Bank Merger - ಈ 7 ಬ್ಯಾಂಕ್ ಗಳಲ್ಲಿ ನೀವೂ ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ ಸುದ್ದಿ ತಪ್ಪದೆ ಓದಿ

ಬ್ಯಾಂಕ್ ವಿಲಿನೀಕರಣ (Bank Merger) ಪ್ರಕ್ರಿಯೆಯ ಬಳಿಕ ಹಲವು ಬ್ಯಾಂಕ್ ಗಳ  ಚೆಕ್ ಬುಕ್, ಪಾಸ್ಬುಕ್ ಹಾಗೂ IFSC (Discontinuation of Cheque Books and FSC Code) ಕೋಡ್ ಗಳು ಬದಲಾಗಲಿವೆ. ಹೀಗಾಗಿ ಏಪ್ರಿಲ್ 1 ರ ಬಳಿಕ ದೇಶದ ಈ 7 ಬ್ಯಾಂಕ್ ಗಳ ಗ್ರಾಹಕರ ಮೇಲೆ ಪ್ರಭಾವ ಬೀರಲಿದೆ.

Last Updated : Mar 15, 2021, 12:44 PM IST
  • ಬ್ಯಾಂಕ್ ವಿಲೀನ ಪ್ರಕ್ರಿಯೆಯಿಂದ ಹಲವು ಬ್ಯಾಂಕ್ ಗಳ ಚೆಕ್ ಬುಕ್, IFSC ಕೋಡ್ ಬದಲಾಗಿವೆ.
  • ಈ 7 ಬ್ಯಾಂಕ್ ಗಳಲ್ಲಿ ನೀವೂ ಖಾತೆ ಹೊಂದಿದ್ದರೆ ಕೂಡಲೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
  • ಏಪ್ರಿಲ್ 1 ರ ಬಳಿಕ ಆಗುವ ತೊಂದರೆಗಳಿಂದ ಬಚಾವಾಗಿ.
Bank Merger - ಈ 7 ಬ್ಯಾಂಕ್ ಗಳಲ್ಲಿ ನೀವೂ ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ ಸುದ್ದಿ ತಪ್ಪದೆ ಓದಿ title=

ನವದೆಹಲಿ: Bank Merger - ಬ್ಯಾಂಕ್ ವಿಲಿನೀಕರಣ (Bank Merger) ಪ್ರಕ್ರಿಯೆಯ ಬಳಿಕ ಹಲವು ಬ್ಯಾಂಕ್ ಗಳ ಚೆಕ್ ಬುಕ್, ಪಾಸ್ಬುಕ್ ಹಾಗೂ IFSC (Discontinuation of Cheque Books and FSC Code) ಕೋಡ್ ಗಳು ಬದಲಾಗಲಿವೆ. ಹೀಗಾಗಿ ಏಪ್ರಿಲ್ 1 ರ ಬಳಿಕ ದೇಶದ ಈ 7 ಬ್ಯಾಂಕ್ ಗಳ ಗ್ರಾಹಕರ ಮೇಲೆ ಪ್ರಭಾವ ಬೀರಲಿದೆ. 1 ಏಪ್ರಿಲ್ 2021 ರಿಂದ, ಅನೇಕ ಬ್ಯಾಂಕುಗಳ ಹಳೆಯ ಚೆಕ್‌ಬುಕ್ ಮತ್ತು ಐಎಫ್‌ಎಸ್‌ಸಿ ಕೋಡ್‌ಗಳು ಕಾರ್ಯನಿರ್ವಹಿಸುವುದಿಲ್ಲ, ಹೀಗಾಗಿ ನೀವು ಇಂದೇ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ನಿಮ್ಮ ಹೊಸ ಕೋಡ್ ಕೇಳಿಕೊಳ್ಳಿ ಇದರಿಂದ ನಿಮಗೆ ಆನ್ಲೈನ್ ವಹಿವಾಟಿನಲ್ಲಾಗುವ ತೊಂದರೆ ತಪ್ಪಲಿದೆ.

ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಆಂಧ್ರಾ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಹಾಗೂ ಅಲಹಾಬಾದ್ ಬ್ಯಾಂಕ್ ಗ್ರಾಹಕರ ಮೇಲೆ ಇದರ ಪ್ರಭಾವ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಒಂದು ವೇಳೆ ನೀವೂ ಕೂಡ ಈ 7 ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದರೆ, ಫಟಾಫಟ್  ನಿಮ್ಮ ಹೊಸ ಚೆಕ್ ಬುಕ್ ಹಾಗೂ IFSC ಕೋಡ್ ಅನ್ನು ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಕಂಡುಕೊಳ್ಳಿ.

ಇದನ್ನೂ ಓದಿ-High Tech LIC : ಇನ್ನು ಯಾವುದೇ ಶಾಖೆಯಲ್ಲೂ ಮಾಡಬಹುದು Claim Settlement

ಯಾವ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೇ ನಡೆದಿದೆ ಇಲ್ಲಿ ತಿಳಿದುಕೊಳ್ಳಿ
ಏಪ್ರಿಲ್ 1 2020 ರಂದು ಸರ್ಕಾರ ದೇಶದ ಮೂರು ಬ್ಯಾಂಕ್ ಗಳಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಅನ್ನು ವಿಲೀನಗೊಳಿಸಿದೆ. ಇದಲ್ಲದೆ ದೇನಾ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕ್ ಗಳನ್ನು ಬ್ಯಾಂಕ್ ಆಫ್ ಬಡೋದಾನಲ್ಲಿ ವಿಲೀನಗೊಂಡಿವೆ. ಇದು ಏಪ್ರಿಲ್ 1, 2019 ರಂದು ಜಾರಿಗೆ ಬಂದಿದೆ. ಇದಲ್ಲದೆ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ನಲ್ಲಿ ಹಾಗೂ ಆಂಧ್ರಾ ಹಾಗೂ ಕಾರ್ಪೋರೇಶನ್ ಬ್ಯಾಂಕ್ ಗಳು ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಂಡಿದ್ದರೆ, ಅಲಹಾಬಾದ್ ಬ್ಯಾಂಕ್ ಇಂಡಿಯನ್ ಬ್ಯಾಂಕ್ ನಲ್ಲಿ ವಿಲೀನಗೊಂಡಿದೆ.

ಇದನ್ನೂ ಓದಿ-ದುಬಾರಿಯಾಯಿತು SBI ಹೋಂ ಲೋನ್, ಆಟೋ ಲೋನ್ ..!

ಆಂಧ್ರಾ ಹಾಗೂ ಕಾರ್ಪೋರೇಶನ್ ಬ್ಯಾಂಕ್ ಗ್ರಾಹಕರು ಇಲ್ಲಿ ಸಂಪರ್ಕಿಸಿ
ಆಂಧ್ರಾ ಬ್ಯಾಂಕ್ ಹಾಗೂ ಕಾರ್ಪೋರೇಶನ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಮೇಲೆ ಆನ್ಲೈನ್ ಮೂಲಕ ಹೊಸ IFSC ಕೋಡ್ ತಿಳಿದುಕೊಳ್ಳಬಹುದು. ಇದಕ್ಕಾಗಿ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಆಗಿರುವ www.unionbankofindia.co.inಗೆ ಭೇಟಿ ನೀಡಿ. ನಂತರ amaigamation Centre ಮೇಲೆ ಕ್ಲಿಕ್ಕಿಸಿ. ಅಲ್ಲಿ ನಿಮಗೆ ಬ್ಯಾಂಕ್ ನ ಅಪ್ಡೇಟೆಡ್ IFSC ಕೋಡ್ ಸಿಗಲಿದೆ. ಇದಲ್ಲದೆ 18002082244 ಅಥವಾ 8004251515 ಅಥವಾ 18004253555  ಈ ಕಸ್ಟಮರ್ ಕೇರ್ ನಂಬರ್ ಗಳಿಗೂ ಕೂಡ ಭೇಟಿ ನೀಡಿ ಮಾಹಿತಿ ಪಡೆಯಬಹುದು. SMS ಮೂಲಕ ಮಾಹಿತಿ ಪಡೆಯಲು ನೀವು IFSC <OLD IFSC> ಬರೆದು 9223008486 SMS ಕಳುಹಿಸಿ.

ಇದನ್ನೂ ಓದಿ-Salary Account ಖಾತೆದಾರರಿಗೆ 20 ಲಕ್ಷ ರೂ.ವಿಮೆ ಹೋಮ್ ಲೋನ್ ನಲ್ಲಿ ಡಿಸ್ಕೌಂಟ್, ಯಾವ್ ಬ್ಯಾಂಕ್ ನೀಡ್ತಿದೆ ಈ ಸೌಲಭ್ಯ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News