಈ ಬಾರಿ ದೀಪಾವಳಿಯಿಂದ ಚಾಲನೆ ನೀಡಲಿದೆ. 


COMMERCIAL BREAK
SCROLL TO CONTINUE READING

ಪ್ರಮುಖ ಮಾರ್ಗಸೂಚಿ  ಬಿಡುಗಡೆ : 
ಯುಪಿಯ ಮುಖ್ಯ ಕಾರ್ಯದರ್ಶಿ ಈ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆಯ ಕುರಿತು ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. 


ದೀಪಾವಳಿ ಮತ್ತು ಹೋಳಿಕ್ಕೆ  ಉಚಿತ ಸಿಲಿಂಡರ್  : 
ಉಜ್ವಲ ಯೋಜನೆಯಡಿ ದೀಪಾವಳಿ ಮತ್ತು ಹೋಳಿಕ್ಕೆ  ಉಚಿತ ಸಿಲಿಂಡರ್ ನೀಡಲಾಗುವುದು. ಈ ಬಾರಿಯ ದೀಪಾವಳಿಯಂದು ಸರ್ಕಾರವು ಫಲಾನುಭವಿಗಳಿಗೆ ಮೊದಲ ಉಚಿತ ಸಿಲಿಂಡರ್ ಅನ್ನು ನೀಡುತ್ತದೆ. ಮತ್ತೊಂದು ಸಿಲಿಂಡರ್ ಅನ್ನು ಹೋಳಿ ಸಂದರ್ಭದಲ್ಲಿ ನೀಡಲಾಗುವುದು. ಈ ನಿಟ್ಟಿನಲ್ಲಿ ಯೋಗಿ ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸಿದೆ.


ಇದನ್ನೂ ಓದಿ : ಮಗಳ ಹೆಸರಿನಲ್ಲಿ ಈ ಖಾತೆ ಓಪನ್ ಮಾಡಿ! ಮದುವೆ ವೇಳೆ ಸಾಲ ಮಾಡುವ ಅಗತ್ಯವೇ ಇಲ್ಲ


DBT ಮೂಲಕ ಹಣವನ್ನು ವರ್ಗಾವಣೆ : 
ಉತ್ತರ ಪ್ರದೇಶದಲ್ಲಿ ಉಜ್ವಲ ಯೋಜನೆಯಡಿ ಸುಮಾರು 1 ಕೋಟಿ 75 ಲಕ್ಷ ಗ್ಯಾಸ್ ಸಂಪರ್ಕಗಳನ್ನು ನೀಡಲಾಗಿದೆ. ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಸರ್ಕಾರ ಮೊದಲ ಬಾರಿಗೆ ಗ್ಯಾಸ್ ಸಿಲಿಂಡರ್‌ಗಳ ಹಣವನ್ನು ಖಾತೆಗಳಿಗೆ ವರ್ಗಾಯಿಸಲಿದೆ. ಈ ಹಣವನ್ನು ಡಿಬಿಟಿ ಮೂಲಕ ಗ್ಯಾಸ್ ಸಂಪರ್ಕ ಹೊಂದಿರುವವರ ಖಾತೆಗಳಿಗೆ ವರ್ಗಾಯಿಸಲಾಗುವುದು. 


ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ : 
ಲಕ್ನೋದಲ್ಲಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಹಾರ ಮತ್ತು ವ್ಯವಸ್ಥಾಪನಾ ಇಲಾಖೆಯ ಈ ಪ್ರಸ್ತಾವನೆಗೆ ಶೀಘ್ರವೇ ಸಚಿವ ಸಂಪುಟದ ಒಪ್ಪಿಗೆ ದೊರೆಯಲಿದ್ದು, ದೀಪಾವಳಿಗೂ ಮುನ್ನ ಪೂರ್ಣಗೊಳ್ಳಲಿದೆ. 


ಇದನ್ನೂ ಓದಿ : ಮತ್ತೆ ನಿರಂತರ ಬೆಲೆ ಇಳಿಕೆಯತ್ತ ಬಂಗಾರ ! ಇಂದು ಎಷ್ಟಿದೆ ನೋಡಿ ಬಂಗಾರದ ಬೆಲೆ !


ಬಜೆಟ್‌ನಲ್ಲಿ ಹಣ ಬಿಡುಗಡೆ : 
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಹೋಳಿ ಮತ್ತು ದೀಪಾವಳಿಯಂದು ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಸಾರ್ವಜನಿಕ ಕಲ್ಯಾಣ ನಿರ್ಣಯ ಪತ್ರದಲ್ಲಿ ಘೋಷಿಸಿತ್ತು. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಬಜೆಟ್‌ನಲ್ಲಿ 3301.74 ಕೋಟಿ ರೂ.ಯನ್ನು ಕೂಡಾ ಅನುಮೋದಿಸಿತ್ತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.