ಪಿಪಿಎಫ್ ಖಾತೆ ಹೊಂದಿದ್ದರೆ ಇಂದೇ ಈ ಕೆಲಸ ಮಾಡಿ! ಮತ್ತೆ ಸಿಗುವುದಿಲ್ಲ ಈ ಅವಕಾಶ

PPF Interest : ಪ್ರತಿ ತಿಂಗಳ 5 ನೇ ತಾರೀಕಿನ ಮೊದಲು ಹಣವನ್ನು ಠೇವಣಿ ಮಾಡಿದಾಗ, ಇಡೀ ತಿಂಗಳಿಗೆ ಬಡ್ಡಿಯನ್ನು ಗಳಿಸುವುದು ಸಾಧ್ಯವಾಗುತ್ತದೆ. ಆದರೆ ತಿಂಗಳ ಐದನೇ ದಿನದ ನಂತರ ಠೇವಣಿ ಮಾಡಿದರೆ ಆ ನಿರ್ದಿಷ್ಟ ತಿಂಗಳಿಗೆ ಗಣನೀಯ ಬಡ್ಡಿ ಆದಾಯವನ್ನು ಕಳೆದುಕೊಳ್ಳಬೇಕಾಗುತ್ತದೆ.  

Written by - Ranjitha R K | Last Updated : Apr 5, 2023, 01:59 PM IST
  • ಅನೇಕ ಜನರು PPF ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ.
  • ಈ ಯೋಜನೆಯ ಮೂಲಕ ಜನರು ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು
  • ಏಪ್ರಿಲ್ 5 ರೊಳಗೆ ಹೂಡಿಕೆ ಮಾಡುವಂತೆ ಸಲಹೆ ನೀಡಲಾಗುತ್ತದೆ.
ಪಿಪಿಎಫ್ ಖಾತೆ ಹೊಂದಿದ್ದರೆ ಇಂದೇ ಈ ಕೆಲಸ ಮಾಡಿ! ಮತ್ತೆ ಸಿಗುವುದಿಲ್ಲ ಈ ಅವಕಾಶ title=

ಬೆಂಗಳೂರು : ಅನೇಕ ಜನರು PPF ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ. ಈ ಯೋಜನೆಯ ಮೂಲಕ ಜನರು ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಾರೆ. ಪಿಪಿಎಫ್ ಹೂಡಿಕೆದಾರರು ಏಪ್ರಿಲ್ 5 ರೊಳಗೆ ಹೂಡಿಕೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಏಕೆಂದರೆ, ಏಪ್ರಿಲ್ 1 ರಿಂದ ಏಪ್ರಿಲ್ 5 ರ ನಡುವೆ 1.5 ಲಕ್ಷವನ್ನು ಠೇವಣಿ ಮಾಡಿದರೆ, ತಿಂಗಳ ಐದನೇ ತಾರೀಖಿನ ಮೊದಲು  ಮಾಡಿದ ಹೂಡಿಕೆ ಮೇಲೆ ನೀಡಲಾಗುವ ಬಡ್ಡಿಯ ಲಾಭವನ್ನು ಪಡೆಯಬಹುದು. ಈ ಮೂಲಕ ಹೆಚ್ಚಿನ ಬಡ್ಡಿಯನ್ನು ಗಳಿಸಬಹುದು.

ಪಿಪಿಎಫ್ ಯೋಜನೆಯ ನಿಯಮಗಳು : 
ಹೂಡಿಕೆದಾರರು PPF ಖಾತೆಗಳ ಮೇಲಿನ ಬಡ್ಡಿದರವನ್ನು ತಿಂಗಳ ಐದನೇ ದಿನ ಮತ್ತು ತಿಂಗಳ ಕೊನೆಯ ದಿನದ ನಡುವಿನ ಕನಿಷ್ಟ ಬ್ಯಾಲೆನ್ಸ್‌ನಲ್ಲಿ ಲೆಕ್ಕಹಾಕಲಾಗುತ್ತದೆ. ಆದ್ದರಿಂದ, ಪ್ರತಿ ತಿಂಗಳ 5 ನೇ ತಾರೀಕಿನ ಮೊದಲು ಹಣವನ್ನು ಠೇವಣಿ ಮಾಡಿದಾಗ, ಇಡೀ ತಿಂಗಳಿಗೆ ಬಡ್ಡಿಯನ್ನು ಗಳಿಸುವುದು ಸಾಧ್ಯವಾಗುತ್ತದೆ. ಆದರೆ, ತಿಂಗಳ ಐದನೇ ದಿನದ ನಂತರ ಠೇವಣಿ ಮಾಡಿದರೆ ಆ ನಿರ್ದಿಷ್ಟ ತಿಂಗಳಿಗೆ ಗಣನೀಯ ಬಡ್ಡಿ ಆದಾಯವನ್ನು ಕಳೆದುಕೊಳ್ಳಬೇಕಾಗುತ್ತದೆ.  

ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಬೆಲೆ ಹೀಗಿದೆ ನೋಡಿ

PPF ಯೋಜನೆಯ ನಿಯಮಗಳ ಪ್ರಕಾರ, ಬಡ್ಡಿಯನ್ನು ಮಾಸಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಆದರೆ ಹೂಡಿಕೆದಾರ ಖಾತೆಗೆ  ಹಣಕಾಸು ವರ್ಷದ ಕೊನೆಯಲ್ಲಿ ಅಂದರೆ ಮಾರ್ಚ್ 31 ರಂದು ಜಮಾ ಮಾಡಲಾಗುತ್ತದೆ. ಆದ್ದರಿಂದ, ಮಾಸಿಕ ಆಧಾರದ ಮೇಲೆ ಹೂಡಿಕೆ ಮಾಡುತ್ತಿದ್ದರೆ, ಹೆಚ್ಚಿನ ಬಡ್ಡಿಯನ್ನು ಪಡೆಯಬೇಕಾದರೆ  ಪ್ರತಿ ತಿಂಗಳ 5 ನೇ ತಾರೀಕಿನ ಮೊದಲು ಹಣವನ್ನು ಠೇವಣಿ ಮಾಡಬೇಕಾಗುತ್ತದೆ. 

ಏಪ್ರಿಲ್ 5 ಮತ್ತು ವಾರ್ಷಿಕ ಬಡ್ಡಿ : 
ಮೇಲಿನ ತತ್ವದ ಆಧಾರದ ಮೇಲೆ, ಹೂಡಿಕೆದಾರರು ಏಪ್ರಿಲ್ 5 ರ ಮೊದಲು 1.5 ಲಕ್ಷವನ್ನು ಠೇವಣಿ ಮಾಡಿದಾಗ, ಏಪ್ರಿಲ್ 5 ಮತ್ತು  ಅದರ ಮೊದಲಿನ ಬ್ಯಾಲೆನ್ಸ್‌ ಮೇಲೆ ಶೇಕಡಾ 7.1 ರ ದರದಲ್ಲಿ ಬಡ್ಡಿಯನ್ನು ಗಳಿಸುತ್ತಾರೆ. ಉದಾಹರಣೆಗೆ ಕನಿಷ್ಠ ಬ್ಯಾಲೆನ್ಸ್ 1.5 ಲಕ್ಷ ರೂ. ನಿಯಮಗಳ ಪ್ರಕಾರ, ಹೂಡಿಕೆದಾರರು ಹಣಕಾಸು ವರ್ಷದ ಕೊನೆಯಲ್ಲಿ ಏಪ್ರಿಲ್ 5 ರ ಮೊದಲು ಠೇವಣಿ ಮಾಡಿದ 1.5 ಲಕ್ಷ ರೂಪಾಯಿಗಳ ಮೇಲೆ 10,650 ರೂಪಾಯಿಗಳ ಬಡ್ಡಿಯನ್ನು ಪಡೆಯುತ್ತಾರೆ. ಏಪ್ರಿಲ್ 5 ರ ನಂತರ ಈ ಹೂಡಿಕೆ ಮಾಡಿದರೆ   ಮೊದಲ ತಿಂಗಳ ಬಡ್ಡಿಯನ್ನು ಕಳೆದುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ : Budget Car: 7 ಸೀಟರ್ ಆಯ್ಕೆಯೊಂದಿಗೆ ಅತ್ಯುತ್ತಮ CNG ಕಾರು, ಬೆಲೆ ಎಷ್ಟು ಗೊತ್ತಾ?

ಸಂಯುಕ್ತ ಬಡ್ಡಿ
PPF ಯೋಜನೆಯು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು, ಸಂಯುಕ್ತ ಬಡ್ಡಿಯ ತತ್ವವನ್ನು ಆಧರಿಸಿದೆ. ಯೋಜನೆಯು 15 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಹೂಡಿಕೆದಾರರು ಪ್ರತಿ ವರ್ಷ ಏಪ್ರಿಲ್ 1 ರಿಂದ ಏಪ್ರಿಲ್ 5 ರ ನಡುವೆ 15 ವರ್ಷಗಳ ಕಾಲ ನಿಯತಕಾಲಿಕವಾಗಿ ಮತ್ತು ವ್ಯವಸ್ಥಿತವಾಗಿ ಹೂಡಿಕೆ ಮಾಡಿದರೆ, ಅವರು 15 ವರ್ಷಗಳ ಅಂತ್ಯದಲ್ಲಿ 18,18,209 ರೂಪಾಯಿಗಳನ್ನು ಗಳಿಸಬಹುದು.  40,68,209 ಮೆಚ್ಯೂರಿಟಿ ಮೊತ್ತವನ್ನು ಪಡೆಯಬಹುದು.

ಇನ್ನು ಹೂಡಿಕೆದಾರರು 15 ವರ್ಷಗಳವರೆಗೆ ಪ್ರತಿ ಹಣಕಾಸು ವರ್ಷದಲ್ಲಿ ಕೊನೆಯ ಕ್ಷಣದಲ್ಲಿ ಹೂಡಿಕೆ ಮಾಡಿದರೆ, 18,18,209 ರೂ ಬದಲಿಗೆ 15,48,515 ರೂ. ಗಳಿಸುವುದು ಸಾಧ್ಯವಾಗುತ್ತದೆ. ಮೆಚ್ಯೂರಿಟಿ ಮೊತ್ತವೂ 40,68,209 ರೂಪಾಯಿಗಳ ಬದಲಾಗಿ 37,98,515 ರೂಪಾಯಿಗಳಾಗಿರುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News