ಬೆಂಗಳೂರು : Google Pay ಮತ್ತು Phone Pay ಬಳಸುವವರು ಕೊನೆಯ ಬಾರಿಗೆ ಕ್ಯಾಶ್‌ಬ್ಯಾಕ್ ಪಡೆದದ್ದು ಯಾವಾಗ ಎನ್ನುವುದು ನೆನಪಿದೆಯೇ? ಖಂಡಿತಾ ಇರಲಿಕ್ಕಿಲ್ಲ. ಯಾಕೆಂದರೆ ಇಲ್ಲಿ ಪ್ರತಿ ಬಾರಿಯೂ ಕ್ಯಾಶ್ ಬ್ಯಾಕ್ ಸಿಗುವುದಿಲ್ಲ. ಆದರೆ ನಾವು ಹೇಳಲು ಹೊರಟಿರುವ ಅಪ್ಲಿಕೇಶನ್ ನಲ್ಲಿ  ತಿಂಗಳಿಗೆ 1 ಸಾವಿರ ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯಬಹುದು. ಇದಕ್ಕಾಗಿ ನೀವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು. ಈ ಪೇಮೆಂಟ್ ಅಪ್ಲಿಕೇಶನ್‌ನ ಹೆಸರು ಭಾರತ್ ಪೆ. ಈ ಕಂಪನಿಯು ತನ್ನ ಗ್ರಾಹಕರಿಗೆ ಅತ್ಯಂತ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ.  ಈ ಆಪ್ ಮೂಲಕ ವಹಿವಾಟು ನಡೆಸಿದರೆ  ತಿಂಗಳಿಗೆ 1 ಸಾವಿರ ರೂಪಾಯಿ ಗಳಿಸುವುದು ಸಾಧ್ಯವಾಗುತ್ತದೆ.  


COMMERCIAL BREAK
SCROLL TO CONTINUE READING

ಇದಕ್ಕಾಗಿ ಏನು ಮಾಡಬೇಕು ? : 
1.ಮೊದಲಿಗೆ, ನೀವು ಅಪ್ಲಿಕೇಶನ್‌ನಲ್ಲಿ“contribute money”   ಆಯ್ಕೆಯನ್ನು ಕ್ಲಿಕ್ ಮಾಡಬೇಕು.
2. ಇಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕು. 
3. ಅದರ ನಂತರ “Link Now” ಮೇಲೆ  ಕ್ಲಿಕ್ ಮಾಡಿ ಮತ್ತು ಅಲ್ಲಿ ಡ್ರಾಪ್ ಡೌನ್ ಮೆನುಗೆ ಹೋಗಿ ಮತ್ತು ನಿಮ್ಮ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ.
4. ಇದರ ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು OTP ಸಹಾಯದಿಂದ ವ್ಯಾಲಿಡೇಟ್ ಮಾಡಿ.  
5. ಈ ರೀತಿಯಾಗಿ ನಿಮ್ಮ ಆಧಾರ್ KYC ಪೂರ್ಣಗೊಳ್ಳುತ್ತದೆ. ಇದರ ಫೋಟೋ ತೆಗೆದುಕೊಂಡು ಫಾರ್ಮ್ ಅನ್ನು ಸಬ್ಮಿಟ್ ಮಾಡಿ.  


ಇದನ್ನೂ ಓದಿ : SBI Account Types : ಎಸ್​ಬಿಐನಲ್ಲಿದೆ 6 ವಿಧದ ಉಳಿತಾಯ ಖಾತೆಗಳು : ಅವುಗಳು ಬಗ್ಗೆ ಇಲ್ಲಿದೆ ಮಾಹಿತಿ!


6. ಇಲ್ಲಿ ನೀವು ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಬೇಕು,  ಈ ಒಪ್ಪಿಗೆ ನೀಡಿದ ನಂತರವೇ ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಲಾಗುತ್ತದೆ.
7. ಈಗ ಇಲ್ಲಿ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡಬೇಕಾಗುತ್ತದೆ. ಈ ಹಣದ ಮೇಲೆ 12% ವರೆಗೆ ಬಡ್ಡಿಯನ್ನು ಪಡೆಯಬಹುದು.


1000 ರೂಪಾಯಿ ಸಿಗಲಿದೆ  :
ಭಾರತ್ ಪೇ ಪ್ರಸ್ತುತ ತನ್ನ ಗ್ರಾಹಕರಿಗೆ ಉತ್ತಮ ಕೊಡುಗೆಗಳನ್ನು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಹೂಡಿಕೆ ಮಾಡಬಹುದು. ಮಾರುಕಟ್ಟೆಗೆ ಹೋಲಿಸಿದರೆ, ಇಲ್ಲಿ ಮಾಡುವ ಹೂಡಿಕೆ ಮೇಲೆ ಉತ್ತಮ ಬಡ್ಡಿಯನ್ನು ನೀಡಲಾಗುತ್ತಿದೆ. ಇದರ  ಇನ್ನೊಂದು ವೈಶಿಷ್ಟ್ಯವೆಂದರೆ ಇಲ್ಲಿ ನಿಮಗೆ ದೈನಂದಿನ ಬಡ್ಡಿಯನ್ನು ನೀಡಲಾಗುತ್ತದೆ. ಇದರಿಂದಾಗಿ  ಮಾಸಿಕವಾಗಿ ಹೆಚ್ಚು ಗಳಿಸುವ ಅವಕಾಶ  ಸಿಗುತ್ತದೆ. ಈ ಖಾತೆಗೆ 1 ಲಕ್ಷ ರೂ.ಗಳನ್ನು ಠೇವಣಿ ಮಾಡಿದರೆ, ದಿನಕ್ಕೆ ಸುಮಾರು 32 ರೂ.ಗಳ ಬಡ್ಡಿಯನ್ನು ನೀಡಲಾಗುತ್ತದೆ. ಈ ಮೂಲಕ ತಿಂಗಳಿಗೆ ನೀವು ಗಳಿಸುವ ಮೊತ್ತ 1000 ರೂ. ಅಂದರೆ ಪೆರತಿ ತಿಂಗಳು ಒಂದು ಸಾವಿರ ರೂಪಾಯಿ ಗಳಿಸುವುದು ಸಾಧ್ಯವಾಗುತ್ತದೆ.    


ಇದನ್ನೂ ಓದಿ : Old Pension : ಹಳೆ ಪಿಂಚಣಿ ವ್ಯವಸ್ಥೆ ಇದೇ ತಿಂಗಳು ಜಾರಿ, ಹೊಸ ಪಿಂಚಣಿ ವ್ಯವಸ್ಥೆ ರದ್ದು!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.