ಗ್ರಾಹಕರಿಗೆ ಅಗತ್ಯವಿರಲಿ, ಬಿಡಲಿ ಬ್ಯಾಂಕ್ ಗಳಿಂದ ಕರೆಗಳು ಬರ್ತಿರುತ್ತವೆ. ಕ್ರೆಡಿಟ್ ಕಾರ್ಡ್ ಮಾಡಿಸುವಂತೆ ಸಿಬ್ಬಂದಿ ಗ್ರಾಹಕರಿಗೆ ಆಫರ್ ನೀಡುತ್ತಾರೆ. ಆದ್ರೆ ಇನ್ಮುಂದೆ ಇಂಥ ಕರೆಗಳು ನಿಮಗೆ ತೊಂದರೆ ನೀಡುವುದಿಲ್ಲ.


COMMERCIAL BREAK
SCROLL TO CONTINUE READING

ಕ್ರೆಡಿಟ್ ಕಾರ್ಡ್ ಮಾಡಿಸುವುದು ಮುಂದಿನ ದಿನಗಳಲ್ಲಿ ಸುಲಭವಲ್ಲ. ಬ್ಯಾಂಕ್ ಗಳು ಕ್ರೆಡಿಟ್ ಕಾರ್ಡ್(Credit Cards) ತಯಾರಿಸುವ ನಿಯಮವನ್ನು ಕಠಿಣಗೊಳಿಸಿವೆ. ಕಾರ್ಡ್ ಗೆ ಮುನ್ನ ಕ್ರೆಡಿಟ್ ಸ್ಕೋರ್ ನೋಡಲಾಗುತ್ತದೆ. ಗ್ರಾಹಕರ ಕ್ರೆಡಿಟ್ ಸ್ಕೋರ್ ಕೆಟ್ಟದಾಗಿದ್ದರೆ ಕ್ರೆಡಿಟ್ ಕಾರ್ಡ್ ಬಯಸುವ ಗ್ರಾಹಕನಿಗೂ ಕಾರ್ಡ್ ಸಿಗುವುದಿಲ್ಲ.


Gold-Silver Rate: ಆಭರಣ ಪ್ರಿಯರೆ ಗಮನಿಸಿ: ಮತ್ತೆ ಏರಿಕೆ ಕಂಡ ಚಿನ್ನ-ಬೆಳ್ಳಿ ದರ!


ಕ್ರೆಡಿಟ್ ಕಾರ್ಡ್‌ಗಳನ್ನು ಮಾಡಿಸಲು ಕ್ರೆಡಿಟ್ ಸ್ಕೋರ್ ‌ನ ರೇಟಿಂಗ್ ಹೆಚ್ಚಿಸಲು ಬ್ಯಾಂಕುಗಳು(Banks) ನಿರ್ಧರಿಸಿವೆ. ಇಲ್ಲಿಯವರೆಗೆ ಬ್ಯಾಂಕುಗಳು 700 ಕ್ರೆಡಿಟ್ ಸ್ಕೋರ್‌ ಇದ್ದರೂ ಕ್ರೆಡಿಟ್ ಕಾರ್ಡ್‌ ಆಫರ್ ಮಾಡ್ತಿದ್ದವು. ಇನ್ಮುಂದೆ ಕ್ರೆಡಿಟ್ ಸ್ಕೋರ್ 780 ಆಗಿದ್ದರೆ ಮಾತ್ರ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಪಡೆಯಬಹುದು.


Bank Merger - ಈ 7 ಬ್ಯಾಂಕ್ ಗಳಲ್ಲಿ ನೀವೂ ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ ಸುದ್ದಿ ತಪ್ಪದೆ ಓದಿ


ಕ್ರೆಡಿಟ್ ಕಾರ್ಡ್‌ ನೀಡುವ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಇದರಿಂದಾಗಿ ಉತ್ತಮ ಕ್ರೆಡಿಟ್ ಸ್ಕೋರ್(Credit Score) ಹೊಂದಿರುವವರಿಗೆ ಮಾತ್ರ ಈ ಸೌಲಭ್ಯವನ್ನು ನೀಡಲಾಗುತ್ತದೆ. ಕ್ರೆಡಿಟ್ ಕಾರ್ಡ್ ಮಾತ್ರವಲ್ಲ ಬ್ಯಾಂಕ್ ಗಳು ಕೆಲವು ವಿಶೇಷ ಕ್ಷೇತ್ರಗಳಾದ ವಿಮಾನಯಾನ ಮತ್ತು ಇತರ ವಲಯಗಳ ವೃತ್ತಿಪರರಿಗೆ ನೀಡುವ ವಿಶೇಷ ಕಾರ್ಡ್‌ ಪ್ರಮಾಣವನ್ನೂ ಕಡಿಮೆ ಮಾಡಿದೆ. ಇದಕ್ಕೆ ಕೊರೊನಾ ಮುಖ್ಯ ಕಾರಣವಾಗಿದೆ.


Business Opportunity: Modi ಸರ್ಕಾರದ ಈ ಯೋಜನೆಯ ಲಾಭ ಪಡೆದು ಕೇವಲ 5000 ಹೂಡಿಕೆ ಮಾಡಿ 50 ಸಾವಿರ ಗಳಿಸಬಹುದು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.