ಬೆಂಗಳೂರು : ನಾವು ಬ್ಯಾಂಕ್ ಖಾತೆ ತೆರೆಯುವಾಗ ಎಟಿಎಂ ಕಾರ್ಡ್ ಕೂಡಾ ಸಿಗುತ್ತದೆ. ಇದರೊಂದಿಗೆ ನಾವು ಆನ್‌ಲೈನ್ ಪಾವತಿಯಿಂದ ಹಿಡಿದು ನಗದು ಹಿಂಪಡೆಯುವಿಕೆಯವರೆಗೆ ಎಲ್ಲವನ್ನೂ ಮಾಡಬಹುದು.ಆದರೆ ನಗದು ವಹಿವಾಟಿನ ಹೊರತಾಗಿ ನಿಮ್ಮ ಎಟಿಎಂ ಕಾರ್ಡ್ ಇತರ ಪ್ರಯೋಜನಗಳನ್ನು ಕೂಡಾ ನೀಡುತ್ತದೆ. 


COMMERCIAL BREAK
SCROLL TO CONTINUE READING

ಎಟಿಎಂ ಕಾರ್ಡ್‌ನಿಂದ ಪಡೆಯಬಹುದು 5 ಲಕ್ಷದವರೆಗಿನ ವಿಮೆ : 
ಹೌದು, ಎಟಿಎಂ ಕಾರ್ಡ್ ಮೂಲಕ ೫ ಲಕ್ಷ ರೂಪಾಯಿವರೆಗಿನ ವಿಮೆಯನ್ನು ಪಡೆಯಬಹುದು. ಎಟಿಎಂ ಕಾರ್ಡ್‌ನಲ್ಲಿ 25 ಸಾವಿರದಿಂದ 5 ಲಕ್ಷ ರೂಪಾಯಿಗಳವರೆಗೆ ವಿಮೆಯ ಪ್ರಯೋಜನವನ್ನು ಪಡೆಯುವುದು ಸಾಧ್ಯವಾಗುತ್ತದೆ.ಆದರೆ, ಈ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇರುವುದಿಲ್ಲ.ಮಾಹಿತಿಯ ಕೊರತೆಯಿಂದಾಗಿ ಈ ವಿಮೆಯ ಲಾಭ ಪಡೆಯುವುದು ಕೂಡಾ ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ : Free Gas Connection: ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಮತ್ತೊಮ್ಮೆ ಅವಕಾಶ..!


25 ಸಾವಿರದಿಂದ 5 ಲಕ್ಷದವರೆಗೆ ವಿಮೆ : 
ಖಾತೆದಾರರು ಎಟಿಎಂ ಕಾರ್ಡ್‌ನಲ್ಲಿ 25 ಸಾವಿರ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳವರೆಗೆ ವಿಮೆಯ ಲಾಭವನ್ನು ಪಡೆಯಬಹುದು.ಆದರೆ, ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ  45 ದಿನಗಳಿಗಿಂತ ಹೆಚ್ಚು ತಮ್ಮ ಕಾರ್ಡ್ ಅನ್ನು ಬಳಸುವವರಿಗೆ ಮಾತ್ರ ಈ ಪ್ರಯೋಜನ ಲಭ್ಯವಿದೆ.ಈ ಪ್ರಯೋಜನವು ಸರ್ಕಾರಿ ಮತ್ತು ಖಾಸಗಿ ಎರಡೂ ಬ್ಯಾಂಕಿನ ಕಾರ್ಡ್‌ಗಳಲ್ಲಿ ಲಭ್ಯವಿದೆ. 


ಇಲ್ಲಿ ನೀವು ಪಡೆಯುವ ವಿಮೆಯ ಮೊತ್ತವು ನಿಮ್ಮ ಡೆಬಿಟ್ ಕಾರ್ಡ್‌ನ ವರ್ಗವನ್ನು ಅವಲಂಬಿಸಿರುತ್ತದೆ.ಪ್ರತಿಯೊಂದು ಬ್ಯಾಂಕ್ ತನ್ನ ಗ್ರಾಹಕರಿಗೆ ವಿವಿಧ ವರ್ಗಗಳ ATM ಕಾರ್ಡ್‌ಗಳನ್ನು ನೀಡುತ್ತದೆ.ಪ್ರತಿಯೊಂದು ಕಾರ್ಡ್ ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿದೆ. 


ಇದನ್ನೂ ಓದಿ : Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ..?


ಕಾರ್ಡ್ ವರ್ಗದ ಮೇಲೆ ವಿಮೆ ನಿರ್ಧಾರ :  
ನೀವು ಪಡೆಯುವ ವಿಮೆಯ ಮೊತ್ತವು ಕಾರ್ಡ್‌ನ ವರ್ಗವನ್ನು ಅವಲಂಬಿಸಿರುತ್ತದೆ. ನಿಮ್ಮ ಕಾರ್ಡ್ ಕ್ಲಾಸಿಕ್ ವರ್ಗದಲ್ಲಿದ್ದರೆ 1 ಲಕ್ಷ ರೂಪಾಯಿ ವಿಮೆಯಾಗಿ ಸಿಗುತ್ತದೆ.  ಪ್ಲಾಟಿನಂ ಕಾರ್ಡ್‌ನಲ್ಲಿ ರೂ 2 ಲಕ್ಷ ಮತ್ತು ಪ್ಲಾಟಿನಂ ಮಾಸ್ಟರ್ ಕಾರ್ಡ್‌ನಲ್ಲಿ 5 ಲಕ್ಷರೂಪಾಯಿ ವಿಮೆ ಸಿಗುತ್ತದೆ. ವೀಸಾ ಕಾರ್ಡ್‌ನಲ್ಲಿ 1.5 ರಿಂದ 2 ಲಕ್ಷ ರೂಪಾಯಿಗಳ ವಿಮೆ ಸಿಗುತ್ತದೆ. ಮಾಸ್ಟರ್ ಕಾರ್ಡ್‌ನಲ್ಲಿ 50 ಸಾವಿರ ರೂಪಾಯಿಗಳ ವಿಮಾ ರಕ್ಷಣೆ ಲಭ್ಯವಿದೆ.ಪ್ರಧಾನ ಮಂತ್ರಿ ಜನ್ ಧನ್ ಖಾತೆಗಳಲ್ಲಿ ಸಿಗುವ ಕಾರ್ಡ್‌ನಲ್ಲಿ ಗ್ರಾಹಕರು 1 ರಿಂದ 2 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ.


ಕ್ಲೈಮ್ ಮಾಡುವುದು ಹೇಗೆ?:
ಒಬ್ಬ ವ್ಯಕ್ತಿಯು ಅಪಘಾತದಲ್ಲಿ ಸತ್ತರೆ, ಅವನ ಕುಟುಂಬವು 5 ಲಕ್ಷ ರೂಪಾಯಿಗಳವರೆಗೆ ವಿಮೆಯ ಪ್ರಯೋಜನವನ್ನು ಪಡೆಯುತ್ತದೆ. ಈ ವಿಮೆಯನ್ನು ಪಡೆದುಕೊಳ್ಳುವ ಕಾರ್ಡುದಾರರ ನಾಮಿನಿಯು ಬ್ಯಾಂಕ್ ಶಾಖೆಗೆ ಹೋಗಿ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕು. ಬ್ಯಾಂಕ್‌ಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ, ನಾಮಿನಿ ವಿಮಾ ಹಕ್ಕು ಪಡೆಯುತ್ತಾನೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.