ಮನೆಯಲ್ಲೇ ಈ ವ್ಯಾಪಾರ ಆರಂಭಿಸಿ ಪ್ರತಿ ತಿಂಗಳು 30 ಸಾವಿರ ರೂ. ಸಂಪಾದಿಸಬಹುದು

Business Opportunity : ಆತ್ಮನಿರ್ಭರ ಬಾರತದ ಪರಿಕಲ್ಪನೆಯೊಂದಿಗೆ ದೆಶದಲ್ಲಿ ವ್ಯಾಪಾ ವ್ಯಹಾರಕ್ಕೆ ಉತ್ತೇಜನ ನೀಡಲಾಗುತ್ತಿದೆ. ಸರ್ಕಾರ ಕೂಡಾ ಸಣ್ಣ ವ್ಯಾಪಾರಸ್ಥರಿಗೆ ಬಹಳಷ್ಟು ಪ್ರೋತ್ಸಾಹ ನೀಡುತ್ತಿದೆ. 

Written by - Ranjitha R K | Last Updated : Jun 21, 2021, 05:46 PM IST
  • ಸಣ್ಣ ಪ್ರಮಾಣದ ಹೂಡಿಕೆ ದೊಡ್ಡ ಮಟ್ಟದ ಲಾಭ
  • ಮನೆಯಿಂದ ವ್ಯವಹಾರ ಆರಂಭಿಸಿ ಅಧಿಕ ಲಾಭ ಪಡೆಯಬಹುದು
  • ಪ್ರತೀ ತಿಂಗಳು ಲಾಭಕ್ಕೆ ಮೋಸವಿರುವುದಿಲ್ಲ
ಮನೆಯಲ್ಲೇ ಈ ವ್ಯಾಪಾರ ಆರಂಭಿಸಿ ಪ್ರತಿ ತಿಂಗಳು 30 ಸಾವಿರ ರೂ.  ಸಂಪಾದಿಸಬಹುದು title=
ಸಣ್ಣ ಪ್ರಮಾಣದ ಹೂಡಿಕೆ ದೊಡ್ಡ ಮಟ್ಟದ ಲಾಭ (photo zee business)

ನವದೆಹಲಿ :  Business Opportunity : ಆತ್ಮನಿರ್ಭರ ಬಾರತದ ಪರಿಕಲ್ಪನೆಯೊಂದಿಗೆ ದೇಶದಲ್ಲಿ ವ್ಯಾಪಾರ ವ್ಯಹಾರಕ್ಕೆ ಉತ್ತೇಜನ ನೀಡಲಾಗುತ್ತಿದೆ. ಸರ್ಕಾರ ಕೂಡಾ ಸಣ್ಣ ವ್ಯಾಪಾರಸ್ಥರಿಗೆ ಬಹಳಷ್ಟು ಪ್ರೋತ್ಸಾಹ ನೀಡುತ್ತಿದೆ. ಜನರು ಉದ್ಯೋಗ ಹುಡುಕುವ ಬದಲು ಉದ್ಯೋಗದಾತರಾಗಿ ಬದಲಾಗಬೇಕು ಎನ್ನುವುದು ಕೇಂದ್ರ ಸರ್ಕಾರದ ಆಶಯ. 

ನೀವು ವ್ಯವಹಾರವನ್ನು ಪ್ರಾರಂಭಿಸಲು ಬಯಸುವುದಾದರೆ, ಸರ್ಕಾರಿ ಯೋಜನೆಗಳ ಲಾಭವನ್ನು ಪಡೆಯಬಹುದು. ಇಂದು ನಾವು ಆ ಸರ್ಕಾರಿ ಯೋಜನೆಗಳ ಮಾಹಿತಿಯನ್ನು ನೀಡಲಿದ್ದೇವೆ. ಈ ಮೂಲಕ ನೀವು ವ್ಯಾಪಾರ (Business) ಆರಂಭಿಸಿ ಕೈತುಂಬಾ ಹಣ ಸಂಪಾದಿಸಬಹುದು. ಈ ವ್ಯವಹಾರಗಳಿಗೆ ದೊಡ್ಡ ಮಟ್ಟದ ಹೂಡಿಕೆಯ (investment) ಅಗತ್ಯವೂ ಇಲ್ಲ. 

ಇದನ್ನೂ ಓದಿ : 7th Pay Commission: ಪಿಂಚಣಿಗೆ ಸಂಬಂಧಿಸಿದಂತೆ ಬದಲಾದ ನಿಯಮ; ಷರತ್ತುಗಳು ಅನ್ವಯ

ಮನೆಯಿಂದ ವ್ಯವಹಾರ ಆರಂಭಿಸಬಹುದು :
ಉಪ್ಪಿನಕಾಯಿ ಊಟದ ರುಚಿ ಹೆಚ್ಚಿಸುತ್ತದೆ. ಇದು ಊಟದ ರುಚಿ ಮಾತ್ರವಲ್ಲ ನಿಮ್ಮ ಆದಾಯವನ್ನೂ ಹೆಚ್ಚಿಸಬಹುದು. ಉಪ್ಪಿನಕಾಯಿ ವ್ಯವಹಾರವನ್ನು (pickle business) ಯಾವುದೇ ಋತುವಿನಲ್ಲಾದರೂ ಪ್ರಾರಂಭಿಸಬಹುದು. ಉಪ್ಪಿನಕಾಯಿ ತಯಾರಿಸುವ ವ್ಯವಹಾರವನ್ನು ಮನೆಯಿಂದಲೇ ಪ್ರಾರಂಭಿಸಬಹುದು. ವ್ಯವಹಾರವು ಬೆಳೆಯಲು ಪ್ರಾರಂಭಿಸಿದಾಗ, ಅಗತ್ಯವಿದ್ದರೆ ಬೇರೆಡೆ ಸ್ಥಳಾಂತರವಾಗಬಹುದು. ಇದಕ್ಕೆ ದೊಡ್ಡ ಬಂಡವಾಳದ ಅಗತ್ಯವಿಲ್ಲ. ಸಣ್ಣ ಬಂಡವಾಳದಿಂದಲೇ ಈ ವ್ಯವಹಾರವನ್ನು ಪ್ರಾರಂಭಿಸಬಹುದು.

ಕೇವಲ 10 ಸಾವಿರ ರೂಪಾಯಿ ಹೂಡಿಕೆ ಮಾಡಿ ವ್ಯಾಪಾರ ಆರಂಭಿಸಿ : 
ನೀವು ಮನೆಯಲ್ಲಿ ಉಪ್ಪಿನಕಾಯಿ ತಯಾರಿಸುವ ವ್ಯವಹಾರವನ್ನು ಸಹ ಪ್ರಾರಂಭಿಸಬಹುದು. ಕೇವಲ 10 ಸಾವಿರ ಹೂಡಿಕೆ ಮಾಡುವ ಮೂಲಕ  ವ್ಯಾಪಾರವನ್ನು ಶುರು ಮಾಡಬಹುದು. ಇದರಲ್ಲಿ ಮೊದಲ ತಿಂಗಳಿನಿಂದಲೇ 25 ರಿಂದ 30 ಸಾವಿರ ರೂಪಾಯಿಗಳಷ್ಟು ಸಂಪಾದಿಸಬಹುದು. ಉಪ್ಪಿನಕಾಯಿಯನ್ನು ಆನ್‌ಲೈನ್‌ನಲ್ಲಿ (online) , ಸಗಟು, ಚಿಲ್ಲರೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಬಹುದು.

ಇದನ್ನೂ ಓದಿ : SBI New Rule: ಜುಲೈ 1 ರಿಂದ ಎಟಿಎಂನಿಂದ ಹಣ ವಿತ್ ಡ್ರಾ ಆಗಲಿದೆ ದುಬಾರಿ

ಲಾಭದಾಯಕ ವ್ಯಾಪಾರ : 
10 ಸಾವಿರ ರೂಪಾಯಿ ವೆಚ್ಚದಲ್ಲಿ ಉಪ್ಪಿನಕಾಯಿ ತಯಾರಿಸುವ ವ್ಯವಹಾರವನ್ನು ಪ್ರಾರಂಭಿಸುವ ಮೂಲಕ, ದ್ವಿಗುಣ ಲಾಭವನ್ನು (profit) ಗಳಿಸಬಹುದು. ಮೊದಲ ಮಾರ್ಕೆಟಿಂಗ್‌ನಲ್ಲಿ ವೆಚ್ಚದ ಸಂಪೂರ್ಣ ಮೊತ್ತವನ್ನು ಮರುಪಡೆಯಲಾಗುತ್ತದೆ ಮತ್ತು ಅದರ ನಂತರ ಲಾಭವಾಗುತ್ತದೆ. ಈ ಸಣ್ಣ ವ್ಯವಹಾರವನ್ನು ಕಠಿಣ ಪರಿಶ್ರಮದೊಂದಿಗೆ ನಡೆಸಿದರೆ, ದೊಡ್ಡ ವ್ಯವಹಾರವನ್ನಾಗಿ ಮಾಡಬಹುದು. ಪ್ರತೀ ತಿಂಗಳು ಇದರಲ್ಲಿ ಲಾಭ ಗಳಿಸಬಹುದು. 

ಉಪ್ಪಿನಕಾಯಿ ತಯಾರಿಕೆ ಪರವಾನಗಿ ಪಡೆಯುವುದು ಹೇಗೆ?
ಉಪ್ಪಿನಕಾಯಿ ತಯಾರಿಕೆ ವ್ಯವಹಾರಕ್ಕೆ ಪರವಾನಗಿ ಅಗತ್ಯವಿದೆ. ವ್ಯವಹಾರವನ್ನು ಪ್ರಾರಂಭಿಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (FSSAI) ಪರವಾನಗಿ ಪಡೆಯಬಹುದು. ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಈ ಪರವಾನಗಿಗೆ ಅರ್ಜಿ ಸಲ್ಲಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News