Gold-Silver Rate : ಅಕ್ಷಯ ತೃತೀಯ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ..!
ಈ ವರ್ಷ ಕೋವಿಡ್ ಎರಡನೇ ಅಲೆಯುವು ಅಕ್ಷಯ ತೃತೀಯ ಮೇಲೆ ಕರಿ ನೆರಳು
ನವದೆಹಲಿ: ಇಂದು ಅಕ್ಷಯ ತೃತೀಯ 2021 ರ ಸಂದರ್ಭದಲ್ಲಿ ಚಿನ್ನದ ಬೆಲೆ ಸ್ಥಿರವಾಗಿ ಉಳಿದಿದೆ. ಇಂದು 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನದ ದರ 45,000 ರೂ. ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 45,720 ರೂ. ಇದೆ. ಈ ವರ್ಷ ಕೋವಿಡ್ ಎರಡನೇ ಅಲೆಯುವು ಅಕ್ಷಯ ತೃತೀಯ ಮೇಲೆ ಕರಿ ನೆರಳು ಬೀಳುವ ಸಾಧ್ಯತೆಯಿದೆ. ಅಕ್ಷಯ ತೃತೀಯ 2021 ರ ಸಂದರ್ಭದಲ್ಲಿ ಖರೀದಿದಾರರು ಚಿನ್ನ ಖರೀದಿಸುವಲ್ಲಿ ಹೆಚ್ಚಿನ ಉತ್ಸಾಹವನ್ನು ತೋರಿಸುತ್ತಿಲ್ಲ.
ಅಕ್ಷಯ ತೃತೀಯವನ್ನು ಸಾಮಾನ್ಯವಾಗಿ ಆಭರಣಗಳು ಸೇರಿದಂತೆ ಚಿನ್ನ(Gold Rate)ವನ್ನು ಖರೀದಿಸುವ ಶುಭ ದಿನವೆಂದು ಪರಿಗಣಿಸಲಾಗುತ್ತದೆ. ಕೊರೊನದಿಂದ ಮತ್ತೆ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಹೇರಿದ್ದರಿಂದ ಚಿನ್ನದ ಭೌತಿಕ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಐಎಎನ್ಎಸ್ ವರದಿಯೊಂದು ತಿಳಿಸಿದೆ.
ಇದನ್ನೂ ಓದಿ : Prepaid Recharge Plan: ಕೇವಲ 279 ರೂ.ಗಳಿಗೆ ಅನಿಯಮಿತ ಕರೆ-ಡೇಟಾದೊಂದಿಗೆ 4 ಲಕ್ಷದ ವಿಮೆ ಕೂಡ ಲಭ್ಯ
ಕೋವಿಡ್-19(Covid-19) ಮಧ್ಯೆ, ಹೂಡಿಕೆದಾರರು ಮತ್ತು ಚಿನ್ನ ಖರೀದಿದಾರರು ಹೊರಹೋಗದಿರುವುದು ಮತ್ತು ಭೌತಿಕ ಚಿನ್ನದ ಬದಲು ಡಿಜಿಟಲ್ ಅಥವಾ ಪೇಪರ್ ಚಿನ್ನವನ್ನು ಆರಿಸಿಕೊಳ್ಳುವುದು ಸೂಕ್ತ ಎಂದು ಐಎಎನ್‌ಎಸ್ ವರದಿ ತಿಳಿಸಿದೆ.
ಇದನ್ನೂ ಓದಿ : 7th Pay Commission : ಕೇಂದ್ರ ಸರ್ಕಾರಿ ನೌಕರರ DA ಹೆಚ್ಚಳ ಮತ್ತಷ್ಟು ವಿಳಂಬ!
ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ :
ಚೆನ್ನೈ 22 ಕ್ಯಾರೆಟ್ ಚಿನ್ನದ ಬೆಲೆ(22 Carat Gold) 45,000 ರೂ. 24 ಕ್ಯಾರೆಟ್ ಚಿನ್ನದ ಬೆಲೆ 49,090 ರೂ.
ಬೆಂಗಳೂರು 22 ಕ್ಯಾರೆಟ್ ಚಿನ್ನದ ಬೆಲೆ 44,500 ರೂ. 24 ಕ್ಯಾರೆಟ್ ಚಿನ್ನ(24 Carat Gold)ದ ಬೆಲೆ 48,560 ರೂ.
ಇದನ್ನೂ ಓದಿ : Akshaya Tritiya: ಒಂದು ರೂಪಾಯಿಗೆ ಸಿಗಲಿದೆ 24 ಕ್ಯಾರೆಟ್ ಶುದ್ಧ ಚಿನ್ನ; ಮನೆಯಲ್ಲೇ ಕುಳಿತು ಶಾಪಿಂಗ್ ಮಾಡಿ
ದೆಹಲಿ 22 ಕ್ಯಾರೆಟ್ ಚಿನ್ನದ ಬೆಲೆ 45,900 ರೂ. 24 ಕ್ಯಾರೆಟ್ ಚಿನ್ನದ ಬೆಲೆ 49,900 ರೂ.
ಮುಂಬೈ(Mumbai) 22 ಕ್ಯಾರೆಟ್ ಚಿನ್ನದ ಬೆಲೆ 44,720 ರೂ. 24 ಕ್ಯಾರೆಟ್ ಚಿನ್ನದ ಬೆಲೆ 45,720 ರೂ.
ಇದನ್ನೂ ಓದಿ : PM Kisan : ನಾಳೆಯೇ ರೈತರ ಖಾತೆ ಸೇರಲಿದೆ 8ನೇ ಕಂತಿನ ಹಣ ; ರೈತರೊಂದಿಗೆ ಸಂವಾದ ನಡೆಸಲಿರುವ ಪ್ರಧಾನಿ ಮೋದಿ
ಕೇರಳ 22 ಕ್ಯಾರೆಟ್ ಚಿನ್ನದ ಬೆಲೆ 44,500 ರೂ. 24 ಕ್ಯಾರೆಟ್ ಚಿನ್ನದ ಬೆಲೆ 48,560 ರೂ.
ಪಾಟ್ನಾ(Patna) 22 ಕ್ಯಾರೆಟ್ ಚಿನ್ನದ ಬೆಲೆ 44,720 ರೂ. 24 ಕ್ಯಾರೆಟ್ ಚಿನ್ನದ ಬೆಲೆ 45,720 ರೂ.
ಇದನ್ನೂ ಓದಿ : ಪ್ರತಿ ದಿನ 7 ರೂಪಾಯಿ ಹೂಡಿಕೆ ಮಾಡಿ ತಿಂಗಳಿಗೆ ಪಡೆಯಿರಿ 5,000 ರೂ; ತಿಳಿದಿರಲಿ ಸರ್ಕಾರದ ಈ ಯೋಜನೆ
ನಾಗ್ಪುರ 22 ಕ್ಯಾರೆಟ್ ಚಿನ್ನದ ಬೆಲೆ 44,720 ರೂ. 24 ಕ್ಯಾರೆಟ್ ಚಿನ್ನದ ಬೆಲೆ 45,720 ರೂ.
ಕೋಲ್ಕತಾ 22 ಕ್ಯಾರೆಟ್ ಚಿನ್ನದ ಬೆಲೆ 45,800 ರೂ. 24 ಕ್ಯಾರೆಟ್ ಚಿನ್ನದ ಬೆಲೆ 49,560 ರೂ.
ಇದನ್ನೂ ಓದಿ : Bankನ ಈ SMS ಅಪ್ಪಿ-ತಪ್ಪಿಯೂ ಕೂಡ IGNORE ಮಾಡ್ಬೇಡಿ, ಇಲ್ದಿದ್ರೆ ಬೀಳುತ್ತೆ 1000 ರೂ. ದಂಡ
ಜಿಎಸ್ಟಿ(GST), ಟಿಸಿಎಸ್ ಮತ್ತು ಇತರ ಸುಂಕಗಳಿಂದಾಗಿ ಚಿನ್ನದ ದರಗಳು ರಾಜ್ಯದಿಂದ ರಾಜ್ಯಕ್ಕೆ ಮತ್ತು ನಗರದಿಂದ ನಗರಕ್ಕೆ ಬದಲಾಗುತ್ತವೆ ಎಂಬುದನ್ನು ಓದುಗರು ದಯವಿಟ್ಟು ಗಮನಿಸಿ. ಈ ಚಿನ್ನದ ಬೆಲೆಗಳು ಆಭರಣ ಅಂಗಡಿಗಳಲ್ಲಿನ ಬೆಲೆಗಳಿಗಿಂತ ಭಿನ್ನವಾಗಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.