ಮಗಳ ಹೆಸರಿನಲ್ಲಿ ಈ ಖಾತೆ ಓಪನ್ ಮಾಡಿ! ಮದುವೆ ವೇಳೆ ಸಾಲ ಮಾಡುವ ಅಗತ್ಯವೇ ಇಲ್ಲ

SBI Sukanya Samriddhi Yojana:ಇಂದಿನ ಕಾಲದಲ್ಲಿ ನಿಮ್ಮ ಮಗಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಎಸ್‌ಬಿಐ ಮೂಲಕ ಈ ಕೆಲಸವನ್ನು ಸುಲಭವಾಗಿ ಮಾಡಬಹುದು ಎಂದು  ಟ್ವೀಟ್ ಮಾಡಿದೆ. 

Written by - Ranjitha R K | Last Updated : Oct 17, 2023, 01:53 PM IST
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಟ್ವೀಟ್‌
  • ಎಸ್‌ಬಿಐನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಹೇಗೆ ?
  • ಠೇವಣಿ ಮಾಡಬಹುದಾದ ಗರಿಷ್ಠ ಮೊತ್ತ ಎಷ್ಟು?
ಮಗಳ ಹೆಸರಿನಲ್ಲಿ ಈ ಖಾತೆ ಓಪನ್ ಮಾಡಿ! ಮದುವೆ ವೇಳೆ ಸಾಲ ಮಾಡುವ ಅಗತ್ಯವೇ ಇಲ್ಲ  title=

SBI Sukanya Samriddhi Yojana : ಮಗಳ ವಿದ್ಯಾಭ್ಯಾಸ ಮತ್ತು ಮದುವೆಯ ಖರ್ಚು ವೆಚ್ಚಗಳ ಚಿಂತೆ ಸಾಮಾನ್ಯವಾಗಿ ಎಲ್ಲಾ ಪೋಷಕರನ್ನು ಕೂಡಾ ಕಾಡುತ್ತದೆ.  ಆದರೆ ಈಗ ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಗ್ರಾಹಕರಿಗೆ ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ತೆರೆಯುವ ಅವಕಾಶವನ್ನು ನೀಡುತ್ತಿದೆ. ಈಗ ನೀವು ಸರ್ಕಾರದ ಈ ಯೋಜನೆಯ ಲಾಭವನ್ನು ಸುಲಭವಾಗಿ ಪಡೆಯಬಹುದು. ಈ ಕುರಿತು ಟ್ವೀಟ್ ಮಾಡುವ ಮೂಲಕ ಎಸ್ ಬಿಐ ಮಾಹಿತಿ ನೀಡಿದೆ. 

ಎಸ್‌ಬಿಐ ಟ್ವೀಟ್  : 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಟ್ವೀಟ್‌ನಲ್ಲಿ ಇಂದಿನ ಕಾಲದಲ್ಲಿ ನಿಮ್ಮ ಮಗಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಅಷ್ಟು ಸುಲಭವಲ್ಲ. ಆದರೆ, ಎಸ್‌ಬಿಐ ಮೂಲಕ ಈ ಕೆಲಸವನ್ನು ಸುಲಭವಾಗಿ ಮಾಡಬಹುದು ಎಂದು  ಟ್ವೀಟ್ ಮಾಡಿದೆ. ಇಂದೇ ನಿಮ್ಮ ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು ಎಂದು  ಹೇಳಿದೆ. 

ಇದನ್ನೂ ಓದಿ : ಮತ್ತೆ ನಿರಂತರ ಬೆಲೆ ಇಳಿಕೆಯತ್ತ ಬಂಗಾರ ! ಇಂದು ಎಷ್ಟಿದೆ ನೋಡಿ ಬಂಗಾರದ ಬೆಲೆ !

ಎಸ್‌ಬಿಐನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಹೇಗೆ ? : 
>> ಮೊದಲನೆಯದಾಗಿ ನೀವು ಎಸ್‌ಬಿಐನ ಇಂಟರ್ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಆಗಬೇಕು.
>> ಇದರ ನಂತರ  ಸರ್ವಿಸ್ ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
>> ಈಗ  ಸುಕನ್ಯಾ ಸಮೃದ್ಧಿ  ಓಪನಿಂಗ್ (By Visiting Branch)ಮೇಲೆ ಕ್ಲಿಕ್ ಮಾಡಬೇಕು 

ಎಷ್ಟು ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು? : 
ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಖಾತೆಯನ್ನು ಮಾತ್ರ ತೆರೆಯಬಹುದು. ಪೋಷಕರು ಗರಿಷ್ಠ 2 ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಅವಳಿ ಅಥವಾ ತ್ರಿವಳಿ ಮಕ್ಕಳು ಒಟ್ಟಿಗೆ ಜನಿಸಿದರೆ, ಮೂರನೇ ಮಗುವೂ ಪ್ರಯೋಜನವನ್ನು ಪಡೆಯುತ್ತದೆ.

ಇದನ್ನೂ ಓದಿ : ಸಜ್ಜನ್ ಜಿಂದಾಲ್ ನೇತೃತ್ವದಲ್ಲಿ ಐಕೆಎಫ್ ಪುನಾರಚನೆ: ಎಂ ಬಿ ಪಾಟೀಲ

ಠೇವಣಿ ಮಾಡಬಹುದಾದ ಗರಿಷ್ಠ ಮೊತ್ತ ಎಷ್ಟು? : 
ಈ ಸರ್ಕಾರಿ ಯೋಜನೆಯಲ್ಲಿ ವಾರ್ಷಿಕವಾಗಿ ಕನಿಷ್ಠ  250 ರೂಪಾಯಿಯಿಂದ ಗರಿಷ್ಠ 1.5 ಲಕ್ಷ ಹೂಡಿಕೆ ಮಾಡಬಹುದು. 

10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗಳ ಹೆಸರಿನಲ್ಲಿ ಖಾತೆ ತೆರೆಯಬಹುದು : 
ನಿಮ್ಮ ಮಗಳಿಗೆ 10 ವರ್ಷ ತುಂಬುವ ಮೊದಲು ಈ ಖಾತೆಯನ್ನು ತೆರೆಯಬಹುದು. ಇದರಲ್ಲಿ, ಖಾತೆಯನ್ನು ತೆರೆಯುವ ಆರಂಭಿಕ ವರ್ಷಗಳಲ್ಲಿ ಖಾತೆಗೆ ಹಣವನ್ನು ಠೇವಣಿ ಮಾಡಬೇಕು. ನಿಮ್ಮ ಮಗಳಿಗೆ 21 ವರ್ಷವಾದಾಗ,  ಮೆಚ್ಯುರಿಟಿ ಮೊತ್ತ ಕೈ ಸೇರುತ್ತದೆ. 

ನೀವು 18 ವರ್ಷ ವಯಸ್ಸಿನಲ್ಲೂ ಹಣವನ್ನು ಹಿಂಪಡೆಯಬಹುದು : 
18 ವರ್ಷದ ನಂತರ ಅಂದರೆ ಮಗಳ ಮಾಡುವೆ ಸಂದರ್ಭದಲ್ಲಿ ಹಣವನ್ನು ಹಿಂಪಡೆಯಬಹುದು. ಇದಲ್ಲದೆ, 18 ವರ್ಷ ವಯಸ್ಸಿನ ನಂತರ, ನಿಮ್ಮ ಮಗಳ ಶಿಕ್ಷಣಕ್ಕಾಗಿ ಕೂಡಾ ಶೇಕಡಾ 50 ರಷ್ಟು ಹಣವನ್ನು ಹಿಂಪಡೆಯಬಹುದು.

ಇದನ್ನೂ ಓದಿ : Arecanut Rate: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಕುಸಿತ!

ಯಾವ ದಾಖಲೆಗಳು ಬೇಕಾಗುತ್ತವೆ : 
ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ತೆರೆಯಲು ಅರ್ಜಿದಾರರು ತಮ್ಮ ಮಗಳ ಜನನ ಪ್ರಮಾಣಪತ್ರವನ್ನು ಅಂಚೆ ಕಚೇರಿ ಅಥವಾ ಬ್ಯಾಂಕ್‌ಗೆ ಅರ್ಜಿಯೊಂದಿಗೆ ಸಲ್ಲಿಸಬೇಕು. ಮಗು ಮತ್ತು ಪೋಷಕರ ಗುರುತಿನ ಚೀಟಿ (ಪ್ಯಾನ್ ಕಾರ್ಡ್, ಪಡಿತರ ಚೀಟಿ, ಚಾಲನಾ ಪರವಾನಗಿ, ಪಾಸ್‌ಪೋರ್ಟ್) ಮತ್ತು ನಿವಾಸದ ಪುರಾವೆ (ಪಾಸ್‌ಪೋರ್ಟ್, ಪಡಿತರ ಚೀಟಿ, ವಿದ್ಯುತ್ ಬಿಲ್, ದೂರವಾಣಿ ಬಿಲ್, ನೀರಿನ ಬಿಲ್) ಸಲ್ಲಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News