Republic day sale 2023: ರೈಲು ಟಿಕೆಟ್ ದರದಲ್ಲಿ ವಿಮಾನಯಾನ .! 8 ತಿಂಗಳವರೆಗೆ ಅಗ್ಗದ ದರದಲ್ಲಿ ವಿಮಾನ ಪ್ರಯಾಣ ಸಾಧ್ಯ .!

SpiceJet announces Republic Day sale:ಗಣರಾಜ್ಯೋತ್ಸವದ ಅಂಗವಾಗಿ  ಸ್ಪೈಸ್ ಜೆಟ್ ವಿಶೇಷ ಆಫರ್ ಜಾರಿಗೆ ತಂದಿದೆ. ಈ ಆಫರ್ ಅಡಿಯಲ್ಲಿ ವಿಮಾನ ಟಿಕೆಟ್ ಅನ್ನು ಕೇವಲ 1126 ರೂಪಾಯಿಗೆ ಬುಕ್ ಮಾಡಬಹುದು. 

Written by - Ranjitha R K | Last Updated : Jan 25, 2023, 11:09 AM IST
  • ರೈಲು ಟಿಕೆಟ್ ದರದಲ್ಲಿಯೇ ವಿಮಾನಯಾನ
  • ಗಣರಾಜ್ಯೋತ್ಸವದ ಅಂಗವಾಗಿ ಸ್ಪೈಸ್ ಜೆಟ್ ವಿಶೇಷ ಆಫರ್
  • ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ಸ್ಪೈಸ್ ಜೆಟ್
 Republic day sale 2023: ರೈಲು ಟಿಕೆಟ್ ದರದಲ್ಲಿ ವಿಮಾನಯಾನ .! 8 ತಿಂಗಳವರೆಗೆ ಅಗ್ಗದ ದರದಲ್ಲಿ ವಿಮಾನ ಪ್ರಯಾಣ ಸಾಧ್ಯ .! title=

SpiceJet Republic Day Sale : ರೈಲು ಟಿಕೆಟ್ ದರದಲ್ಲಿಯೇ ವಿಮಾನಯಾನ ಈಗ ಸಾಧ್ಯ. ನೀವು ಎಲ್ಲಿಗಾದರೂ ಪ್ರಯಾಣ ಬೆಳಸುವ ಬಗ್ಗೆ ಪ್ಲಾನ್ ಮಾಡುತ್ತಿದ್ದರೆ, ರೈಲಿನ ಬದಲು ವಿಮಾನದಲ್ಲಿಯೇ ಪ್ರಯಾಣಿಸಬಹುದು. ಗಣರಾಜ್ಯೋತ್ಸವದ ಅಂಗವಾಗಿ  ಸ್ಪೈಸ್ ಜೆಟ್ ವಿಶೇಷ ಆಫರ್ ಜಾರಿಗೆ ತಂದಿದೆ. ಈ ಆಫರ್ ಅಡಿಯಲ್ಲಿ ವಿಮಾನ ಟಿಕೆಟ್ ಅನ್ನು ಕೇವಲ 1,126 ರೂಪಾಯಿಗೆ ಬುಕ್ ಮಾಡಬಹುದು. ಸ್ಪೈಸ್ ಜೆಟ್ ರಿಪಬ್ಲಿಕ್ ಡೇ ಸೇಲ್ ಅಂಗವಾಗಿ ವರ್ಷದ ಅಗ್ಗದ ಟಿಕೆಟ್‌ಗಳನ್ನು ಘೋಷಿಸಲಾಗಿದೆ. ಈ ಆಫರ್ ಅಡಿಯಲ್ಲಿ ಬುಕ್ ಮಾಡಿದ ಟಿಕೆಟ್‌ ಬಳಸಿ, ಸೆಪ್ಟೆಂಬರ್ 30  2023 ರವರೆಗೆ ಪ್ರಯಾಣಿಸಬಹುದು. ಈ ಆಫರ್ ಜನವರಿ 24 ರಿಂದಲೇ ಆರಂಭವಾಗಿದೆ. 

 ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ಸ್ಪೈಸ್ ಜೆಟ್ :
ಈಗ ಕೇವಲ 1,126 ರೂ.ಗಳಲ್ಲಿ ದೇಶೀಯ ವಿಮಾನ ಪ್ರಯಾಣ ಮಾಡಬಹುದು ಎಂದು ಸ್ಪೈಸ್ ಜೆಟ್ ಅಧಿಕೃತ ಟ್ವೀಟ್ ನಲ್ಲಿ ಹೇಳಿಕೊಂಡಿದೆ. ಸ್ಪೈಸ್ ಜೆಟ್ ವಿಶೇಷ  ಆಫರ್ ಜಾರಿಗೆ ತಂದಿದ್ದು, ಕಡಿಮೆ ದರದಲ್ಲಿ ವಿಮಾನದಲ್ಲಿ ಪ್ರಯಾಣಿಸಬಹುದು.

 

ಇದನ್ನೂ ಓದಿ : ಬ್ಯಾಂಕ್ ಗ್ರಾಹಕರಿಗೊಂದು ಪ್ರಮುಖ ಮಾಹಿತಿ! ಗ್ರಾಹಕರ ಜೇಬಿಗೆ ನೇರ ಹೊಡೆತ ಬೀಳಲಿದೆಯಾ?

ಯಾವ ದಿನಾಂಕದವರೆಗೆ ಟಿಕೆಟ್ ಬುಕ್ ಮಾಡಬಹುದು : 
ಈ ಕೊಡುಗೆಯ ಅಡಿಯಲ್ಲಿ ಜನವರಿ 24 ರಿಂದ ಜನವರಿ 29 2023 ರವರೆಗೆ ಟಿಕೆಟ್ ಬುಕ್ ಮಾಡಬಹುದು. ಸೆಪ್ಟೆಂಬರ್ 30 ರವರೆಗಿನ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಿ ಇಟ್ಟುಕೊಳ್ಳಬಹುದು. ಅಂದರೆ ಈ ಕೊಡುಗೆಯ ಅಡಿಯಲ್ಲಿ ಬುಕ್ ಮಾಡಿದ ಟಿಕೆಟ್‌ಗಳಲ್ಲಿ ನಿನ್ನೆ (ಜನವರಿ 24 )ರಿಂದ ಸೆಪ್ಟೆಂಬರ್ 30 2023 ರವರೆಗೆ ಪ್ರಯಾಣಿಸಬಹುದು.

ಟಿಕೆಟ್ ಬುಕ್ ಮಾಡುವುದು ಹೇಗೆ ? :
ಏರ್‌ಲೈನ್ಸ್ ಪ್ರಕಾರ, ಈ  ಸೇಲ್ ಎಲ್ಲಾ ಸ್ಪೈಸ್ ಜೆಟ್ ಸಿಟಿ ಕಚೇರಿಗಳು, ವಿಮಾನ ನಿಲ್ದಾಣ ಕಚೇರಿಗಳು, ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್ ಮತ್ತು ಟ್ರಾವೆಲ್ ಏಜೆಂಟ್‌ಗಳ ಮೂಲಕ ಲಭ್ಯವಿರುತ್ತದೆ. ಅಲ್ಲದೆ,  ಫಸ್ಟ್ ಕಂ ಫಸ್ಟ್  ಸರ್ವ್ ಆಧಾರದ ಮೇಲೆ ದರಗಳು ಲಭ್ಯವಿರುತ್ತವೆ.

ಇದನ್ನೂ ಓದಿ : Car Sale: 10 ರಿಂದ 18 ಲಕ್ಷ ಬೆಲೆ ಬಾಳುವ ಈ ಕಾರನ್ನು ಕೇವಲ 7.5 ಲಕ್ಷಕ್ಕೆ ಮನೆಗೆ ತನ್ನಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News