NPS Pension News : ಉದ್ಯೋಗದಲ್ಲಿರುವಾಗ ಹಣ ಉಳಿತಾಯ ಮಾಡದೇ ಹೋದರೆ, ನಿವೃತ್ತಿಯ ಸಂದರ್ಭದಲ್ಲಿ ಖರ್ಚುಗಳನ್ನು ನಿಭಾಯಿಸುವುದು ಸವಾಲಾಗಿ ಪರಿಣಮಿಸುತ್ತದೆ. ಆದರೆ, ನಿವೃತ್ತಿ ಯೋಜನೆಯು ಸಾಕಷ್ಟು ನಿವೃತ್ತಿ ಕಾರ್ಪಸ್ ಅನ್ನು ನಿರ್ಮಿಸಲು ನಿಮಗೆ  ಸಹಾಯ ಮಾಡುತ್ತದೆ. ಹೀಗಾಗಬೇಕಾದರೆ, ಪಿಂಚಣಿ ಯೋಜನೆಗಳು ಸೇರಿದಂತೆ ವಿವಿಧ ಆಯ್ಕೆಗಳಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ನಿವೃತ್ತಿ ಪ್ರಯೋಜನಗಳಿಗಾಗಿ ಅತ್ಯಂತ ಜನಪ್ರಿಯ ಸರ್ಕಾರಿ ಬೆಂಬಲಿತ ಪಿಂಚಣಿ ಯೋಜನೆಗಳಲ್ಲಿ ಒಂದಾಗಿದೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS).ಈ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಿಸುತ್ತದೆ. ಪಿಂಚಣಿ ಸೌಲಭ್ಯದ ಹೊರತಾಗಿ, ಇದು ತೆರಿಗೆ ವಿನಾಯಿತಿಯನ್ನು ಕೂಡಾ ಒದಗಿಸುತ್ತದೆ.


ಇದನ್ನೂ ಓದಿ : Arecanut Rate Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ..!


ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಎಂದರೇನು? : 
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಎಲ್ಲಾ ಭಾರತೀಯ ನಾಗರಿಕರಿಗೆ ಲಭ್ಯವಿರುವ ಸ್ವಯಂಪ್ರೇರಿತ ಉಳಿತಾಯ ಯೋಜನೆಯಾಗಿದೆ. 2004 ರಲ್ಲಿ ಪ್ರಾರಂಭವಾದ ಈ ಯೋಜನೆಯು ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿತ್ತು.  ನಂತರ ಇದನ್ನು 18 ರಿಂದ 70 ವರ್ಷ ವಯಸ್ಸಿನ ಎಲ್ಲಾ ನಾಗರಿಕರಿಗೆ ವಿಸ್ತರಿಸಲಾಯಿತು.


NPS ನಲ್ಲಿ ಹೂಡಿಕೆ ಮಾಡಿದ ಮೊತ್ತವು ಪ್ರಸ್ತುತ 9 ಪ್ರತಿಶತದಿಂದ 12 ಪ್ರತಿಶತದವರೆಗೆ ವಾರ್ಷಿಕ ಆದಾಯವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80 CCD(1) ಮತ್ತು 80 CCD 1(B) ಅಡಿಯಲ್ಲಿ ವಾರ್ಷಿಕವಾಗಿ 2 ಲಕ್ಷದವರೆಗೆ ತೆರಿಗೆ ವಿನಾಯಿತಿ ಕೂಡಾ ನೀಡುತ್ತದೆ. 


ಇದನ್ನೂ ಓದಿ : ಚಿನ್ನದ ದರ ಏರಿಕೆಯ ಚಿಂತೆ ಬೇಡ : ದೀಪಾವಳಿ ವೇಳೆಯಲ್ಲಿ ಅಗ್ಗದ ಬೆಲೆಯಲ್ಲಿ ಚಿನ್ನವನ್ನು ಹೀಗೆ ಖರೀದಿಸಿ !


ಪ್ರತಿ ತಿಂಗಳು 50 ಸಾವಿರ ಪಿಂಚಣಿ ಪಡೆಯುವುದು ಹೇಗೆ? :
NPS ಕ್ಯಾಲ್ಕುಲೇಟರ್ ಪ್ರಕಾರ, ಒಬ್ಬ ವ್ಯಕ್ತಿಯು 25 ರಿಂದ 60 ವರ್ಷ ವಯಸ್ಸಿನವರು NPS ಗೆ ತಿಂಗಳಿಗೆ 6,531 ರೂಪಾಯಿಗಳನ್ನು ಹೂಡಿಕೆ ಮಾಡಿದರೆ 60 ವರ್ಷಗಳ ನಂತರ ತಿಂಗಳಿಗೆ 50,005 ರೂಪಾಯಿಗಳನ್ನು ಪಡೆಯುತ್ತಾರೆ. 60 ವರ್ಷಕ್ಕೆ, ಒಬ್ಬ ವ್ಯಕ್ತಿಯು  27,43,020 ವರೆಗೆ ಹೂಡಿಕೆ ಮಾಡಿದಂತೆ ಆಗುತ್ತದೆ. ಅಂದರೆ ಬಡ್ಡಿ ಎಲ್ಲಾ ಸೇರಿ  ಆ ವ್ಯಕ್ತಿ ಬಳಿ 2,50,02,476 ವರೆಗೆ ಸಂಗ್ರಹವಾಗುತ್ತದೆ.  ಈ ಮೂಲಕ ತಿಂಗಳಿಗೆ 50,005 ರೂಪಾಯಿ ಪಿಂಚಣಿ ಪಡೆಯುವುದು ಸಾಧ್ಯವಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ