Gold Price Today : ಚಿನ್ನ ಮತ್ತು ಬೆಳ್ಳಿಯ ಬೆಲೆಗಳು  ಏರಿಕೆಯಾಗುತ್ತಲೇ ಇವೆ. ಇಂದು ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ ಕೇಂದ್ರದಲ್ಲಿ  54,700 ರೂ.ಗೆ ಚಿನ್ನ ಟ್ರೇಡ್ ಆಗುತ್ತಿದೆ. ಇದಲ್ಲದೇ ಬೆಳ್ಳಿಯ ಬೆಲೆ ಕೂಡಾ  70,000 ರೂಪಾಯಿ ಗಡಿ ದಾಟಿದೆ. ಇದಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಬೆಲೆ ಏರುತ್ತಲೇ ಇದೆ. 


COMMERCIAL BREAK
SCROLL TO CONTINUE READING

1800 ರೂ.ಗಳಷ್ಟು ಅಗ್ಗದ ಬೆಲೆಯಲ್ಲಿ ಚಿನ್ನ : 
ಪ್ರಸ್ತುತ ಚಿನ್ನವು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕಿಂತ 10 ಗ್ರಾಂಗೆ 1814 ರೂ.ಗಳಷ್ಟು ಅಗ್ಗದ ಬೆಲೆಗೆ ಸಿಗುತ್ತಿದೆ. ಆಗಸ್ಟ್ 2020ರಲ್ಲಿ, ಚಿನ್ನದ ಬೆಲೆ  56200 ರೂಪಾಯಿ ಆಗಿತ್ತು. ಈ ಬೆಲೆಗೆ ಹೋಲಿಸಿದರೆ ಇಂದಿನ ಬೆಲೆ 1800 ರೂ.ಗಳಷ್ಟು ಅಗ್ಗವಾಗಿದೆ ಎಂದು ಹೇಳಬಹುದು. 


ಇದನ್ನೂ ಓದಿ :  ಈ ಮೂರು ಕೆಲಸ ಮಾಡದೇ ಹೋಗಿದ್ದಲ್ಲಿ ರೈತರ ಖಾತೆ ಸೇರುವುದಿಲ್ಲ 13ನೇ ಕಂತಿನ ಹಣ


10 ಗ್ರಾಂ ಚಿನ್ನದ ಬೆಲೆ ಎಷ್ಟು?:
ಚೆನ್ನೈಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 55,480 ರೂಪಾಯಿ ಆಗಿದ್ದು, ಮುಂಬಯಿಯಲ್ಲಿ 54,480,  ದೆಹಲಿಯಲ್ಲಿ 54,700 ರೂ. ಬೆಂಗಳೂರಿನಲ್ಲಿ 54,510 ರೂಪಾಯಿ ಆಗಿದ್ದರೆ, ಹೈದರಾಬಾದ್ ನಲ್ಲಿ 54,480 ರೂಪಾಯಿ ಆಗಿದೆ. ಕೇರಳದಲ್ಲಿಯೂ 10 ಗ್ರಾಂ ಚಿನ್ನದ ಬೆಲೆ  54,480 ರೂಪಾಯಿ ಆಗಿದೆ. 


ಎಷ್ಟಿದೆ ಬೆಳ್ಳಿ ಬೆಲೆ ? : 
ಚೆನ್ನೈಯಲ್ಲಿ 74,000 ರೂಪಾಯಿ ಆಗಿದ್ದರೆ,  ಮುಂಬಯಿಯಲ್ಲಿ 71,100 ರೂಪಾಯಿ ಆಗಿದೆ. ಇನ್ನು ದೆಹಲಿಯಲ್ಲಿ  71,100  ರೂಪಾಯಿ, ಕೋಲ್ಕತ್ತಾದಲ್ಲಿಯೂ  71,100  ರೂಪಾಯಿ ಆಗಿದೆ. ಬೆಂಗಳೂರಿನ ಬೆಲೆ ನೋಡುವುದಾದರೆ 74,000 ರೂಪಾಯಿ, ಹೈದರಾಬಾದ್ ನಲ್ಲಿ 74,000 ರೂಪಾಯಿ, ಕೇರಳದಲ್ಲಿಯೂ 74,000 ರೂಪಾಯಿ ಆಗಿದೆ. 


ಇದನ್ನೂ ಓದಿ Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!


ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಎಷ್ಟು?:
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಬಗ್ಗೆ ಮಾತನಾಡುವುದಾದರೆ ಎರಡೂ ಲೋಹಗಳಲ್ಲಿಯೂ ಏರಿಕೆ ಕಂಡುಬಂದಿದೆ. ಇಲ್ಲಿ ಚಿನ್ನದ ಬೆಲೆಯು ಶೇಕಡಾ 0.34 ರಷ್ಟು ಏರಿಕೆಯಾಗಿದ್ದರೆ,  ಬೆಳ್ಳಿ ದರದಲ್ಲಿ  ಕೂಡಾ 0.61 ಶೇಕಡಾದಷ್ಟು ಹೆಚ್ಚಳವಾಗಿದೆ. 


ಚಿನ್ನದ ದರಗಳನ್ನು ಪರಿಶೀಲಿಸುವುದು ಹೇಗೆ ಎಂದು ತಿಳಿಯಿರಿ? :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ಸಂಖ್ಯೆಯಿಂದ ಸಂದೇಶವನ್ನು ಕಳುಹಿಸುತ್ತೀರೋ ಅದೇ ಸಂಖ್ಯೆಗೆ ನಿಮ್ಮ ಸಂದೇಶವು ಬರುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.