NASA Study: 9 ವರ್ಷಗಳ ಬಳಿಕ ಚಂದ್ರನ ಸ್ಥಿತಿಯಲ್ಲಿ ಬದಲಾವಣೆ, ಇಡೀ ವಿಶ್ವಕ್ಕೆ ಎದುರಾಗಲಿದೆ ಭಾರಿ ಅಪಾಯ!

NASA Study - ಪ್ರತಿ 18.6 ವರ್ಷಗಳಿಗೊಮ್ಮೆ ಚಂದ್ರ ತನ್ನ ಸ್ಥಾನದಲ್ಲಿ (Moon Orbit) ಸ್ವಲ್ಪ ಬದಲಾವಣೆ ಮಾಡುತ್ತಾನೆ ಮತ್ತು ಇದರಿಂದ ಭೂಮಿಯ ಅನೇಕ ಕರಾವಳಿ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಅಪಾಯವಿದೆ ಎಂದು ಯು.ಎಸ್ ಬಾಹ್ಯಾಕಾಶ ಸಂಸ್ಥೆ (US Space Agency) ನಾಸಾ (NASA) ಹೇಳಿದೆ.   

Written by - Nitin Tabib | Last Updated : Jul 13, 2021, 11:07 AM IST
  • 18.6 ವರ್ಷಗಳಿಗೊಮ್ಮೆ ಚಂದ್ರ ತನ್ನ ಸ್ಥಾನ ಬದಲಾಯಿಸುತ್ತಾನೆ.
  • 1880 ರಿಂದ ಸಮುದ್ರಗಳ ಜಲಮಟ್ಟದಲ್ಲಿ ಶೇ.8 ರಿಂದ ಶೇ.9 ಇಂಚುಗಳಷ್ಟು ಏರಿಕೆಯಾಗಿದೆ.
  • 2030ರವರೆಗೆ ನ್ಯೂಸೆನ್ಸ್ ಫ್ಲಡ್ ಗಳ ಸಂಖ್ಯೆಯಲ್ಲಿ ಅಪಾರ ವೃದ್ಧಿಯಾಗಲಿದೆ.
NASA Study: 9 ವರ್ಷಗಳ ಬಳಿಕ ಚಂದ್ರನ ಸ್ಥಿತಿಯಲ್ಲಿ ಬದಲಾವಣೆ, ಇಡೀ ವಿಶ್ವಕ್ಕೆ ಎದುರಾಗಲಿದೆ ಭಾರಿ ಅಪಾಯ! title=
Wobble In Moon Orbit (File Photo)

Huston: Wobble In Moon Orbit - ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಹೊಸ ಅಧ್ಯಯನದ ಪ್ರಕಾರ, ಚಂದ್ರ ಯಾವಾಗಲು ಸಮುದ್ರದ ಅಲೆಗಳ ಮೇಲೆ ಪ್ರಕ್ಭಾವ ಬೀರುತ್ತಾನೆ ಮತ್ತು ತನ್ನ ಕಕ್ಷೆಯಲ್ಲಿ ಆಟ ಸ್ವಲ್ಪ ಬದಲಾವಣೆ ಮಾಡಿದರೂ ಕೂಡ ಭೂಮಿಯ ಹಲವು ಕರಾವಳಿ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಅಪಾಯವಿರುತ್ತದೆ. NASA ನಡೆಸಿರುವ ಈ ಅಧ್ಯಯನ ನೇಚರ್ ಕ್ಲೈಮೇಟ್ ಚೇಂಜ್ ನಲ್ಲಿ ಪ್ರಕಟಗೊಂಡಿದೆ.

18.6 ವರ್ಷಗಳಗೊಮ್ಮೆ ಚಂದ್ರ ತನ್ನ ಸ್ಥಾನ ಬದಲಾಯಿಸುತ್ತಾನೆ
ನಾಸಾದ ನೂತನ ಅಧ್ಯಯನದ ಪ್ರಕಾರ, ಚಂದ್ರನ ಎಳೆಯುವಿಕೆ ಮತ್ತು ಒತ್ತಡವು ವರ್ಷದಿಂದ ವರ್ಷಕ್ಕೆ ಸಮತೋಲನದಲ್ಲಿರುತ್ತದೆ, ಆದರೆ ಇವು 18.6 ವರ್ಷಗಳಲ್ಲಿ, ಚಂದ್ರನ ಸ್ಥಾನದಲ್ಲಿ ಸ್ವಲ್ಪ ಬದಲಾವಣೆ ಮಾಡುತ್ತವೆ. ಈ ಅವಧಿಯ ಅರ್ಧದಷ್ಟು ಅವಧಿಯಲ್ಲಿ ಚಂದ್ರನು ಭೂಮಿಯ ಮೇಲಿನ ಅಲೆಗಳನ್ನು ಪ್ರಭಾವಿತಗೊಳಿಸುತ್ತಾನೆ. ಆದರೆ ಈ ಅರ್ಧದಷ್ಟು ಅವಧಿ  ಸಮುದ್ರದ ಅಲೆಗಳಿಗೆ ವೇಗ ನೀಡುತ್ತದೆ ಮತ್ತು ಅವುಗಳ ಎತ್ತರವನ್ನು ಹೆಚ್ಚಿಸುತ್ತದೆ, ಇದು ಅಪಾಯಕಾರಿ ಸಂಗತಿಯಾಗಿದೆ.

18.6 ವರ್ಷಗಳ ಸೈಕಲ್ ನ ಅರ್ಧದಷ್ಟು ಸಮಯ ಆರಂಭವಾಗುತ್ತಿದೆ
ಈ ಕುರಿತು ಹೇಳಿಕೆ ನೀಡಿರುವ NASA, ಚಂದ್ರನ ಈ 18.6 ವರ್ಷಗಳ ಸರ್ಕಲ್ ನ ಅರ್ಧಭಾಗ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ ಮತ್ತು ಇದು ಭೂಮಿಯ ಮೇಲಿನ ಸಮುದ್ರದ ಅಲೆಗಳಿಗೆ ವೇಗ ನೀಡಲಿದೆ. ಮುಂದಿನ 9 ವರ್ಷಗಳವರೆಗೆ ಅಂದರೆ 2030ರವರೆಗೆ ಜಾಗತಿಕ ಸಮುದ್ರದ ಮಟ್ಟದಲ್ಲಿ ಭಾರಿ ಏರಿಕೆಯಾಗಲಿದೆ ಹಾಗೂ ಇದೆ ಕಾರಣದಿಂದ ಹಲವು ದೇಶಗಳಲ್ಲಿ ಕರಾವಳಿ ತೀರದಲ್ಲಿ ಭಾರಿ ನೆರೆ ಪರಿಸ್ಥಿತಿ ಎದುರಾಗಲಿದೆ.

1880ರಲ್ಲಿ ಸಮುದ್ರಗಳ ಜಲಮಟ್ಟದಲ್ಲಿ 8-9 ಇಂಚುಗಳಷ್ಟು ಏರಿಕೆಯಾಗಿತ್ತು
ನ್ಯಾಷನಲ್ ಓಷಿಯಾನಿಕ್ ಮತ್ತು ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ (NOAA) ಪ್ರಕಾರ, 1880 ರಿಂದ  ಇದುವರೆಗೆ ಸಮುದ್ರಲ್ಲಿ ನೀರಿನ ಮಟ್ಟವು ಸುಮಾರು 8 ರಿಂದ 9 ಇಂಚುಗಳಷ್ಟು ಏರಿಕೆಯಾಗಿದೆ. ಅದರ ಮೂರನೇ ಒಂದು ಭಾಗ ಅಂದರೆ ಸುಮಾರು 3 ಇಂಚುಗಳಷ್ಟು ಏರಿಕೆ ಕಳೆದ 25 ವರ್ಷಗಳಲ್ಲಿ ಸಂಭವಿಸಿದೆ. ವರದಿಯ ಪ್ರಕಾರ, 2100 ರ ಹೊತ್ತಿಗೆ ಸಮುದ್ರ ಮಟ್ಟವು 12 ಇಂಚುಗಳಿಂದ 8.2 ಅಡಿಗಳಿಗೆ ಏರಿಕೆಯಾಗಬಹುದು ಮತ್ತು ಅದು ಇಡೀ ಜಗತ್ತಿಗೆ ಭಾರಿ ಅಪಾಯವನ್ನು ತಂದೊಡ್ಡಲಿದೆ ಎಂದಿದೆ.

ಇದನ್ನೂ ಓದಿ-Mars-Venus Conjunction: ಬಾನಂಗಳದಲ್ಲಿ ಇಂದು ಗ್ರಹಗಳ ಅದ್ಭುತ ಮಿಲನ, ಈ ರೀತಿ ನೋಡಿ ಈ ವಿಶಿಷ್ಟ ದೃಶ್ಯ

2030ರವರೆಗೆ ಸ್ಯೂಸೆನ್ಸ್ ಫ್ಲಡ್ ಅತಿ ಹೆಚ್ಚಾಗಲಿದೆ
NOAA ವರದಿಯ ಪ್ರಕಾರ, 2019ರಲ್ಲಿ ಈ ಎತ್ತರದ ಅಲೆಗಳ ಕಾರಣ ಅಮೇರಿಕಾದಲ್ಲಿ 600 ನೆರೆ ಪರಿಸ್ಥಿತಿಗಳು ಸೃಷ್ಟಿಯಾಗಿದ್ದವು. ಇದೀಗ NASA ಕೈಗೊಂಡ ನೂತನ ಅಧ್ಯಯನದ ಪ್ರಕಾರ 2030ರವರೆಗೆ ಅಮೇರಿಕಾ ಸೇರಿದಂತೆ ವಿಶ್ವಾದ್ಯಂತ ಹಲವು ಪ್ರದೇಶಗಳಲ್ಲಿ ನ್ಯೂಸೆನ್ಸ್ ಫ್ಲಡ್ ಗಳ (Nuisance Floods) ಪ್ರಮಾಣ ಹೆಚ್ಚಾಗಲಿದೆ. ಇದರ ಜೊತೆಗೆ ಬರುವ ಹೈ ಟೈಡ್ ಅಲೆಗಳ ಎತ್ತರದಲ್ಲಿ ಸುಮಾರು 3 ರಿಂದ 4 ಪಟ್ಟು ವೃದ್ಧಿಯಾಗಲಿದೆ. ಈ ಎತ್ತರದ ಅಲೆಗಳಿಂದ ಉಂಟಾಗುವ ನೆರೆ ಪರಿಸ್ಥಿತಿಗೆ ನ್ಯೂಸೆನ್ಸ್ ಫ್ಲಡ್ ಎನ್ನಲಾಗುತ್ತದೆ.

ಇದನ್ನೂ ಓದಿ-Alert! ಇಂದು ಅಥವಾ ನಾಳೆ ಭೂಮಿಗಪ್ಪಳಿಸಲಿದೆ ಸೌರ ಬಿರುಗಾಳಿ, ಪರಿಣಾಮ ತಿಳಿಯಲು ವರದಿ ಓದಿ

ಚಂದ್ರನ ಸ್ಥಿತಿ ಬದಲಾವಣೆ ಅಪಾಯಕಾರಿಯಾಗಿದೆ
NASA ಪ್ರಕಾರ ಪ್ರತಿ ಬಾರಿ ಚಂದ್ರನ ಸ್ಥಿತಿ ಬದಲಾವಣೆ ಅಪಾಯಕಾರಿಯಾಗಿದೆ ಹಾಗೂ ಇದರಿಂದ ಕರಾವಳಿ ತೀರಗಳಲ್ಲಿ ಉದ್ಭವಿಸುವ ನ್ಯೂಸೆನ್ಸ್ ಫ್ಲಡ್ ಸಂಖ್ಯೆಯಲ್ಲಿಯೂ ಕೂಡ ಏರಿಕೆಯಾಗಲಿದೆ. ಇದರಿಂದ ರಕ್ಷಿಸಿಕೊಳ್ಳಲು ವಿಶ್ವಾದ್ಯಂತ ಇರುವ ಸರ್ಕಾರಗಳು ಯೋಜನೆಗಳನ್ನೂ ರೂಪಿಸುವ ಅವಶ್ಯಕತೆ ಇದೆ ಹಾಗೂ ಗ್ರೀನ್ ಹೌಸ್ ಅನಿಲಗಳ ವಿಸರ್ಜನೆಯಲ್ಲಿ ಕಡಿತಗೊಳಿಸಬೇಕಿದೆ.

ಇದನ್ನೂ ಓದಿ-Research On Average Human Life: ಈ ಶತಮಾನದ ಅಂತ್ಯದ ವೇಳೆಗೆ ಮನುಷ್ಯರು 130 ವರ್ಷ ಬದುಕಲು ಸಾಧ್ಯವಾಗಲಿದೆ: ಅಧ್ಯಯನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News