ಈ ಮೂರು ಕೆಲಸ ಮಾಡದೇ ಹೋಗಿದ್ದಲ್ಲಿ ರೈತರ ಖಾತೆ ಸೇರುವುದಿಲ್ಲ 13ನೇ ಕಂತಿನ ಹಣ

PM Kisan 13th Instalment:ಪಿಎಂ ಕಿಸಾನ್‌ ಯೋಜನೆಯ 13ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ ರೈತರು. 13ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ರೈತರ ಖಾತೆಗೆ ವರ್ಗಾಯಿಸಲಿದೆ. ಕಳೆದ ಬಾರಿ 8.42 ಕೋಟಿ ರೈತರು ಪಿಎಂ ಕಿಸಾನ್ ನಿಧಿಯ ಲಾಭವನ್ನು ಪಡೆದಿದ್ದರು. 

Written by - Ranjitha R K | Last Updated : Dec 27, 2022, 10:20 AM IST
  • ಸರ್ಕಾರ ಜಾರಿಗೆ ತಂದಿರುವ ಯೋಜನೆ ಪಿಎಂ ಕಿಸಾನ್ ಸಮ್ಮಾನ್ ನಿಧಿ
  • ಈ ಯೋಜನೆಯ 12 ಕಂತಿನ ಹಣ ರೈತರ ಖಾತೆ ಸೇರಿದೆ.
  • 13ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ರೈತರ ಖಾತೆಗೆ ವರ್ಗಾಯಿಸಲಿದೆ.
ಈ ಮೂರು ಕೆಲಸ ಮಾಡದೇ ಹೋಗಿದ್ದಲ್ಲಿ ರೈತರ ಖಾತೆ ಸೇರುವುದಿಲ್ಲ 13ನೇ ಕಂತಿನ ಹಣ   title=
PM Kisan 13th Instalment

ಬೆಂಗಳೂರು : PM Kisan 13th Instalment : ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಯೋಜನೆ ಪಿಎಂ ಕಿಸಾನ್ ಸಮ್ಮಾನ್ ನಿಧಿ.  ಈ ಯೋಜನೆಯ 12  ಕಂತಿನ ಹಣ ರೈತರ ಖಾತೆ ಸೇರಿದೆ. ಇದೀಗ  ಪಿಎಂ ಕಿಸಾನ್‌ ಯೋಜನೆಯ 13ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ ರೈತರು. 13ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ರೈತರ ಖಾತೆಗೆ ವರ್ಗಾಯಿಸಲಿದೆ. ಕಳೆದ ಬಾರಿ 8.42 ಕೋಟಿ ರೈತರು ಪಿಎಂ ಕಿಸಾನ್ ನಿಧಿಯ ಲಾಭವನ್ನು ಪಡೆದಿದ್ದರು.  ಆದರೆ ಈ ಬಾರಿ ಈ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ.

ಬ್ಯಾಂಕ್ ಖಾತೆಯನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿಕೊಳ್ಳಿ : 
ಪಿಎಂ ಕಿಸಾನ್ ಸಮ್ಮಾನ್ ನಿಧಿಯ 13 ನೇ ಕಂತು ಜನವರಿ 15 ಮತ್ತು 20 ರ ನಡುವೆ ರೈತರ ಖಾತೆ ಸೇರುವ ಸಾಧ್ಯತೆಯಿದೆ. ಆದರೆ ಇದಕ್ಕೂ ಮೊದಲು  ಅಗತ್ಯ ಕೆಲಸಗಳನ್ನು ಪೂರೈಸಿಕೊಳ್ಳುವ ಅಗತ್ಯವಿದೆ. ಹೌದು, ಜನವರಿ 7ರೊಳಗೆ ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡಿಕೊಳ್ಳಬೇಕು. 13 ನೇ ಕಂತು ಖಾತೆ ಸೇರಬೇಕಾದರೆ, ಇ-ಕೆವೈಸಿ ಜೊತೆಗೆ, ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಅಗತ್ಯ. ಇದಲ್ಲದೆ, ಬ್ಯಾಂಕ್‌ಗೆ ಹೋಗಿ ಮತ್ತು NPCI ನಲ್ಲಿ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಯನ್ನು ಪಡೆಯಿರಿ. ರೈತರು  ಮೇಲೆ ತಿಳಿಸಿರುವ ಕೆಲಸಗಳನ್ನು ಪೂರ್ಣಗೊಳಿಸದಿದ್ದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಹಣವನ್ನು ತಡೆ ಹಿಡಿಯಲಾಗುವುದು. 

ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!

ಫಲಾನುಭವಿಗಳ ಸಂಖ್ಯೆ: 8.42 ಕೋಟಿ :
ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಕಿಸಾನ್ ಅಡಿಯಲ್ಲಿ ರೈತರಿಗೆ ವಾರ್ಷಿಕ 6,000 ರೂ. ಯನ್ನು ನೀಡಲಾಗುವುದು. ಈ ಹಣವನ್ನು ಫಲಾನುಭವಿಗಳಿಗೆ ಮೂರು ಕಂತುಗಳಲ್ಲಿ  ಎರಡು ಸಾವಿರ ರೂ.ಯಂತೆ ನೀಡಲಾಗುವುದು.  ಆಗಸ್ಟ್ ನಿಂದ ನವೆಂಬರ್ ವರೆಗಿನ 12ನೇ ಕಂತಿನಲ್ಲಿ ಫಲಾನುಭವಿಗಳ ಸಂಖ್ಯೆ 8.42 ಕೋಟಿಗೆ ಏರಿಕೆಯಾಗಿದೆ ಎಂದು ಇತ್ತೀಚೆಗಷ್ಟೇ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಂಸತ್ತಿನಲ್ಲಿ  ಹೇಳಿದ್ದರು. 

ಯೋಜನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮೋಸ ನಡೆದಿರುವ ಬಗ್ಗೆ ಸರ್ಕಾರಕ್ಕೆ ದೂರುಗಳು ಬಂದಿವೆ. ಇದಾದ ಬಳಿಕ ಕೇಂದ್ರ ಸರ್ಕಾರ ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸಿದ್ದು, ತಹಸೀಲ್ ಮಟ್ಟದಲ್ಲಿ ನಡೆದ ಪರಿಶೀಲನೆಯ ಆಧಾರದ ಮೇಲೆ ಕೋಟ್ಯಂತರ ರೈತರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. PM ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ  ಪಟ್ಟಿಯಲ್ಲಿ ನಿಮ್ಮ ಹೆಸರೂ ಇದೆಯೇ ಎನ್ನುವುದನ್ನು ಪರಿಶೀಲಿಸಿ ಕೊಳ್ಳಬಹುದು. 

ಇದನ್ನೂ ಓದಿ : Online Money Transfer: ಹಣ ಕಳುಹಿಸಲು ನೀವು ಬಳಸುವ ಆಪ್ ಗಳ ಈ ಸತ್ಯಾಸತ್ಯತೆ ನಿಮಗೂ ಗೊತ್ತಿರಲಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News