ಫ್ಯಾನ್, ಕೂಲರ್, ಎಸಿ ಬಳಸಿಯೂ ಅರ್ಧದಷ್ಟು ವಿದ್ಯುತ್ ಬಿಲ್ ಕಡಿಮೆ ಮಾಡಲು ಸುಲಭ ಉಪಾಯ

ಬೇಸಿಗೆ ಕಾಲ ಆರಂಭವಾಯಿತೆಂದರೆ ಮನೆ, ಕಚೇರಿ ಎಲ್ಲೆಡೆ ಭಾರೀ ತಲೆನೋವು ತರುವ ವಿಷಯವೆಂದರೆ ವಿದ್ಯುತ್ ಬಿಲ್. ಆದರೆ, ದುಬಾರಿ ವಿದ್ಯುತ್ ಬಿಲ್ ಗೆ ಹೆದರಿ ಫ್ಯಾನ್, ಕೂಲರ್, ಎಸಿಯನ್ನು ಬಳಸದೇ ಇದ್ದರೆ ಬಿಸಿಲಿನ ಬೇಗೆ ಉಸಿರುಕಟ್ಟಿಸುತ್ತದೆ. ಆದರೆ, ಕೆಲವು ಸುಲಭ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಎರಡೂ ವಿಷಯವನ್ನು ತುಂಬಾ ಸುಲಭವಾಗಿ ನಿಭಾಯಿಸಬಹುದು. ಅಂತಹ ತಂತ್ರಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ.

Written by - Yashaswini V | Last Updated : Apr 26, 2022, 08:33 AM IST
  • ಬೇಸಿಗೆ ಕಾಲದಲ್ಲಂತೂ ಪ್ರತಿಯೊಬ್ಬರೂ ವಿದ್ಯುತ್ ಬಿಲ್ ಬಗ್ಗೆ ಖಂಡಿತವಾಗಿಯೂ ಒಮ್ಮೆಯಾದರೂ ಯೋಚಿಸಿಯೇ ಇರುತ್ತಾರೆ.
  • ಮನೆಯಲ್ಲಿ 24 ಗಂಟೆ ಫ್ಯಾನ್, ಕೂಲರ್, ಎಸಿ ಬಳಸಿಯೂ ವಿದ್ಯುತ್ ಬಿಲ್ ಕಡಿಮೆ ಮಾಡಬಹುದಾದ ಸರಳ ಟ್ರಿಕ್.
  • ಈ ಸುಲಭ ಮಾರ್ಗಗಳನ್ನು ಅನುಸರಿಸುವ ಮೂಲಕ ಬಿಸಿಲಿನ ಬೇಗೆಯಿಂದ ಪರಿಹಾರ ಪಡೆಯುವುದರ ಜೊತೆಗೆ ವಿದ್ಯುತ್ ಬಿಲ್ ನಲ್ಲಿಯೂ ಪರಿಹಾರ ಪಡೆಯಬಹುದು.
ಫ್ಯಾನ್, ಕೂಲರ್, ಎಸಿ ಬಳಸಿಯೂ ಅರ್ಧದಷ್ಟು ವಿದ್ಯುತ್ ಬಿಲ್ ಕಡಿಮೆ ಮಾಡಲು ಸುಲಭ ಉಪಾಯ  title=
How To Reduce Electricity bill

ಬೇಸಿಗೆಯಲ್ಲಿ ವಿದ್ಯುತ್ ಬಿಲ್ ಕಡಿಮೆ ಮಾಡಲು ಸರಳ ಉಪಾಯ: ಮನೆಯಲ್ಲಿ ಸ್ವಲ್ಪ ಎಚ್ಚರಿಕೆಯಿಂದ ವಿದ್ಯುತ್ ಬಳಸುವುದರಿಂದ ಶಕ್ತಿಯ ಸಂರಕ್ಷಣೆಯ ಜೊತೆಗೆ ನಿಮ್ಮ ಜೇಬಿನ ಹೊರೆಯೂ ಕಡಿಮೆಯಾಗುತ್ತದೆ. ಬೇರೆ ಸಮಯದಲ್ಲಿ ಈ ಬಗ್ಗೆ ಯೋಚಿಸದಿದ್ದರೂ ಬೇಸಿಗೆ ಕಾಲದಲ್ಲಂತೂ ಪ್ರತಿಯೊಬ್ಬರೂ ವಿದ್ಯುತ್ ಬಿಲ್ ಬಗ್ಗೆ ಖಂಡಿತವಾಗಿಯೂ ಒಮ್ಮೆಯಾದರೂ ಯೋಚಿಸಿಯೇ ಇರುತ್ತಾರೆ. ಬೇಸಿಗೆ ಕಾಲ ಆರಂಭವಾಯಿತೆಂದರೆ ಮನೆ, ಕಚೇರಿ ಎಲ್ಲೆಡೆ ಭಾರೀ ತಲೆನೋವು ತರುವ ವಿಷಯವೇ ವಿದ್ಯುತ್ ಬಿಲ್. ಆದರೆ, ದುಬಾರಿ ವಿದ್ಯುತ್ ಬಿಲ್ ಗೆ ಹೆದರಿ ಫ್ಯಾನ್, ಕೂಲರ್, ಎಸಿಯನ್ನು ಬಳಸದೇ ಇದ್ದರೆ ಬಿಸಿಲಿನ ಬೇಗೆ ಉಸಿರುಕಟ್ಟಿಸುತ್ತದೆ.  ಆದರೆ, ಕೆಲವು ಸುಲಭ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಎರಡೂ ವಿಷಯವನ್ನು ತುಂಬಾ ಸುಲಭವಾಗಿ ನಿಭಾಯಿಸಬಹುದು. ಮನೆಯಲ್ಲಿ 24 ಗಂಟೆ ಫ್ಯಾನ್, ಕೂಲರ್, ಎಸಿ ಬಳಸಿಯೂ ವಿದ್ಯುತ್ ಬಿಲ್ ಕಡಿಮೆ ಮಾಡಬಹುದಾದ ಸರಳ ಟ್ರಿಕ್ ಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

ಈ ಸುಲಭ ಮಾರ್ಗಗಳನ್ನು ಅನುಸರಿಸುವ ಮೂಲಕ ಬಿಸಿಲಿನ ಬೇಗೆಯಿಂದ ಪರಿಹಾರ ಪಡೆಯುವುದರ ಜೊತೆಗೆ ವಿದ್ಯುತ್ ಬಿಲ್ ನಲ್ಲಿಯೂ ಪರಿಹಾರ ಪಡೆಯಬಹುದು. ಅದಕ್ಕಾಗಿ ಈ ಕೆಳಗೆ ನೀಡಲಾದ ಸಲಹೆಗಳನ್ನು ತಪ್ಪದೇ ಅನುಸರಿಸಿ...
ಫ್ಯಾನ್‌ಗಳಲ್ಲಿ ಎಲೆಕ್ಟ್ರಾನಿಕ್ ರೆಗ್ಯುಲೇಟರ್ ಅನ್ನು ಮಾತ್ರ ಬಳಸಿ:
ಬೇಸಿಗೆಯಲ್ಲಿ ನಿಂತಲ್ಲಿ-ಕೂತಲ್ಲಿ ಫ್ಯಾನ್ ಬೇಕೇ ಬೇಕು. ಹಾಗಾಗಿ ವಿದ್ಯುತ್ ಬಿಲ್ ಕೂಡ ಹೆಚ್ಚಾಗಿ ಬರುತ್ತದೆ. ಇದನ್ನು ತಡೆಯಲು ನಾವು ಆಗಾಗೆ ಫ್ಯಾನ್ ಆಫ್ ಮಾಡುತ್ತೇವೆ. ಆದರೆ, ನೀವು ಫ್ಯಾನ್ ಆಫ್ ಮಾಡುವ ಬದಲಿಗೆ ಫ್ಯಾನ್‌ನಲ್ಲಿ ಎಲೆಕ್ಟ್ರಾನಿಕ್ ರೆಗ್ಯುಲೇಟರ್ ಅನ್ನು ಮಾತ್ರ ಬಳಸಿ. ಕಂಡೆನ್ಸರ್ ಮತ್ತು ಬಾಲ್ ಬೇರಿಂಗ್ ಹಾನಿಗೊಳಗಾಗಿದ್ದರೆ, ಅದನ್ನು ತಕ್ಷಣವೇ ಬದಲಾಯಿಸಿ. ಇದರಿಂದ ವಿದ್ಯುತ್ ಮಿತವಾಗಿ ವ್ಯಯವಾಗುತ್ತದೆ, ಜೊತೆಗೆ ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತೆ.

ಇದನ್ನೂ ಓದಿ- ಸ್ಮಾರ್ಟ್‌ಫೋನ್ ಚಾರ್ಜಿಂಗ್ ಸಲಹೆಗಳು: ಫೋನ್ ಚಿಟಿಕೆಯಲ್ಲಿ ಫುಲ್ ಚಾರ್ಜ್ ಆಗಲು ಇಲ್ಲಿದೆ ಸಲಹೆ

ಕೂಲರ್ ಫ್ಯಾನ್‌ಗಳು ಮತ್ತು ಪಂಪ್‌ನ ಬಗ್ಗೆ ನಿಗಾವಹಿಸಿ:
ಭಾರತದಲ್ಲಿ, ಹೆಚ್ಚಿನ ಮನೆಗಳಲ್ಲಿ ಕೂಲರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ, ಫ್ಯಾನ್ ಮತ್ತು ಕೂಲರ್‌ನ  ಪಂಪ್ ಅನ್ನು ಎಣ್ಣೆ-ಗ್ರೀಸ್ ಮಾಡುವುದು ಅವಶ್ಯಕ. ಅತಿಯಾದ ಚಾಲನೆಯಲ್ಲಿರುವ ಕಾರಣ, ಪಂಪ್ ಹೆಚ್ಚಿನ ಶಕ್ತಿಯನ್ನು ಸೆಳೆಯುತ್ತದೆ. ಆದ್ದರಿಂದ ಕಾಲಕಾಲಕ್ಕೆ ಇದಕ್ಕೆ ಗ್ರೀಸ್ ಮತ್ತು ಎಣ್ಣೆಯನ್ನು ಹಾಕಿ. ತಂಪಾದ ಫ್ಯಾನ್‌ನ ಕಂಡೆನ್ಸರ್ ಮತ್ತು ರೆಗ್ಯುಲೇಟರ್ ಅನ್ನು ಪರೀಕ್ಷಿಸುವುದನ್ನು ಖಚಿತಪಡಿಸಿಕೊಳ್ಳಿ. ಈ ರೀತಿ ಕೂಲರ್ ಫ್ಯಾನ್‌ಗಳು ಮತ್ತು ಪಂಪ್‌ನ ಬಗ್ಗೆ ನಿಗಾವಹಿಸುವುದರಿಂದ ವಿದ್ಯುತ್ ಬಳಕೆ ಕಡಿಮೆಯಾಗುತ್ತದೆ. ಬಿಲ್ ಕೂಡ ಕಡಿಮೆಯಾಗಲಿದೆ.

ಇದನ್ನೂ ಓದಿ- ಫೋನ್ ಅನ್ನು ಮೂರು ಬಾರಿ ಫುಲ್ ಚಾರ್ಜ್ ಮಾಡಬಲ್ಲ ಪವರ್‌ಬ್ಯಾಂಕ್ ಬೆಲೆ, ವೈಶಿಷ್ಟ್ಯ ತಿಳಿಯಿರಿ

ಎಸಿಯನ್ನು 24 ರಿಂದ 26 ಡಿಗ್ರಿಗಳ ನಡುವೆ ಹೊಂದಿಸಿ:
ಗಂಟೆಗಟ್ಟಲೆ ಎಸಿ ಓಡಿಸುವುದರಿಂದ ಹೆಚ್ಚು ವಿದ್ಯುತ್ ಖರ್ಚಾಗುತ್ತದೆ. ಎಸಿ ಓಡಿಸುವುದರ ಜೊತೆಗೆ ಫ್ಯಾನ್ ಕೂಡ ಆನ್ ಮಾಡಿ. ಎಸಿ ತಾಪಮಾನವನ್ನು 24 ರಿಂದ 26 ಡಿಗ್ರಿಗಳ ನಡುವೆ ಹೊಂದಿಸಿ. ಪ್ರತಿ 10 ರಿಂದ 15 ದಿನಗಳಿಗೊಮ್ಮೆ ಏರ್ ಫಿಲ್ಟರ್ ಅನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ಫಿಲ್ಟರ್‌ನಲ್ಲಿ ಧೂಳು ಸಂಗ್ರಹವಾಗುವುದರಿಂದ ಸಂಪೂರ್ಣ ತಂಪಾಗಿಸುವುದಿಲ್ಲ ಮತ್ತು ಕೋಣೆಯನ್ನು ತಂಪಾಗಿಸಲು ಎಸಿಯನ್ನು ದೀರ್ಘಕಾಲ ಓಡಿಸಬೇಕಾಗುತ್ತದೆ. ನೆನಪಿರಲಿ ಎಸಿ ಚಾಲನೆಯಲ್ಲಿರುವಾಗ ಕಿಟಕಿ, ಬಾಗಿಲು ಮುಚ್ಚಿದ್ದರೆ ಎಸಿಯ ತಣ್ಣನೆಯ ಗಾಳಿ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News