ಕೆ.ಜಿ ಅಕ್ಕಿಗೆ ಕೇವಲ 29 ರೂಪಾಯಿ ! ಈ ದಿನದಿಂದ Bharat Rice ಮಾರಾಟ ಆರಂಭ !
Bharat Rice Price:ಸರ್ಕಾರದ ಯೋಜನೆಯ ಅಡಿಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಮುಂದಿನ ವಾರದಿಂದ ಕೆ.ಜಿಗೆ 29 ರೂ.ಯಂತೆ `ಭಾರತ್ ರೈಸ್` (Bharat Rice) ಮಾರಾಟ ಆರಂಭವಾಗಲಿದೆ.
Bharat Rice Price : ಸಾಮಾನ್ಯ ಜನರಿಗೆ ಪರಿಹಾರ ನೀಡಲು ಮತ್ತು ಚಿಲ್ಲರೆ ಹಣದುಬ್ಬರವನ್ನು ಕಡಿಮೆ ಮಾಡಲು ಸರ್ಕಾರವು ಅಕ್ಕಿಯನ್ನು ಅಗ್ಗದ ದರದಲ್ಲಿ ಮಾರಾಟ ಮಾಡಲು ಮುಂದಾಗಿದೆ. ಸರ್ಕಾರದ ಯೋಜನೆಯ ಅಡಿಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಮುಂದಿನ ವಾರದಿಂದ ಕೆ.ಜಿಗೆ 29 ರೂ.ಯಂತೆ 'ಭಾರತ್ ರೈಸ್' (Bharat Rice) ಮಾರಾಟ ಆರಂಭವಾಗಲಿದೆ. ಇದಕ್ಕಾಗಿ ಅಕ್ಕಿ ದಾಸ್ತಾನುಗಳನ್ನು ಬಹಿರಂಗಪಡಿಸುವಂತೆ ವರ್ತಕರಿಗೂ ತಿಳಿಸಲಾಗಿದೆ.ಮಾರುಕಟ್ಟೆಯಲ್ಲಿ ಏರುತ್ತಿರುವ ಬೆಲೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.ವಿವಿಧ ಬಗೆಯ ಅಕ್ಕಿಗಳ ರಫ್ತು ನಿಷೇಧದ ಹೊರತಾಗಿಯೂ, ಕಳೆದ ಒಂದು ವರ್ಷದಲ್ಲಿ ಅಕ್ಕಿಯ ಚಿಲ್ಲರೆ ಮತ್ತು ಸಗಟು ದರಗಳು ಸುಮಾರು 15 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಹೇಳಿದ್ದಾರೆ.
5 ಮತ್ತು 10 ಕೆಜಿ ಪ್ಯಾಕೆಟ್‌ಗಳಲ್ಲಿ ದೊರೆಯಲಿದೆ ಅಕ್ಕಿ :
ಬೆಲೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರೀಯ ಮಳಿಗೆಗಳ ಮೂಲಕ ಅಕ್ಕಿಯನ್ನು ಚಿಲ್ಲರೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಇದರ ಅಡಿಯಲ್ಲಿ ಪ್ರತಿ ಕೆಜಿಗೆ 29 ರೂ.ನಂತೆ 'ಭಾರತ್ ರೈಸ್' (Bharat Rice) ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ 'ಭಾರತ್ ರೈಸ್' ಅನ್ನು ಮಾರಾಟ ಮಾಡುತ್ತದೆ. ಮುಂದಿನ ವಾರದಿಂದ 5 ಕೆಜಿ ಹಾಗೂ 10 ಕೆಜಿ ಪ್ಯಾಕೆಟ್ ನಲ್ಲಿ Bharat Rice ದೊರೆಯಲಿದೆ ಎಂದು ಸಂಜೀವ್ ಚೋಪ್ರಾ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಸರ್ಕಾರವು ಐದು ಲಕ್ಷ ಟನ್ ಅಕ್ಕಿಯನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ನಿಗದಿಪಡಿಸಿದೆ.
ಇದನ್ನೂ ಓದಿ : ಲೋಕಸಭೆ ಚುನಾವಣೆಗೂ Voter ID Card Correction ಮಾಡಿಸಬೇಕೆ ? ಇಲ್ಲಿದೆ ಆನ್‌ಲೈನ್ ಪ್ರಕ್ರಿಯೆಯ ಹಂತ ಹಂತದ ವಿವರ
ಈ ಆಹಾರ ಪದಾರ್ಥಗಳ ಬೆಲೆಯಲ್ಲಿಯೂ ಇಳಿಕೆ :
ಹಣದುಬ್ಬರಕ್ಕೆ ಕಡಿವಾಣ ಹಾಕಲು ಈಗಾಗಲೇ 'ಭಾರತ್ ಅಟ್ಟ' ಅಂದರೆ ಗೋಧಿ ಹಿಟ್ಟನ್ನು ಕೆ.ಜಿಗೆ 27.50 ರೂ. ಯಂತೆ, 'ಭಾರತ್ ದಾಲ್' ಅನ್ನು ಕೆ.ಜಿಗೆ 60 ರೂ. ಯಂತೆ ಮಾರಾಟ ಮಾಡಲಾಗುತ್ತಿದೆ. ಅಕ್ಕಿ ರಫ್ತಿನ ಮೇಲಿನ ನಿಷೇಧವನ್ನು ತೆಗೆದುಹಾಕುವ ಯಾವುದೇ ಯೋಜನೆ ಇನ್ನೂ ಇಲ್ಲ ಎಂದು ಸರ್ಕಾರ ಹೇಳಿದೆ. ಅಕ್ಕಿ ರಫ್ತಿನ ಮೇಲಿನ ನಿಷೇಧವನ್ನು ಹಿಂಪಡೆಯಲಾಗುತ್ತಿದೆ ಎನ್ನುವುದು ಕೇವಲ ವದಂತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹೊಸ ದರದ ಅಕ್ಕಿ ದಾಸ್ತಾನು ಬಗ್ಗೆ ಮಾಹಿತಿ ನೀಡುವಂತೆ ಚಿಲ್ಲರೆ ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳು ಮತ್ತು ಆಹಾರ ಸಂಸ್ಕರಣೆದಾರರಿಗೆ ತಿಳಿಸಲಾಗಿದೆ ಎಂದು ಚೋಪ್ರಾ ಹೇಳಿದ್ದಾರೆ.
ಅಕ್ಕಿ ಸಂಗ್ರಹಣೆಗೆ ಸರ್ಕಾರ ಮಿತಿಯನ್ನು ನಿಗದಿಪಡಿಸುವ ಪ್ರಶ್ನೆಗೆ ಉತರಿಸಿದ ಚೋಪ್ರಾ, ಬೆಲೆಗಳನ್ನು ಕಡಿಮೆ ಮಾಡಲು 'ಎಲ್ಲಾ ಆಯ್ಕೆಗಳು ಮುಕ್ತವಾಗಿವೆ' ಎಂದು ಹೇಳಿದರು. ಅಕ್ಕಿ ಹೊರತುಪಡಿಸಿ ಎಲ್ಲಾ ಅಗತ್ಯ ಆಹಾರ ಪದಾರ್ಥಗಳ ಬೆಲೆ ನಿಯಂತ್ರಣದಲ್ಲಿದೆ ಎಂದು ಕಾರ್ಯದರ್ಶಿ ತಿಳಿಸಿದರು. ಮುಂಬರುವ ದಿನಗಳಲ್ಲಿ ಭಾರತ್ ದಾಲ್‌ನಂತೆ ಭಾರತ್ ರೈಸ್ ಸಹ ಸಹಕಾರಿ ಮಳಿಗೆಗಳು ಮತ್ತು ದೊಡ್ಡ ರಿಟೇಲ್ ಚೈನ್ ನಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ : RBI MPC Meeting: ಮಧ್ಯಮ ವರ್ಗದ ಜನರ ಕೈ ಹಿಡಿಯಲಿದೆ RBI : ಮುಂದಿನ ವಾರ ಸಿಗಲಿದೆ ಸಿಹಿ ಸುದ್ದಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ