ನವದೆಹಲಿ: ಕೇಂದ್ರ ಸರ್ಕಾರ, ಉಚಿತ ಅಕ್ಕಿ ವಿತರಣೆಯ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು 2029ರವರೆಗೂ ವಿಸ್ತರಿಸಿದೆ.ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಈ ವಿಷಯವನ್ನು ಘೋಷಿಸಿದ್ದಾರೆ. 


COMMERCIAL BREAK
SCROLL TO CONTINUE READING

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ದೇಶದಲ್ಲಿ 80 ಕೋಟಿಗೂ ಅಧಿಕ ಜನರಿಗೆ ಉಚಿತ ಪಡಿತರ ದೊರಕಿದ್ದು,ಈ ಯೋಜನೆಯನ್ನು 2029ರ ವರೆಗೂ ಮುಂದುವರಿಸಲಾಗಿದೆ ಎಂದು ಜೋಷಿ ಹೇಳಿದ್ದಾರೆ.


ಇದನ್ನೂ ಓದಿ : Arecanut Price Today: ಚಿತ್ರದುರ್ಗ & ಶಿವಮೊಗ್ಗದಲ್ಲಿ ಅಡಿಕೆ ಇಂದಿನ ಧಾರಣೆ


ಎನ್ಎಎಫ್ಇಡಿ, ಎನ್ ಸಿಸಿಎಫ್ ಹಾಗೂ ಕೇಂದ್ರೀಯ ಭಂಡಾರಗಳಲ್ಲಿ ಕೆಜಿಗೆ 29 ರೂ.ಯಂತೆ 5 ಮತ್ತು 10 ಕೇಜಿ ಚೀಲಗಳಲ್ಲಿ ಭಾರತ್ ಅಕ್ಕಿ  ದೊರೆಯುತ್ತಿದೆ ಎಂದು ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. 


ಅತಿ ಅಗ್ಗದ ಬೆಲೆಗೆ ಗೋಧಿ ಹಿಟ್ಟು: ಇನ್ನು, ಭಾರತ್ ಆಟ್ಟಾ ಉಪಕ್ರಮದಲ್ಲಿ ಅತಿ ಅಗ್ಗದ ಬೆಲೆ ಅಂದರೆ ಕೇವಲ 27.5 ರೂ.ಗೆ ಕೆಜಿಗೆ ಗೋಧಿ ಹಿಟ್ಟು ಪೂರೈಸಲಾಗುತ್ತಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : ಅನಂತ್ ಅಂಬಾನಿ ವಿವಾಹ ಆಮಂತ್ರಣದ ಒಂದು ಕಾರ್ಡ್ ನ ಬೆಲೆಯಲ್ಲಿ ಒಂದು ಮದುವೆ ಮಾಡಿಸಬಹುದು! ಒಂದು ಕಾರ್ಡ್ ಬೆಲೆ ..... ಲಕ್ಷ!


ಭಾರತ್ ದಾಲ್ ಉಪಕ್ರಮದಡಿಯಲ್ಲಿ ಕಡಲೆ ಮತ್ತು ಹೆಸರುಬೇಳೆ ಯನ್ನು ಕಡಿಮೆ ದರದಲ್ಲಿ ದೊರೆಯುವಂತಾಗಿದೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಮಯೋಚಿತ ಉಪಕ್ರಮಗಳಿಂದಾಗಿ ದೇಶದ ಹಣದುಬ್ಬರ ಮತ್ತು ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.