ನವದೆಹಲಿ: Gmail BIMI Feature - ಒಂದು ವೇಳೆ ನೀವೂ ಕೂಡ ಮೇಲ್ ಕಳುಹಿಸಲು/  ಪಡೆಯಲು  Gmail ಅನ್ನು ಬಳಸುತ್ತಿದ್ದರೆ ಈ ಸುದ್ದಿ ನಿಮಗಾಗಿ.  ಪ್ರತಿ ನಿತ್ಯ ಹೊಸ ಹೊಸ ಹ್ಯಾಕಿಂಗ್ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ, ಇದೀಗ ಗೂಗಲ್ ತನ್ನ ಹೊಸ ವೈಶಿಷ್ಟ್ಯ ಜಾರಿಗೆ ತರುತ್ತಿದ್ದು ಇದು ನಿಮ್ಮ ಇ-ಮೇಲ್ ಖಾತೆಯನ್ನು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿರಿಸಲಿದೆ. ಜಿ-ಮೇಲ್ ನಲ್ಲಿ ಪ್ರಮಾಣೀಕೃತ ಬ್ರಾಂಡ್ ಲೋಗೋ (Brand Logo) ಒಂದು ಸುರಕ್ಷಿತ ಸೇವೆಯಾಗಿದ್ದು, ಇದನ್ನು ಕಳೆದ ಜುಲೈನಲ್ಲಿ ಘೋಷಿಸಲಾಗಿತ್ತು. ಈ ಸೇವೆ ಮುಂಬರುವ ವಾರಗಳಲ್ಲಿ ಬಿಡುಗಡೆಯಾಗಲಿದೆ. ಗೂಗಲ್ (Google) ಈ ಕುರಿತು ಖುದ್ದಾಗಿ ಮಾಹಿತಿ ನೀಡಿದೆ. ಗೂಗಲ್ ಪ್ರಕಾರ, ಈ ವೈಶಿಷ್ಟ್ಯವು ಸಂದೇಶ ಗುರುತಿಸುವಿಕೆಗಾಗಿ ಬ್ರಾಂಡ್ ಇಂಡಿಕೇಟರ್ (BIMI) ಎಂಬ ಮಾನದಂಡವನ್ನು ಬಳಸುತ್ತದೆ, ಇದು ಇ-ಮೇಲ್‌ಗಳನ್ನು ಹೆಚ್ಚು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ. ಒಂದು ವೇಳೆ ನೀವೂ ಕೂಡ ನಿಮ್ಮ ಸಂವಹನಗಳಿಗಾಗಿ GMAIL ಬಳಸುತ್ತಿದ್ದರೆ, ಈ ಮಾಹಿತಿ ನಿಮಗೆ ಕೆಲಸಕ್ಕೆ ಬರಲಿದೆ. 


COMMERCIAL BREAK
SCROLL TO CONTINUE READING

ಈ ಸೇವೆ ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಹೊಸ ಸೇವೆಯೊಂದಿಗೆ ಯಾವುದೇ ಸಂಸ್ಥೆಯಾ ಲೋಗೋ ಇ-ಮೇಲ್ ಕಳುಹಿಸಿದ ಬಳಿಕ, ನಿಗದಿತ ವ್ಯಕ್ತಿಯ ಇನ್-ಬಾಕ್ಸ್ ನಲ್ಲಿ ಕಾಣಿಸಲಿದೆ. ಇದು ಡೊಮೇನ್ ಆಧಾರಿತ ಸಂದೇಶ ಪ್ರಮಾಣೀಕರಣ, ರಿಪೋರ್ಟಿಂಗ್ ಹಾಗೂ ಅನುರೂಪತೆ (DMARC) ಹೆಸರಿನ ಒಂದು ತಂತ್ರಜ್ಞಾನವನ್ನು ಬಳಸುತ್ತದೆ ಮತ್ತು ಇದು ಫಿಶಿಂಗ್ (Phishing) ಸಂದೇಶಗಳನ್ನು ಕಡಿತಗೊಳಿಸಲು ಸಹಾಯ ಮಾಡಲಿದೆ.


ಇದನ್ನೂ ಓದಿ- NASA Study: 9 ವರ್ಷಗಳ ಬಳಿಕ ಚಂದ್ರನ ಸ್ಥಿತಿಯಲ್ಲಿ ಬದಲಾವಣೆ, ಇಡೀ ವಿಶ್ವಕ್ಕೆ ಎದುರಾಗಲಿದೆ ಭಾರಿ ಅಪಾಯ!


ತಂತ್ರಜ್ಞಾನದ ಈ ದೈತ್ಯ ಕಂಪನಿ 2019ರಲ್ಲಿ BIMI ಕಾರ್ಯ ಸಮೂಹದಲ್ಲಿ ಶಾಮೀಲಾಗಿತ್ತು. ಈ ಕುರಿತು ಹೇಳಿಕೆ ನೀಡಿದ್ದ ಕಂಪನಿ, ತಮ್ಮ ಇ-ಮೇಲ್ ಗಳ ಪ್ರಮಾನೀಕರಣಕ್ಕೆ ಯಾವ ಕಂಪನಿ ಸೆಂಡರ್ ಪಾಲಸಿ ಫ್ರೇಮ್ ವರ್ಕ್ (SPF) ಅಥವಾ ಡೊಮೇನ್ ಗಳ ಐಡೆಂಟಿಫೈಡ್ ಮೇಲ್ (DKIM) ಗಳನ್ನು ಬಳಸುತ್ತವೆಯೋ ಅವುಗಳ ಲೋಗೋ ಕಾಣಿಸಲಿದೆ ಎಂದು ಹೇಳಿತ್ತು. SPF ಹಾಗೂ DKIM ಇ-ಮೇಲ್ ಪ್ರಮಾಣೀಕರಣದ ತಂತ್ರಜ್ಞಾನಗಳಾಗಿದ್ದು, ಸ್ಪ್ಯಾಮಾರ್ ಗಳನ್ನು ನಿಯಂತ್ರಣದಲ್ಲಿಡಲು ಇವುಗಳ ಬಳಕೆ ಮಾಡಲಾಗುತ್ತದೆ. ಒಂದು ವೇಳೆ ಬಳಕೆದಾರರವತಿಯಿಂದ ಯಾವುದೇ ಒಂದು ಇ-ಮೇಲ್ ಅನ್ನು ಸ್ಪಾಮ್ ಪಟ್ಟಿಗೆ ಸೇರಿಸಿದ ಸಂದರ್ಭಗಳಲ್ಲಿ ಈ ತಂತ್ರಜ್ಞಾನಗಳನ್ನು ಬಳಸುವ ಸಂಘಟನೆಗಳು ಪರಿಣಾಮಗಳನ್ನು ಎದುರಿಸುವ ಸಮಯ ಬರುತ್ತದೆ.


ಇದನ್ನೂ ಓದಿ- UIDAI Aadhaar Alert: ಆಧಾರ್‌ಗೆ ಸಂಬಂಧಿಸಿದಂತೆ ಮರೆತೂ ಕೂಡ ಈ ತಪ್ಪುಗಳನ್ನು ಮಾಡಲೇಬೇಡಿ


ಈ ಸೇವೆಯ ಲಾಭಗಳೇನು?
ಈ ಕುರಿತು ಬ್ಲಾಗ್ ಪೋಸ್ಟ್ ವೊಂದರಲ್ಲಿ ಬರೆದುಕೊಂಡ ಕಂಪನಿ, ಒಂದೊಮ್ಮೆ ಈ ದೃಡೀಕರಿಸಿದ  ಇಮೇಲ್‌ಗಳು ನಮ್ಮ ಎಲ್ಲ ರುಜುವಾತುಗಳನ್ನು ನಿಜ ಎಂದು ಸಾಬೀತುಪಡಿಸಿದಲ್ಲಿ, Gmail UIM ನಲ್ಲಿ ಅಸ್ತಿತ್ವದಲ್ಲಿರುವ ಸ್ಲಾಟ್‌ನಲ್ಲಿ  ಲೋಗೋ  ಕಾಣಲಾರಂಭಿಸುತ್ತದೆ ಎಂದು ಹೇಳಿದೆ. ಲೋಗೋ ಮುಂದಿನ ಸಣ್ಣ ವೃತ್ತಾಕಾರದ ಅವತಾರ್ ಸ್ಲಾಟ್‌ನಲ್ಲಿ ಕಾಣಿಸಲಿದೆ. Gmailನಲ್ಲಿನ ಇ-ಮೇಲ್‌ಗಾಗಿ, ರಿಸೀವರ್‌ನ ಇನ್‌ಬಾಕ್ಸ್‌ನಲ್ಲಿ ಒಂದು ವಿಶಿಷ್ಟ ಗುರುತನ್ನು ನೀಡಲಿದೆ. ಇದು ಬ್ರ್ಯಾಂಡ್‌ಗಳು ತಮ್ಮ ಸುದ್ದಿಪತ್ರಗಳನ್ನು ದೃಡೀಕರಿಸಲು, ಇಮೇಲ್‌ಗಳನ್ನು ನೀಡಲು ಮತ್ತು ಇನ್ನೂ ಹೆಚ್ಚಿನ ಸಂಗತಿಗಳನ್ನುಮಾಡಲು ಸಹಾಯ ಮಾಡುತ್ತದೆ., ಇದಲ್ಲದೆ ಇದು ವಿಶೇಷವಾಗಿ  ಫಿಶಿಂಗ್‌ಗೆ (Phishing) ಯತ್ನಿಸುವ ಹ್ಯಾಕರ್‌ (Hacking) ಗಳಿಗೆ ಹೆಚ್ಚಾಗಿ ಹಾನಿ ಮಾಡುತ್ತದೆ. 


ಇದನ್ನೂ ಓದಿ- WhatsApp Banking: ಯಾವ ಬ್ಯಾಂಕ್ ಗ್ರಾಹಕರಿಗೆ ಲಭ್ಯವಿದೆ ವಾಟ್ಸಾಪ್ ಬ್ಯಾಂಕಿಂಗ್ ಸೌಲಭ್ಯ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ