ಸಣ್ಣ ಬ್ಯಾಂಕ್, ದೊಡ್ಡ ಆದಾಯ: ಈ 5 ಬ್ಯಾಂಕ್‌ಗಳ FDಯಲ್ಲಿ 9.60% ಸೂಪರ್-ಡ್ಯೂಪರ್ ಬಡ್ಡಿ!

Highest Interest Rate on FD: ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌(ESAF Small Finance Bank)ನಲ್ಲಿ ಹೂಡಿಕೆ ಮಾಡುವ ಗ್ರಾಹಕರು 3 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿ ಅವಧಿಯ ಮೇಲೆ 8.50 ಪ್ರತಿಶತ ಬಡ್ಡಿಯನ್ನು ಪಡೆಯುತ್ತಾರೆ, ಹಿರಿಯ ನಾಗರಿಕರು 9 ಪ್ರತಿಶತ ಬಡ್ಡಿಯನ್ನು ಪಡೆಯುತ್ತಾರೆ. 

FD ಮೇಲೆ ಹೆಚ್ಚಿನ ಬಡ್ಡಿ ದರ: ಜನರು ತಮ್ಮ ಉಳಿತಾಯವನ್ನು ಖಾತರಿಯ ಆದಾಯದೊಂದಿಗೆ ಸುರಕ್ಷಿತ ಹೂಡಿಕೆಗಾಗಿ ಎಫ್‌ಡಿಯಲ್ಲಿ ಹೂಡಿಕೆ ಮಾಡುತ್ತಾರೆ. ನೀವು ಎಫ್‌ಡಿಯಲ್ಲಿ ಉತ್ತಮ ಆದಾಯವನ್ನು ಬಯಸಿದರೆ, ಬಂಪರ್ ಬಡ್ಡಿ ದರಗಳನ್ನು ನೀಡುವ ಬ್ಯಾಂಕ್‌ಗಳಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಬಹುದು. 5 ಸಣ್ಣ ಬ್ಯಾಂಕುಗಳಲ್ಲಿ ನಿಮಗೆ ಶೇ.9.60ರಷ್ಟು ಸೂಪರ್‌ ಡ್ಯೂಪರ್‌ ಬಡ್ಡಿ ದೊರೆಯುತ್ತದೆ. ಇಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಬಡ್ಡಿಯನ್ನು ನೀವು ಪಡೆಯಬಹುದು. ನಿಮ್ಮ ಉಳಿತಾಯದ ಹಣಕ್ಕೆ ದೊಡ್ಡ ಆದಾಯವನ್ನು ಸಹ ಗಳಿಸಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಎಫ್‌ಡಿ ಅಂದರೆ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಸುರಕ್ಷಿತ ಮತ್ತು ಅತ್ಯಂತ ಜನಪ್ರಿಯ ವಿಧಾನವಾಗಿದೆ. ಖಾತರಿಯ ಆದಾಯದೊಂದಿಗೆ ಸುರಕ್ಷಿತ ಹೂಡಿಕೆಗಾಗಿ, ಜನರು ತಮ್ಮ ಉಳಿತಾಯವನ್ನು FDಯಲ್ಲಿ ಹೂಡಿಕೆ ಮಾಡುತ್ತಾರೆ. ನೀವು ಎಫ್‌ಡಿಯಲ್ಲಿ ಉತ್ತಮ ಆದಾಯವನ್ನು ಬಯಸಿದರೆ, ಬಂಪರ್ ಬಡ್ಡಿ ದರಗಳನ್ನು ನೀಡುವ ಬ್ಯಾಂಕ್‌ಗಳಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಬಹುದು. ಗ್ರಾಹಕರನ್ನು ಆಕರ್ಷಿಸಲು ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFCಗಳು) ಬಂಪರ್ ಬಡ್ಡಿ ದರಗಳನ್ನು ನೀಡುತ್ತವೆ. ಇಂತಹ ಐದು ಎನ್‌ಬಿಎಫ್‌ಸಿಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ, ಇಲ್ಲಿ ಶೇ.6, 7 ಅಥವಾ 8ರಷ್ಟು ಬಡ್ಡಿಗೆ ಬದಲಾಗಿ, ಶೇ.9.6ರವರೆಗಿನ ಬಡ್ಡಿ ದರಗಳು ಲಭ್ಯವಿದೆ. ಇವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 

2 /6

ನೀವು ಎಫ್‌ಡಿಯಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಉತ್ತಮ ಆಯ್ಕೆಯಾಗಿದೆ. ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ FD ಮೇಲೆ ಬಂಪರ್ ರಿಟರ್ನ್ಸ್ ಪಡೆಯುತ್ತಿದೆ. ಈ ಬ್ಯಾಂಕ್ ನಿಮಗೆ FD ಮೇಲೆ ಶೇ.9.60ರಷ್ಟು ಬಡ್ಡಿಯನ್ನು ನೀಡುತ್ತಿದೆ. ನೀವು 5 ವರ್ಷಗಳ ಕಾಲ ಇಲ್ಲಿ ಎಫ್‌ಡಿ ಮಾಡಿದರೆ, ಹಿರಿಯ ನಾಗರಿಕರಿಗೆ ಶೇ.9.10ರಿಂದ ಶೇ.9.60ರವರೆಗಿನ ಬಂಪರ್ ಬಡ್ಡಿಯ ಕೊಡುಗೆಯನ್ನು ಪಡೆಯುತ್ತೀರಿ.  

3 /6

ಅದೇ ರೀತಿ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ 1,001 ದಿನಗಳ ಎಫ್‌ಡಿಯಲ್ಲಿ ಸಾಮಾನ್ಯ ನಾಗರಿಕರಿಗೆ 9 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 9.50 ಪ್ರತಿಶತದವರೆಗೆ ಬಡ್ಡಿಯನ್ನು ನೀಡುತ್ತದೆ. ಸಾಮಾನ್ಯ ಜನರಿಗೆ ಹೋಲಿಸಿದರೆ ಹಿರಿಯ ನಾಗರಿಕರು ಶೇ.0.5ರಷ್ಟು ಹೆಚ್ಚುವರಿ ಬಡ್ಡಿ ದೊರೆಯುತ್ತದೆ.  

4 /6

ಅದೇ ರೀತಿ ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ನೀವು 1,000 ದಿನಗಳ ಎಫ್‌ಡಿಯಲ್ಲಿ ಶೇ.8.51ರಷ್ಟು ಬಡ್ಡಿಯನ್ನು ಪಡೆಯುತ್ತೀರಿ. ಹಿರಿಯ ನಾಗರಿಕರು ಈ ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡಿದರೆ ಅವರಿಗೆ ಶೇ.9.11ರಷ್ಟು ಬಡ್ಡಿ ಸಿಗುತ್ತದೆ.  

5 /6

ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ಸಹ ಉತ್ತಮ ಬಡ್ಡಿ ನೀಡುತ್ತಿದೆ. ಈ ಸಣ್ಣ ಹಣಕಾಸು ಬ್ಯಾಂಕ್‌ನಲ್ಲಿ ಸಾಮಾನ್ಯ ಜನರು 888 ದಿನಗಳ ಎಫ್‌ಡಿಯಲ್ಲಿ ಶೇ.8.50 ಬಡ್ಡಿಯನ್ನು ಪಡೆಯುತ್ತಾರೆ, ಹಿರಿಯ ನಾಗರಿಕರು ಅದೇ ಅವಧಿಗೆ ಶೇ.9ರವರೆಗೆ ಬಡ್ಡಿಯನ್ನು ಪಡೆಯುತ್ತಾರೆ. 

6 /6

ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡುವ ಗ್ರಾಹಕರು 3 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿ ಅವಧಿಯ ಮೇಲೆ 8.50 ಪ್ರತಿಶತ ಬಡ್ಡಿಯನ್ನು ಪಡೆಯುತ್ತಾರೆ, ಹಿರಿಯ ನಾಗರಿಕರು 9 ಪ್ರತಿಶತ ಬಡ್ಡಿಯನ್ನು ಪಡೆಯುತ್ತಾರೆ.