UPI Transaction Limit: ಡಿಜಿಟಲ್ ಕ್ಯಾಶ್ ಯುಗದಲ್ಲಿ ಈಗ ಜನರು ನಗದು ಬದಲಿಗೆ ಆನ್‌ಲೈನ್ ವಹಿವಾಟುಗಳನ್ನು ಮಾಡಲು ಬಯಸುತ್ತಾರೆ. ದೇಶಗಳಲ್ಲಿ ಆನ್‌ಲೈನ್ ವಹಿವಾಟುಗಳು ವೇಗವಾಗಿ ಹೆಚ್ಚುತ್ತಿವೆ. UPI ಮೂಲಕವೇ ಪಾವತಿಗಳನ್ನು ಮಾಡುವಂತಹ ಅನೇಕ ಜನರಿದ್ದಾರೆ.


COMMERCIAL BREAK
SCROLL TO CONTINUE READING

ನೀವು UPI ಮೂಲಕ ಪಾವತಿಗಳನ್ನು ಮಾಡುತ್ತಿದ್ದರೆ ಈ ಸುದ್ದಿ ನಿಮಗೆ ತುಂಬಾ ಉಪಯುಕ್ತವಾಗಲಿದೆ. ನೀವು UPI ಅಪ್ಲಿಕೇಶನ್‌ನ ಮೂಲಕ ಮಿತಿಯವರೆಗೆ ಮಾತ್ರ ಪಾವತಿಗಳನ್ನು ಮಾಡಬಹುದು. ಪ್ರತಿ ಬ್ಯಾಂಕ್ ಯುಪಿಐ ವಹಿವಾಟುಗಳಿಗೆ ದೈನಂದಿನ ಮಿತಿಯನ್ನು ಹೊಂದಿದೆ. ಇದರರ್ಥ ನೀವು ಒಂದು ದಿನದಲ್ಲಿ ನಿರ್ದಿಷ್ಟ ಮೊತ್ತದವರೆಗೆ ಮಾತ್ರ ಹಣವನ್ನು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು.


ಇದನ್ನೂ ಓದಿ: Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಬುಧವಾರದ ಅಡಿಕೆ ಧಾರಣೆ ಹೇಗಿದೆ ನೋಡಿ


ಇದಲ್ಲದೇ ಯುಪಿಐ ಮೂಲಕ ಒಂದೇ ಬಾರಿಗೆ ಎಷ್ಟು ಹಣವನ್ನು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು ಎಂಬುವುದಕ್ಕೂ ವಿವಿಧ ಬ್ಯಾಂಕ್‌ಗಳು ಇದಕ್ಕೆ ವಿಭಿನ್ನ ಮಿತಿಗಳನ್ನು ಹಾಕತ್ತವೆ. ಆದರೆ, ಈ ಅಪ್ಲಿಕೇಶನ್‌ಗಳ ಮೂಲಕ ನೀವು ಹಣ ಕಳುಹಿಸುವಾಗ ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.


ವಹಿವಾಟಿನ ಮಿತಿ:


NPCI ಮಾರ್ಗಸೂಚಿಗಳ ಪ್ರಕಾರ, ನೀವು UPI ಮೂಲಕ ಒಂದು ದಿನದಲ್ಲಿ 1 ಲಕ್ಷದವರೆಗಿನ ವಹಿವಾಟುಗಳನ್ನು ಮಾಡಬಹುದು. ಈ ಮಿತಿಯು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗಬಹುದು. ಕೆನರಾ ಬ್ಯಾಂಕ್‌ನಲ್ಲಿ ದಿನದ ಮಿತಿ ಕೇವಲ 25,000 ರೂ.ಗಳಾಗಿದ್ದರೆ ಎಸ್‌ಬಿಐನಲ್ಲಿ ದಿನದ ಮಿತಿ 1 ಲಕ್ಷ ರೂ. ಹಣ ವರ್ಗಾವಣೆ ಮಿತಿಯ ಜೊತೆಗೆ, ಒಂದು ದಿನದಲ್ಲಿ ಮಾಡಬಹುದಾದ UPI ವರ್ಗಾವಣೆಗಳ ಸಂಖ್ಯೆಯ ಮೇಲೆ ಮಿತಿ ಇದೆ.


ದೈನಂದಿನ UPI ವರ್ಗಾವಣೆ ಮಿತಿಯನ್ನು 20 ವಹಿವಾಟುಗಳಿಗೆ ಹೊಂದಿಸಲಾಗಿದೆ. ಮಿತಿ ಮುಗಿದ ನಂತರ, ಮಿತಿಯನ್ನು ನವೀಕರಿಸಲು 24 ಗಂಟೆಗಳ ಕಾಲ ಕಾಯಬೇಕಾಗುತ್ತದೆ. ವಿಭಿನ್ನ UPI ಅಪ್ಲಿಕೇಶನ್‌ಗಳು ವಿಭಿನ್ನ ಮಿತಿಗಳನ್ನು ಹೊಂದಿವೆ. ಯಾವ ಆಪ್ ಮೂಲಕ ನೀವು ಪ್ರತಿದಿನ ಎಷ್ಟು ವಹಿವಾಟು ಮಾಡಬಹುದು ಎಂಬುದನ್ನು ಈಗ ತಿಳಿದುಕೊಳ್ಳೋಣ.


ಅಮೆಜಾನ್ ಪೇ ಯುಪಿಐ ಮೂಲಕ ಪಾವತಿ ಮಾಡುವ ಗರಿಷ್ಠ ಮಿತಿಯನ್ನು 1 ಲಕ್ಷಕ್ಕೆ ನಿಗದಿಪಡಿಸಿದೆ. Amazon Pay UPI ನಲ್ಲಿ ನೋಂದಾಯಿಸಿದ ನಂತರ ಬಳಕೆದಾರರು ಮೊದಲ 24 ಗಂಟೆಗಳಲ್ಲಿ 5000 ರೂಪಾಯಿಗಳವರೆಗೆ ಮಾತ್ರ ವಹಿವಾಟು ಮಾಡಬಹುದು. ಮತ್ತೊಂದೆಡೆ, ಬ್ಯಾಂಕ್ ಅನ್ನು ಅವಲಂಬಿಸಿ, ದಿನಕ್ಕೆ ವಹಿವಾಟಿನ ಸಂಖ್ಯೆಯನ್ನು 20 ಕ್ಕೆ ನಿಗದಿಪಡಿಸಲಾಗಿದೆ.


PhonePe ಯುಪಿಐ ಮೂಲಕ ಒಂದು ದಿನದ ಗರಿಷ್ಠ ಮೊತ್ತದ ಮಿತಿ 1 ಲಕ್ಷ ರೂ. ಈಗ ಈ ಅಪ್ಲಿಕೇಶನ್ ಮೂಲಕ ಒಂದು ದಿನದಲ್ಲಿ ಗರಿಷ್ಠ 10 ಅಥವಾ 20 ವಹಿವಾಟುಗಳನ್ನು ಮಾಡಬಹುದು.


Google Pay ಅಥವಾ Gpay ನೊಂದಿಗೆ ಭಾರತೀಯ ಬಳಕೆದಾರರು ದಿನವಿಡೀ UPI ಮೂಲಕ 1 ಲಕ್ಷದವರೆಗೆ ಪಾವತಿಗಳನ್ನು ಮಾಡಬಹುದು. ನೀವು ಒಂದು ದಿನದಲ್ಲಿ ಕೇವಲ 10 ವಹಿವಾಟುಗಳನ್ನು ಮಾಡಬಹುದು. ಅಂದರೆ, ನೀವು ಒಂದು ದಿನದಲ್ಲಿ ಗರಿಷ್ಠ 10 ಸಾವಿರದ 10 ವಹಿವಾಟುಗಳನ್ನು ಪೂರ್ಣಗೊಳಿಸಬಹುದು.


ಇದನ್ನೂ ಓದಿ: Republic day sale 2023: ರೈಲು ಟಿಕೆಟ್ ದರದಲ್ಲಿ ವಿಮಾನಯಾನ .! 8 ತಿಂಗಳವರೆಗೆ ಅಗ್ಗದ ದರದಲ್ಲಿ ವಿಮಾನ ಪ್ರಯಾಣ ಸಾಧ್ಯ .!


Paytm UPI ಮೂಲಕ, ನೀವು ಒಂದು ದಿನದಲ್ಲಿ ಕೇವಲ 1 ಲಕ್ಷ ರೂ. ಪಾವತಿಗಳನ್ನು ಮಾಡಬಹುದು. ಮತ್ತೊಂದೆಡೆ, ಈಗ ನೀವು Paytm ನಿಂದ ಒಂದು ಗಂಟೆಯಲ್ಲಿ ಕೇವಲ 20,000 ರೂ. ಪಾವತಿ ಮಾಡಬಹುದು. ಈ ಆ್ಯಪ್ ಮೂಲಕ ನೀವು ಒಂದು ಗಂಟೆಯಲ್ಲಿ 5 ವಹಿವಾಟುಗಳನ್ನು ಮಾಡಬಹುದು ಮತ್ತು ಒಂದು ದಿನದಲ್ಲಿ ಕೇವಲ 20 ವಹಿವಾಟುಗಳನ್ನು ಮಾಡಲು ಸಾಧ್ಯವಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.