ಬೆಂಗಳೂರು : ವೃದ್ಧಾಪ್ಯದಲ್ಲಿ ನೆಮ್ಮದಿಯ ಜೀವನ ನಡೆಸುವುದು ಪ್ರತಿಯೊಬ್ಬ ವ್ಯಕ್ತಿಯ ಕನಸಾಗಿರುತ್ತದೆ. ಈ ರೀತಿಯ ನೆಮ್ಮದಿಯ  ಜೀವನ ಬೇಕಿದ್ದರೆ ಅಟಲ್ ಪಿಂಚಣಿ ಯೋಜನೆ ಉಪಯುಕ್ತವಾಗಬಹುದು. ನಿವೃತ್ತಿಯ ನಂತರ ಸುರಕ್ಷಿತ ಜೀವನವನ್ನು ಹೊಂದಲು ಬಯಸುವವರು ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ ಹೂಡಿಕೆ ಮಾಡುವುದರಿಂದ ಪ್ರತಿ ತಿಂಗಳು 5 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು.


COMMERCIAL BREAK
SCROLL TO CONTINUE READING

ಈ ವರ್ಷ, ಖಾತೆ ತೆರೆದಿದ್ದಾರೆ ಒಂದು ಕೋಟಿ ಜನ :
ಇದುವರೆಗೆ 40 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಈ ಯೋಜನೆಗೆ ಸೇರಿಸಲಾಗಿದೆ. ಯೋಜನೆಗೆ ಸೇರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪಿಂಚಣಿ ನಿಧಿ ನಿಯಂತ್ರಕ ಪ್ರಕಾರ, 2021-22 ರ ಹಣಕಾಸು ವರ್ಷದಲ್ಲಿ 99 ಲಕ್ಷಕ್ಕೂ ಹೆಚ್ಚು ಜನರು ಎಪಿವೈ ಖಾತೆಗಳನ್ನು ತೆರೆದಿದ್ದಾರೆ.


ಇದನ್ನೂ  ಓದಿ : ಈ ದಿನ ಬಿಡುಗಡೆ ಆಗಲಿದೆ ಪಿಎಂ ಕಿಸಾನ್ 12ನೇ ಕಂತು


ಯೋಜನೆಯು ಯಾರಿಗೆ ಪ್ರಯೋಜನಕಾರಿ :
ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಜನರನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಅಟಲ್ ಪಿಂಚಣಿ ಯೋಜನೆ  ಪ್ರಾರಂಭಿಸಿತ್ತು. ನಂತರ ಅದನ್ನು ಬದಲಾಯಿಸಲಾಯಿಸಿ 18 ರಿಂದ 40 ವರ್ಷದೊಳಗಿನ ಎಲ್ಲಾ ಭಾರತೀಯ ನಾಗರಿಕರು ಅದರಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಯಿತು. ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆಯ ಮೂಲಕ ಅಟಲ್ ಪಿಂಚಣಿ ಯೋಜನೆಗೆ ಸೇರಬಹುದು.


ತಿಂಗಳಿಗೆ  5000 ರೂ. ಪಿಂಚಣಿ : 
ಈ ಪಿಂಚಣಿ  ಯೋಜನೆಯಲ್ಲಿ, 60 ವರ್ಷಗಳ ನಂತರ ಪಿಂಚಣಿ ಪಡೆಯುವುದು ಸಾಧ್ಯವಾಗುತ್ತದೆ. ಅದರಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎಂಬುದು ನಿಮ್ಮ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. APY ನಲ್ಲಿ, ಕನಿಷ್ಟ ಮಾಸಿಕ ಪಿಂಚಣಿ  1,000 ರೂ ಮತ್ತು ತಿಂಗಳಿಗೆ ಗರಿಷ್ಠ 5,000 ರೂ ಪಡೆಯಬಹುದು. 


ಇದನ್ನೂ  ಓದಿ :  Vegetable Price: ಕಣ್ಣೀರು ತರಿಸುತ್ತಿದೆ ಈರುಳ್ಳಿ ಬೆಲೆ: ಹೀಗಿದೆ ಇಂದಿನ ತರಕಾರಿ ದರ


ಪ್ರತಿ ತಿಂಗಳು  ಎಷ್ಟು ಹೂಡಿಕೆ ಮಾಡಬೇಕು : 
ಈ ಯೋಜನೆಯಲ್ಲಿ ಎಷ್ಟು ಬೇಗನೆ ಹೂಡಿಕೆ ಮಾಡಲು ಪ್ರಾರಂಭಿಸುತ್ತೀರೋ ಅಷ್ಟು ಹೆಚ್ಚು ಲಾಭವಾಗುತ್ತದೆ. 18 ನೇ ವಯಸ್ಸಿನಲ್ಲಿ ಯೋಜನೆಗೆ ಸೇರಿದರೆ  60 ವರ್ಷ ವಯಸ್ಸಿನವರೆಗೆ ಪ್ರತಿ ತಿಂಗಳು 210 ರೂ. ಪಾವತಿ ಮಾಡಬೇಕು. ಹೀಗಾದಾಗ 60 ವರ್ಷ ವಯಸ್ಸಿನ ನಂತರ ಪ್ರತಿ ತಿಂಗಳು 5000 ರೂಪಾಯಿ ಪಿಂಚಣಿ ಪಡೆಯಬಹುದು. ಅದೇ ರೀತಿ 1000 ರೂಪಾಯಿ ಪಿಂಚಣಿಗೆ 42 ರೂಪಾಯಿ, 2000 ರೂಪಾಯಿ ಮಾಸಿಕ ಪಿಂಚಣಿಗೆ 84 ರೂಪಾಯಿ, 3000 ರೂಪಾಯಿ ಪಿಂಚಣಿಗೆ 126 ರೂಪಾಯಿ, 4000 ರೂಪಾಯಿ ಪಿಂಚಣಿಗೆ 168 ರೂಪಾಯಿ ಪ್ರತಿ ತಿಂಗಳು  ಹೂಡಿಕೆ ಮಾಡಬೇಕಾಗುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.