Rules change from 1 June 2024: ಬರುವ ಜೂನ್‌ 1ರ ಹೊಸ ತಿಂಗಳ ಪ್ರಾರಂಭದೊಂದಿಗೆ ಹಲವು ನಿಯಮಗಳಲ್ಲಿ ಬದಲಾವಣೆಯಾಗುತ್ತವೆ. ಡ್ರೈವಿಂಗ್ ಲೈಸೆನ್ಸ್‌ನಿಂದ ಗ್ಯಾಸ್ ಸಿಲಿಂಡರ್‌ವರೆಗೆ, ಹೊಸ ನಿಯಮಗಳು ಹೊಸ ತಿಂಗಳ ಆರಂಭದಿಂದ ಜಾರಿಗೆ ಬರಲಿವೆ. ಈ ಬದಲಾವಣೆಗಳ ಪರಿಣಾಮ ನೇರವಾಗಿ ಶ್ರೀಸಾಮಾನ್ಯನ ಜೇಬಿನ ಮೇಲೆ ಬೀಳಲಿದೆ. ನೀವು ಹೊಸ ನಿಯಮಗಳ ಬಗ್ಗೆ ತಿಳಿದಿರಬೇಕು, ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ.  


COMMERCIAL BREAK
SCROLL TO CONTINUE READING

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ?  


ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಬದಲಾಯಿಸುತ್ತವೆ. ಪ್ರತಿ ತಿಂಗಳ ಮೊದಲ ದಿನ ಬೆಳಗ್ಗೆ 6ಗಂಟೆಗೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಬಿಡುಗಡೆ ಮಾಡಲಾಗುತ್ತದೆ. ಈ ಬಾರಿಯೂ ಜೂನ್ 1ರಂದು ಗ್ಯಾಸ್ ಸಿಲಿಂಡರ್‌ಗಳ ಹೊಸ ದರಗಳು ಬಿಡುಗಡೆಯಾಗಲಿವೆ. 14KG ದೇಶೀಯ ಮತ್ತು 19KG ವಾಣಿಜ್ಯ ಸಿಲಿಂಡರ್‌ಗಳ ಬೆಲೆಗಳ ಬದಲಾವಣೆ ಬಗ್ಗೆ ತೈಲ ಕಂಪನಿಗಳು ನಿರ್ಧರಿಸಲಿವೆ. 


ಇದನ್ನೂ ಓದಿ: Gold Rate Today: ಬಿಗ್ ರಿಲೀಫ್.. ಭಾರೀ ಇಳಿಕೆಯಾದ ಚಿನ್ನದ ಬೆಲೆ !


ಆಧಾರ್ ಕಾರ್ಡ್ ಅಪ್‌ಡೇಟ್‌


UIDAI ಆಧಾರ್ ಕಾರ್ಡ್ ಅಪ್‌ಡೇಟ್‌ ಬಗ್ಗೆ ಮಾಹಿತಿಯನ್ನು ನೀಡಿದೆ. ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್‌ಡೇಟ್‌ ಮಾಡಲು ಜೂನ್ 14ರವರೆಗೆ ದಿನಾಂಕವಿದೆ. ಯಾವುದೇ ಶುಲ್ಕವಿಲ್ಲದೆ ನೀವು ಸುಲಭವಾಗಿ ಆಧಾರ್ ಅನ್ನು ಜೂನ್ 14ರವರೆಗೆ ಉಚಿತವಾಗಿ ಅಪ್‌ಡೇಟ್‌ ಮಾಡಬಹುದು. ಆಫ್‌ಲೈನ್ ಅಪ್‌ಡೇಟ್‌ಗಾಗಿ ಅಂದರೆ ಆಧಾರ್ ಕೇಂದ್ರಕ್ಕೆ ಹೋಗುವಾಗ, ನೀವು ಪ್ರತಿ ಅಪ್‌ಡೇಟ್‌ಗೆ 50 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. 


ಚಾಲನಾ ಪರವಾನಗಿ ಹೊಸ ನಿಯಮ 


ಜೂನ್ 1ರಿಂದ ಸಂಚಾರ ನಿಯಮದಲ್ಲೂ ಬದಲಾವಣೆ ಮಾಡಲಾಗಿದೆ. ಜೂನ್ 1ರಿಂದ ನೀವು ಡ್ರೈವಿಂಗ್ ಲೈಸೆನ್ಸ್‌ಗಾಗಿ RTOಗೆ ಹೋಗಬೇಕಾಗಿಲ್ಲ. ಡ್ರೈವಿಂಗ್ ಸ್ಕೂಲ್‌ಗೆ ಹೋಗಿ ನಿಮ್ಮ DLಅನ್ನು ಸಹ ನೀವು ಪಡೆಯಬಹುದು, ಹೊಸ ನಿಯಮದ ಪ್ರಕಾರ ಆರ್‌ಟಿಒಗೆ ಹೋಗಿ ಪರೀಕ್ಷೆ ತೆಗೆದುಕೊಳ್ಳುವ ಅಗತ್ಯವಿಲ್ಲ. ನೀವು ಅಧಿಕೃತ ಖಾಸಗಿ ಡ್ರೈವಿಂಗ್ ಇನ್ಸ್ಟಿಟ್ಯೂಟ್ನಿಂದ ಡ್ರೈವಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು.


ಅಪ್ರಾಪ್ತ ವಯಸ್ಕರಿಗೆ 25 ಸಾವಿರ ರೂ. ದಂಡ 


ಜೂನ್ 1ರಿಂದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಲಾಯಿಸಿದರೆ ಭಾರೀ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ. ಅಪ್ರಾಪ್ತರು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ 25,000 ರೂ.ವರೆಗೆ ದಂಡ ತೆರಬೇಕಾಗುತ್ತದೆ. ರಸ್ತೆ ಅಪಘಾತಗಳನ್ನು ತಡೆಯಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.  


ಇದನ್ನೂ ಓದಿ: Important: HSRP ನಂಬರ್‌ ಪ್ಲೇಟ್‌ ಬಗ್ಗೆ ಇಲ್ಲಿದೆ ನೋಡಿ ಬಿಗ್‌ ಅಪ್‌ಡೇಟ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.