ನವದೆಹಲಿ : ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವಾರ ಚಿನ್ನದ ಬೆಲೆ ಇಳಿಕೆಗೊಂಡ ಬೆನ್ನಲ್ಲೇ ಮಂಗಳವಾರ ಹಳದಿ ಲೋಹದ ಬೆಲೆ ಏರಿಕೆಗೊಂಡಿದೆ. ಹಿಂದಿನ ವಾರ ದರಗಳಲ್ಲಿ ತೀವ್ರ ಕುಸಿತದ ನಂತರ ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಇಂದು ಚಿನ್ನದ ಬೆಲೆ(Gold Rate) 10 ಗ್ರಾಂಗೆ ಶೇ. 0.24ರಷ್ಟು ಹೆಚ್ಚಳಗೊಂಡು 47,185 ರೂ.ಗೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇ. 0.05ರಷ್ಟು ಕಡಿಮೆಯಾಗಿ 67,730 ರೂ.ಗೆ ತಲುಪಿದೆ.


ಇದನ್ನೂ ಓದಿ : Aadhaar-SIM: ಒಂದು ಆಧಾರ್ ಕಾರ್ಡ್‌ನಿಂದ ಎಷ್ಟು ಸಿಮ್‌ಗಳನ್ನು ಖರೀದಿಸಬಹುದು?


ದೇಶದಲ್ಲಿ ಚಿನ್ನದ ಬೆಲೆಯು 49,500 ಮಟ್ಟದಿಂದ ಕುಸಿದಿದೆ, ಎಂಸಿಎಕ್ಸ್(MCX) ನಲ್ಲಿ ಚಿನ್ನವು 46800 ರಿಂದ 46600 ಮಟ್ಟದಲ್ಲಿ ಬೆಂಬಲವನ್ನು ಹೊಂದಿದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ವಾರ ಚಿನ್ನದ ಬೆಲೆಗಳು ಶೇಕಡಾ 6ರಷ್ಟು ಕುಸಿದಿದ್ದು, ಕಳೆದ 15 ತಿಂಗಳಲ್ಲಿ ವಾರಕ್ಕೊಮ್ಮೆ ಕುಸಿದಿದೆ.


ಇದನ್ನೂ ಓದಿ : Petrol-Diesel Rate : ವಾಹನ ಸವಾರರಿಗೆ ಬಿಗ್ ಶಾಕ್ : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ!


ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಚಿನ್ನ(Gold)ದ ಬೆಲೆಗಳು ಇಂದು ಸ್ಥಿರವಾಗಿದ್ದು, ಸ್ಪಾಟ್ ಚಿನ್ನವು ಔನ್ಸ್‌ಗೆ 1,784.14 ಡಾಲರ್‌ಗೆ ಹೆಚ್ಚಳಗೊಂಡಿದೆ.


ಇದನ್ನೂ ಓದಿ : ಮನೆಯಲ್ಲೇ ಈ ವ್ಯಾಪಾರ ಆರಂಭಿಸಿ ಪ್ರತಿ ತಿಂಗಳು 30 ಸಾವಿರ ರೂ. ಸಂಪಾದಿಸಬಹುದು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.