Gold Price: ಬಂಗಾರ ಪ್ರಿಯರೇ ಗುಡ್ ನ್ಯೂಸ್: ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಇಳಿಕೆ!
ಮೇಕಿಂಗ್ ಚಾರ್ಜ್‌ಗಳು, ರಾಜ್ಯ ತೆರಿಗೆಗಳು ಮತ್ತು ಅಬಕಾರಿ ಸುಂಕದಂತಹ ಅಂಶಗಳಿಂದಾಗಿ ಹಳದಿ ಲೋಹದ ದರವು ಪ್ರತಿದಿನ ಭಿನ್ನವಾಗಿರುತ್ತದೆ.
ನವದೆಹಲಿ : ಇಂದು (ಏಪ್ರಿಲ್ 26) ದೇಶದಲ್ಲಿ 10 ಗ್ರಾಂ 24-ಕ್ಯಾರೆಟ್ ಚಿನ್ನದ ಬೆಲೆ 53,450 ರೂ. ಆಗಿದೆ. ಬೆಲೆಯಲ್ಲಿ ಮತ್ತೆ 10 ರೂ. ಇಳಿಕೆ ಕಂಡುಬಂದಿದ್ದು, ಚಿನ್ನದ ಬೆಲೆಯಲ್ಲಿ ಏರಿಳಿತವಾಗಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯಲ್ಲಿ 1000 ರೂ. ಇಳಿಕೆಯಾಗಿದ್ದು ಕೆಜಿ ಬೆಳ್ಳಿಯ ಬೆಲೆ 65,700 ರೂ. ಆಗಿದೆ. ಕಳೆದ ದಿನ 66,700 ರೂ.ಗೆ ಬೆಳ್ಳಿ ಮಾರಾಟವಾಗುತ್ತಿತ್ತು.
ಇದನ್ನು ಓದಿ: Fuel Price: ಇಂಧನ ಬೆಲೆ ಸ್ಥಿರ: ಇಲ್ಲಿದೆ ಇಂದಿನ ತೈಲ ದರ
ಮೇಕಿಂಗ್ ಚಾರ್ಜ್‌ಗಳು, ರಾಜ್ಯ ತೆರಿಗೆಗಳು ಮತ್ತು ಅಬಕಾರಿ ಸುಂಕದಂತಹ ಅಂಶಗಳಿಂದಾಗಿ ಹಳದಿ ಲೋಹದ ದರವು ಪ್ರತಿದಿನ ಭಿನ್ನವಾಗಿರುತ್ತದೆ. ಇಂದು ದೇಶಾದ್ಯಂತ ಕೆಲವು ನಗರಗಳ ಚಿನ್ನದ ದರಗಳು ಇಲ್ಲಿವೆ:
ಗುಡ್ ರಿಟರ್ನ್ಸ್ ವೆಬ್‌ಸೈಟ್ ಪ್ರಕಾರ, ಬೆಂಗಳೂರು, ಹೈದರಾಬಾದ್ ಕೇರಳ, ಮುಂಬೈ, ನವದೆಹಲಿ ಮತ್ತು ಕೋಲ್ಕತ್ತಾದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನವನ್ನು 498,990 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಚೆನ್ನೈನಲ್ಲಿ 10 ಗ್ರಾಂ ಬೆಲೆಬಾಳುವ ಹಳದಿ ಲೋಹದ ಬೆಲೆ 49,110 ರೂ. ಇದೆ. 24 ಕ್ಯಾರೆಟ್ ಚಿನ್ನದ ಬೆಲೆ ಈ ಮಹಾನಗರಗಳಲ್ಲಿ 53,440 ರೂ. ಇದ್ದು, ಚೆನ್ನೈನಲ್ಲಿ 53,580 ರೂ. ಇದೆ.
ಮಧುರೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 49,110 ರೂ. ಇದ್ದು, 24 ಕ್ಯಾರೆಟ್ ಚಿನ್ನದ ಬೆಲೆ 53,580 ರೂ. ಇದೆ. ಇನ್ನು ಪಾಟ್ನಾದಲ್ಲಿ 24-ಕ್ಯಾರೆಟ್ ಶುದ್ಧತೆಯ ಚಿನ್ನಕ್ಕೆ 53,490 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 49,040 ರೂ. ಇದೆ.
ಇದನ್ನು ಓದಿ: ಫ್ಯಾನ್, ಕೂಲರ್, ಎಸಿ ಬಳಸಿಯೂ ಅರ್ಧದಷ್ಟು ವಿದ್ಯುತ್ ಬಿಲ್ ಕಡಿಮೆ ಮಾಡಲು ಸುಲಭ ಉಪಾಯ
ಮೈಸೂರು, ಮಂಗಳೂರು, ವಿಜಯವಾಡ ಸೇರಿದಂತೆ ನಗರಗಳಲ್ಲಿಯೂ ಇದೇ ಪ್ರಮಾಣದ 22 ಕ್ಯಾರೆಟ್ ಶುದ್ಧತೆ 48,990 ರೂ.ಗೆ ಮಾರಾಟವಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.