Old Pension : ಹಳೆ ಪಿಂಚಣಿ ವ್ಯವಸ್ಥೆ ಇದೇ ತಿಂಗಳು ಜಾರಿ, ಹೊಸ ಪಿಂಚಣಿ ವ್ಯವಸ್ಥೆ ರದ್ದು!

Old Pension News : ಹಳೆ ಪಿಂಚಣಿ ಯೋಜನೆ ಜಾರಿಗೆ ದೇಶದೆಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ನಡುವೆ ಹಳೆಯ ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ಬಿಗ್ ಸುದ್ದಿಯೊಂದು ಹೊರಬೀಳುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಲ್ಲಿದೆ.

Written by - Channabasava A Kashinakunti | Last Updated : Jan 9, 2023, 10:24 PM IST
  • ಮೊದಲ ಸಚಿವ ಸಂಪುಟದಲ್ಲಿ ಒಪಿಎಸ್ ಜಾರಿಯಾಗಲಿದೆ
  • ಇನ್ನೂ ಹಲವು ರಾಜ್ಯಗಳಲ್ಲಿ ಜಾರಿಯಾಗಲಿದೆ
  • ಹಳೆಯ ಪಿಂಚಣಿ ಯೋಜನೆಯ ಅನುಕೂಲಗಳೇನು?
Old Pension : ಹಳೆ ಪಿಂಚಣಿ ವ್ಯವಸ್ಥೆ ಇದೇ ತಿಂಗಳು ಜಾರಿ, ಹೊಸ ಪಿಂಚಣಿ ವ್ಯವಸ್ಥೆ ರದ್ದು! title=

Old Pension News : ಹಳೆ ಪಿಂಚಣಿ ಯೋಜನೆ ಜಾರಿಗೆ ದೇಶದೆಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ನಡುವೆ ಹಳೆಯ ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ಬಿಗ್ ಸುದ್ದಿಯೊಂದು ಹೊರಬೀಳುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಲ್ಲಿದೆ. ಹಾಗೆ, ಅನೇಕ ರಾಜ್ಯಗಳಲ್ಲಿ ಇಂದಿಗೂ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರು ಪ್ರಾರಂಭಿಸಲು ಬೇಡಿಕೆಯಿದೆ.

ಮೊದಲ ಸಚಿವ ಸಂಪುಟದಲ್ಲಿ ಒಪಿಎಸ್ ಜಾರಿಯಾಗಲಿದೆ

ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರು ಈ ತಿಂಗಳು ನಮ್ಮ ಸಚಿವ ಸಂಪುಟ ರಚನೆಯಾಗಲಿದ್ದು, ಬಳಿಕ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರಲಿದ್ದೇವೆ, ಇದರಿಂದ ಲಕ್ಷಗಟ್ಟಲೆ ಉದ್ಯೋಗಿಗಳಿಗೆ ಭಾರೀ ಲಾಭವಾಗಲಿದೆ.

ಇದನ್ನೂ ಓದಿ : RBI : ಬ್ಯಾಂಕ್ ಗ್ರಾಹಕರಿಗೆ ಬಿಗ್ ನ್ಯೂಸ್ : ಬ್ಯಾಂಕಿಂಗ್ ನಿಯಮ ಬದಲಾಯಿಸಿದೆ ಆರ್‌ಬಿಐ!

ಶೀಘ್ರದಲ್ಲೇ ವಿಸ್ತರಿಸಲಾಗುವುದು!

ಸಚಿವ ಸಂಪುಟವನ್ನು ಪರಿಗಣಿಸಿ ಅವರು ತಮ್ಮ ನಿರ್ಧಾರವನ್ನು ಎಲ್ಲರಿಗೂ ಮಂಡಿಸಿದ್ದಾರೆ, ಶೀಘ್ರದಲ್ಲೇ ಅದನ್ನು ವಿಸ್ತರಿಸಲಾಗುವುದು. ಅದರ ಪಟ್ಟಿ ಬಂದ ತಕ್ಷಣ ಕಾರ್ಯರೂಪಕ್ಕೆ ಬರಲಿದೆ.

ಇನ್ನೂ ಹಲವು ರಾಜ್ಯಗಳಲ್ಲಿ ಜಾರಿಯಾಗಲಿದೆ

2022 ರ ಬಜೆಟ್‌ನಲ್ಲಿ, ರಾಜಸ್ಥಾನ ಸರ್ಕಾರವು ಮುಂದಿನ ಹಣಕಾಸು ವರ್ಷದಲ್ಲಿ ಹಳೆಯ ಪಿಂಚಣಿಯನ್ನು ಮರುಪ್ರಾರಂಭಿಸುವುದಾಗಿ ಘೋಷಿಸಿತ್ತು. ಇದರೊಂದಿಗೆ ರಾಜ್ಯ ಸರ್ಕಾರ ಛತ್ತೀಸ್‌ಗಢದಲ್ಲೂ ಜಾರಿಗೆ ತರಲು ಹೊರಟಿದೆ. 2004 ರಲ್ಲಿ, ಕೇಂದ್ರ ಸರ್ಕಾರವು ಹಳೆಯ ಪಿಂಚಣಿ ಯೋಜನೆಯನ್ನು ರದ್ದುಪಡಿಸಿತು ಮತ್ತು ಬದಲಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಪ್ರಾರಂಭಿಸಿತು.

ಹಳೆಯ ಪಿಂಚಣಿ ಯೋಜನೆಯ ಅನುಕೂಲಗಳೇನು?

ಹಳೆಯ ಪಿಂಚಣಿ ಯೋಜನೆಯ ಪ್ರಯೋಜನಗಳ ಬಗ್ಗೆ ಮಾತನಾಡುತ್ತಾ, ಅದರ ದೊಡ್ಡ ಪ್ರಯೋಜನವೆಂದರೆ ಅದು ಕೊನೆಯದಾಗಿ ಪಡೆದ ಸಂಬಳದ ಆಧಾರದ ಮೇಲೆ ಮಾಡಲ್ಪಟ್ಟಿದೆ. ಇದಲ್ಲದೇ ಹಣದುಬ್ಬರ ದರ ಹೆಚ್ಚಾದಂತೆ ಡಿಎ ಕೂಡ ಹೆಚ್ಚಾಗುತ್ತದೆ. ಸರ್ಕಾರ ಹೊಸ ವೇತನ ಆಯೋಗವನ್ನು ಜಾರಿಗೆ ತಂದರೂ ಪಿಂಚಣಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : PPF ಹೂಡಿಕೆ - ಬಡ್ಡಿ ಹಣ ಪರಿಶೀಲಿಸಲು ಆನ್‌ಲೈನ್ ಕ್ಯಾಲ್ಕುಲೇಟರ್ ಹೀಗೆ ಬಳಸಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News