GoFirst Free Flight Ticket: ನೀವು ಒಂದು ವೇಳೆ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಲು ಹೊರಟಿದ್ದರೆ, ಈ ಒಳ್ಳೆಯ ಸುದ್ದಿ ಕೇವಲ ನಿಮಗಾಗಿ ಮಾತ್ರ. ಏರ್‌ಲೈನ್ ಕಂಪನಿ GoFirst ನಿಮಗಾಗಿ ವಿಶೇಷ ವಾರ್ಷಿಕೋತ್ಸವದ ಉಡುಗೊರೆಯನ್ನು ತಂದಿದೆ, ಇದರಲ್ಲಿ ಪ್ರಯಾಣಿಕರು ಉಚಿತವಾಗಿ ವಿಮಾನ ಹತ್ತುವ ಅವಕಾಶವನ್ನು ಪಡೆಯಲಿದ್ದಾರೆ. GoFirst ತನ್ನ 17 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವಿಮಾನಯಾನ ಸಂಸ್ಥೆ ತನ್ನ  ಪ್ರಯಾಣಿಕರಿಗೆ ಎರಡು ವಿಶೇಷ ಕೊಡುಗೆಗಳನ್ನು ನೀಡುತ್ತಿವೆ. ಈ ವಿಶೇಷ ಕೊಡುಗೆಗಳು ಯಾವುವು ಮತ್ತು ಪ್ರಯಾಣಿಕರು ಅವುಗಳ ಲಾಭವನ್ನು ಹೇಗೆ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಈ ಪ್ರಯಾಣಿಕರಿಗೆ ಉಚಿತ ವಿಮಾನ ಟಿಕೆಟ್ ಸಿಗಲಿದೆ
GoFirst ತನ್ನ 17 ನೇ ವಾರ್ಷಿಕೋತ್ಸವದಂದು ತನ್ನ 17 ವರ್ಷ ವಯಸ್ಸಿನ ಪ್ರಯಾಣಿಕರಿಗೆ ಉಚಿತ ವಿಮಾನ ಟಿಕೆಟ್‌ಗಳನ್ನು ನೀಡುತ್ತಿದೆ. ಈ ಕೊಡುಗೆಯು ನವೆಂಬರ್ 4, 2023 ರವರೆಗಿನ ವಿಮಾನಗಳಿಗೆ ಮಾತ್ರ ಅನ್ವಯಿಸಲಿದೆ. ಇದಕ್ಕಾಗಿ, ಪ್ರಯಾಣಿಕರು 17 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು ಡಿಸೆಂಬರ್ 1, 2022 ರೊಳಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಇದಕ್ಕಾಗಿ, ಅವರು ಮಾನ್ಯತೆ ಹೊಂದಿರುವ ಐಡಿ (ಆಧಾರ್, ಪಾಸ್‌ಪೋರ್ಟ್) ಅನ್ನು ಸಹ ನೀಡಬೇಕಾಗಬಹುದು.


ಇದನ್ನೂ ಓದಿ-Honda ಕಂಪನಿಯ ಈ ಬೈಕನಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು, ಅಲರ್ಟ್ ಜಾರಿಗೊಳಿಸಿದ ಕಂಪನಿ, ತಕ್ಷಣ ಈ ಕೆಲಸ ಮಾಡಿ

ಉಚಿತ ವಿಮಾನ ಟಿಕೆಟ್ ಬುಕ್ ಮಾಡುವುದು ಹೇಗೆ?
ಪ್ರಯಾಣಿಕನು ಫ್ಲೈ ಫಾರ್ ಫ್ರೀ ಆಫರ್‌ನ ಲಾಭವನ್ನು ಪಡೆಯಲು ಬಯಸಿದರೆ, ನಂತರ GoFirst ವೆಬ್‌ಸೈಟ್‌ಗೆ ಹೋಗಿ ಮತ್ತು ಬುಕಿಂಗ್ ಅನ್ನು ನಿರ್ವಹಿಸಿ ವಿಭಾಗದಲ್ಲಿ ತನ್ನ ಕೊನೆಯ ವಿಮಾನದ PNR ಅನ್ನು ನಮೂಡಿಸಬೇಕು. ಉಚಿತ ವೋಚರ್‌ಗಾಗಿ ನಿಮ್ಮ ಫ್ಲೈ ಅನ್ನು ರಚಿಸಲು ಗೆಟ್ ವೋಚರ್ ಅನ್ನು ಕ್ಲಿಕ್ ಮಾಡಿ. ಈ ಬಟನ್ ಅರ್ಹ ಪ್ರಯಾಣಿಕರಿಗೆ ಮಾತ್ರ ಗೋಚರಿಸುತ್ತದೆ, ಇದರ ನಂತರ ಅವರು ಫಾರ್ಮ್ ಅನ್ನು ಭರ್ತಿ ಮಾಡಬೇಕು ಮತ್ತು ಮಾನ್ಯತೆ ಹೊಂದಿರುವ ಆಧಾರ್ ಕಾರ್ಡ್/ಪಾಸ್‌ಪೋರ್ಟ್ ಅನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಒಮ್ಮೆ ಫಾರ್ಮ್ ಅನ್ನು ಯಶಸ್ವಿಯಾಗಿ ಭರ್ತಿ ಮಾಡಿ ಪರೀಶೀಲನೆಯಾದ ಬಳಿಕ,  ವೋಚರ್ ಅನ್ನು 72 ಗಂಟೆಗಳ ಒಳಗೆ ಪ್ರಯಾಣಿಕರ ಇಮೇಲ್ ಐಡಿಗೆ ಇಮೇಲ್ ಮಾಡಲಾಗುತ್ತದೆ.


ಇದನ್ನೂ ಓದಿ-Good News: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.50ಕ್ಕೆ ಏರಿಕೆಯಾಗಲಿದೆ, ವೇತನದಲ್ಲಿ ಮತ್ತೆ ರೂ.9000 ಹೆಚ್ಚಳ!


ವಿಮಾನ ಟಿಕೆಟ್‌ಗಳ ಮೇಲೆ ಭಾರಿ ರಿಯಾಯಿತಿ ಪಡೆಯಿರಿ
ಇದಲ್ಲದೆ, GoFirst ತನ್ನ ಎಲ್ಲಾ ಪ್ರಯಾಣಿಕರಿಗೆ ವಿಮಾನ ಟಿಕೆಟ್‌ಗಳ ಮೇಲೆ ವಿಶೇಷ ಕೊಡುಗೆಗಳನ್ನು ತಂದಿದೆ. GoFirst ಪ್ರಯಾಣಿಕರಿಗೆ ವಿಮಾನ ಟಿಕೆಟ್‌ಗಳಲ್ಲಿ 17% ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಇದಕ್ಕಾಗಿ, ಅವರು ಪ್ರೋಮೋ ಕೋಡ್ GOING17 ಅನ್ನು ನಮೂದಿಸಬೇಕು. ಪ್ರಯಾಣಿಕರಿಗೆ ಈ ಕೊಡುಗೆಯು ನವೆಂಬರ್ 4, 2023 ರವರೆಗೆ ಮಾತ್ರ ಇರಲಿದೆ. ಆದಾಗ್ಯೂ, ಗ್ರಾಹಕರು ತಮ್ಮ ಪ್ರಯಾಣದ ದಿನಾಂಕಕ್ಕೆ 15 ದಿನಗಳ ಮೊದಲು ಬುಕ್ ಮಾಡಬೇಕಾಗುತ್ತದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.