Video:ಪ್ರತಿ ಭಾನುವಾರ ರಾಧಿಕಾ ಅಂಬಾನಿ ಮೈಸೂರಿನ ಕೆಫೆಯ ಆಹಾರ ಸವಿಯುತ್ತಾರೆಯಂತೆ !ಇದೇನು ದುಬಾರಿ ಹೋಟೆಲ್ ಅಲ್ಲ

 ಸದ್ಯ ಅಂಬಾನಿ ಕುಟುಂಬದ ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೀಕ್ಷಿಸಿದ ಜನ ಅಂಬಾನಿ ಕುಟುಂಬವನ್ನು ಹಾಡಿ ಹೊಗಳಿದ್ದಾರೆ.

Written by - Ranjitha R K | Last Updated : Jul 17, 2024, 04:22 PM IST
  • ಪ್ರತಿ ಭಾನುವಾರ ಇಲ್ಲಿಯದ್ದೇ ಊಟ
  • ವೈರಲ್ ಆಗಿದೆ ವಿಡಿಯೋ
  • ಮುಖೇಶ್ ಅಂಬಾನಿಗೂ ಇಷ್ಟ ಇಡ್ಲಿ
Video:ಪ್ರತಿ ಭಾನುವಾರ ರಾಧಿಕಾ ಅಂಬಾನಿ ಮೈಸೂರಿನ ಕೆಫೆಯ ಆಹಾರ ಸವಿಯುತ್ತಾರೆಯಂತೆ !ಇದೇನು ದುಬಾರಿ ಹೋಟೆಲ್ ಅಲ್ಲ title=

ಮುಂಬಯಿ : ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಅದ್ಧೂರಿಯಾಗಿ ನೆರವೇರಿದೆ.ಈ ಮದುವೆಗೆ ಸಂಬಂಧಿಸಿದ ಅನೇಕ ಫೋಟೋ, ವಿಡಿಯೋಗಳು ಎಲಾ ಕಡೆ ಹರಿದಾಡುತ್ತಿದೆ.ಸದ್ಯ ಅಂಬಾನಿ ಕುಟುಂಬದ ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೀಕ್ಷಿಸಿದ ಜನ ಅಂಬಾನಿ ಕುಟುಂಬವನ್ನು ಹಾಡಿ ಹೊಗಳಿದ್ದಾರೆ. 

ಪ್ರತಿ ಭಾನುವಾರ ಇಲ್ಲಿಯದ್ದೇ ಊಟ :
ಮುಂಬೈನಲ್ಲಿ ಅತ್ಯುತ್ತಮವಾದ ಫೈವ್ ಸ್ಟಾರ್, ಸೆವೆನ್ ಸ್ಟಾರ್ ಮತ್ತು ದುಬಾರಿ ರೆಸ್ಟೋರೆಂಟ್‌ಗಳಿವೆ. ಆದರೆ ಅಂಬಾನಿ ಕುಟುಂಬದ ಕಿರಿಯ ಸೊಸೆ, ಅನಂತ್ ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್ ಗೆ ಸರಳವಾದ ಆಹಾರವೆಂದರೆ ಇಷ್ಟ.ಹಾಗಾಗಿಯೇ ಅವರು ಪ್ರತಿ ಭಾನುವಾರ ಒಂದು ಪುಟ್ಟ ರೆಸ್ಟೋರೆಂಟ್‌ ಆಹಾರಗಳನ್ನು ಸವಿಯುತ್ತಾರೆ. ಹೌದು ಮುಂಬೈನಲ್ಲಿರುವ ಮೈಸೂರು ಕೆಫೆಯ ಖಾದ್ಯಗಳೆಂದರೆ ರಾಧಿಕಾಗೆ ಅಚ್ಚುಮೆಚ್ಚು. ಈ ಕೆಫೆ ದಕ್ಷಿಣ ಭಾರತದ ಖಾದ್ಯಗಳಿಗೆ ಹೆಸರುವಾಸಿ.  ಅನಂತ್ ಮತ್ತು ರಾಧಿಕಾ ಅವರ ಮದುವೆಯ ಸಂಭ್ರಮಕ್ಕೆ ಔತಣಕೂಟದಲ್ಲಿ ಮೈಸೂರು ಕೆಫೆಯ ಸ್ಟಾಲ್ ಕೂಡಾ ಇತ್ತು ಎನ್ನುವುದು ಇಲ್ಲಿ ಗಮನಾರ್ಹ.  

ಇದನ್ನೂ ಓದಿ ಹೊಸ ಸರ್ವಿಸ್ ಆರಂಭಿಸಿದ Air India : ಈಗ ಗಿಫ್ಟ್ ಕಾರ್ಡ್ ಮೂಲಕವೂ ಖರೀದಿಸಬಹುದು ಟಿಕೆಟ್

ಮದುವೆಯ ದಿನ ಈ ಕೆಫೆಯ ಮಾಲಕಿ ಶ್ರೀಮತಿ ಶಾಂತೇರಿ ನಾಯಕ್ ಅವರನ್ನು ನೋಡಿ ಅಂಬಾನಿ ಕುಟುಂಬವಿಡೀ ಸಂಭ್ರಮಿಸಿದೆ.ಇವರು ಮೈಸೂರು ಕೆಫೆಯ ಮಾಲಕಿ ಎಂದು ಹೇಳುತ್ತಿದ್ದಂತೆ ಇಡೀ ಅಂಬಾನಿ ಕುಟುಂಬವೇ ತಲೆ ಬಾಗಿ ಅವರಿಗೆ ನಮಸ್ಕಾರ ಮಾಡುತ್ತದೆ. ಅನಂತ್ ಪತ್ನಿ ರಾಧಿಕಾ   ತಾನು ಪ್ರತಿ ಭಾನುವಾರ ಮೈಸೂರು ಕೆಫೆಯ ಆಹಾರ ಸೇವಿಸುವುದಾಗಿ ಇಲ್ಲಿ ಹೇಳುತ್ತಾರೆ.  

 

ಇದನ್ನೂ ಓದಿ : Gruha Jyothi Scheme: ʼಗೃಹಜ್ಯೋತಿʼ ಫಲಾನುಭವಿಗಳಿಗೆ ಶಾಕ್‌ ನೀಡಿದ ರಾಜ್ಯ ಸರ್ಕಾರ!

 ನಂತರ ರಾಧಿಕಾ ಶಾಂತೇರಿ ನಾಯಕ್ ಕೈ ಹಿಡಿದು ತಲೆ ಬಾಗಿ ಗೌರವಿಸುವುದನ್ನು ಕಾಣಬಹುದು.ರಾಧಿಕಾ, ಅನಂತ್ ಅಂಬಾನಿ, ಹಿರಿಯ ಸೊಸೆ ಶ್ಲೋಕಾ ಮೆಹ್ತಾ ಈ ಮಹಿಳೆಯನ್ನು ಗೌರವಿಸುವ ರೀತಿಗೆ ಎಲ್ಲೆಡೆ ಶ್ಲಾಘನೆ ವ್ಯಕ್ಯ್ತವಾಗಿದೆ.

ಇನ್ನು ಮೈಸೂರು ಕೆಫೆಯ ಊಟ ಎಂದರೆ ತನಗೆ ಬಹಳ ಇಷ್ಟ ಎನ್ನುವ ವಿಚಾರವನ್ನು ಮುಖೇಶ್ ಅಂಬಾನಿ ಕೂಡಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಮುಖೇಶ್ ಅಂಬಾನಿಗೂ ಇಡ್ಲಿ ಸಾಂಬಾರ್ ಎಂದರೆ ಇಷ್ಟವಾದ ಉಪಹಾರ ಎನ್ನುವುದನ್ನು ಕೂಡಾ ಅವರು ಇಲ್ಲಿ ಹೇಳಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News