8th Pay Commission Update : ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ. ಕೇಂದ್ರ ಸರ್ಕಾರ ಇತ್ತೀಚೆಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಿದ್ದು, ಇದರಿಂದ ನೌಕರರ ವೇತನದಲ್ಲಿ ಕೂಡಾ ಹೆಚ್ಚಳ ಕಂಡು ಬಂದಿದೆ. ಇದೀಗ 8ನೇ ವೇತನ ಆಯೋಗದ  ಕುರಿತಂತೆ ಸರ್ಕಾರದಿಂದ ಒಳ್ಳೆಯ ಸುದ್ದಿ ಹೊರಬೀಳುತ್ತಿದೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ವೇತನ ಆಯೋಗವನ್ನು ರಚಿಸಬಹುದು.  ನಂತರ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. 2024 ರಲ್ಲಿ, ಎಂಟನೇ ವೇತನ ಆಯೋಗದ ಅಡಿಯಲ್ಲಿ ಉದ್ಯೋಗಿಗಳ ಸಂಬಳದಲ್ಲಿ ಬಂಪರ್ ಹೆಚ್ಚಳವಾಗಬಹುದು. 


COMMERCIAL BREAK
SCROLL TO CONTINUE READING

ಹೊಸ ವೇತನ ಆಯೋಗದ ಕೆಲಸ ಯಾವಾಗ?
ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಸಾರ್ವತ್ರಿಕ ಚುನಾವಣೆ ನಂತರವೇ ಹೊಸ ವೇತನ ಆಯೋಗದ ಜಾರಿಗೆ ಬರಲಿದೆ. ಸದ್ಯ ಹೊಸ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ನೌಕರರ ಸಂಘದ ವತಿಯಿಂದ ಆಗ್ರಹ ಕೇಳಿ ಬರುತ್ತಿದೆ. ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. 


4ನೇ ವೇತನ ಆಯೋಗದಿಂದ ನೌಕರರ ವೇತನದಲ್ಲಿ ಎಷ್ಟು ಹೆಚ್ಚಳ : 
ವೇತನ ಹೆಚ್ಚಳ - 27.6%
ಕನಿಷ್ಠ ವೇತನ - 750 ರೂ.


ಇದನ್ನೂ ಓದಿ : ಪಿಪಿಎಫ್ ಖಾತೆ ಹೊಂದಿದ್ದರೆ ಇಂದೇ ಈ ಕೆಲಸ ಮಾಡಿ! ಮತ್ತೆ ಸಿಗುವುದಿಲ್ಲ ಈ ಅವಕಾಶ


5ನೇ ವೇತನ ಆಯೋಗದಿಂದ ನೌಕರರ ವೇತನ ಎಷ್ಟು ಹೆಚ್ಚಳ :
ವೇತನ ಹೆಚ್ಚಳ - 31%
ಕನಿಷ್ಠ ವೇತನ - 2,550 ರೂ. 


6ನೇ ವೇತನ ಆಯೋಗವು ನೌಕರರ ವೇತನವನ್ನು ಎಷ್ಟು ಹೆಚ್ಚಿಸಿದೆ :
ಫಿಟ್‌ಮೆಂಟ್ ಅಂಶ - 1.86 ಪಟ್ಟು
ಸಂಬಳ ಹೆಚ್ಚಳ - 54 ಶೇಕಡಾ,
ಕನಿಷ್ಠ ವೇತನ - 7,000 ರೂ. 


7ನೇ ವೇತನ ಆಯೋಗದಿಂದ ನೌಕರರ ವೇತನ
ಎಷ್ಟು ಹೆಚ್ಚಳವಾಗಿದೆ ? 
ಫಿಟ್‌ಮೆಂಟ್ ಅಂಶ -  2.57 ಪಟ್ಟು
ಸಂಬಳ ಹೆಚ್ಚಳ -14.29 ಶೇ 
ಕನಿಷ್ಠ ವೇತನ - 18,000  


8ನೇ ವೇತನ ಆಯೋಗದಿಂದ ಎಷ್ಟು ಹೆಚ್ಚಳವಾಗಲಿದೆ  ನೌಕರರ ವೇತನ:
ಫಿಟ್‌ಮೆಂಟ್ ಅಂಶ - 3.68 ಪಟ್ಟು ಸಂಭವನೀಯ
ವೇತನ ಹೆಚ್ಚಳ - 44.44%
ಕನಿಷ್ಠ ವೇತನ - 26,000 ವಾಗಬಹುದು 


ಇದನ್ನೂ ಓದಿ :  Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಬೆಲೆ ಹೀಗಿದೆ ನೋಡಿ


2024 ರಲ್ಲಿ ಹೊಸ ವೇತನ ಆಯೋಗ ರಚನೆ : 
2024 ರ ಕೊನೆಯಲ್ಲಿ ಸರ್ಕಾರವು ಹೊಸ ವೇತನ ಆಯೋಗವನ್ನು ರಚಿಸಿ 2026 ರಲ್ಲಿ ಜಾರಿಗೆ ತರಬಹುದು ಎನ್ನಲಾಗಿದೆ. ಹೊಸ ವೇತನ ಆಯೋಗ ಜಾರಿಯಾದ ನಂತರ ಕೇಂದ್ರ ನೌಕರರ ವೇತನದಲ್ಲಿ ಅತಿ ಹೆಚ್ಚು ಏರಿಕೆಯಾಗಲಿದೆ. 7ನೇ ವೇತನ ಆಯೋಗಕ್ಕೆ ಹೋಲಿಸಿದರೆ ಇದರಲ್ಲಿ ಭಾರೀ ಬದಲಾವಣೆಗಳಾಗಬಹುದು. 


ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು  ಹೊಸ ವೇತನ ಆಯೋಗದ ರಚನೆಯ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎನ್ನಲಾಗಿದೆ. ಆದರೆ ಹೊಸ ವೇತನ ಆಯೋಗದ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲು  2024 ನೇ ವರ್ಷ ಸೂಕ್ತ ಸಮಯ  ಎನ್ನುವುದು ತಜ್ಞರ ಅಭಿಪ್ರಾಯ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.