Gold-Silver Price Today : ಮೂರು ದಿನಗಳ ಕುಸಿತದ ನಂತರ ಶುಕ್ರವಾರ ಮತ್ತೆ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಶುಕ್ರವಾರ, ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದು ಗಗನದೆತ್ತರಕ್ಕೆ ಏರಿದೆ ಹಳದಿ ಲೋಹದ ಬೆಲೆ. ಈ ಬಾರಿ ಚಿನ್ನದ ಬೆಲೆ  58,000 ರೂ. ತಲುಪಿದೆ. ಇದು ಬುಲಿಯನ್ ಮಾರುಕಟ್ಟೆಯಲ್ಲಿ ಇಲ್ಲಿವರೆಗಿನ ಗರಿಷ್ಠ ಬೆಲೆಯಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲಿಯೂ ಭಾರೀ ಏರಿಕೆ ಕಂಡು ಬಂದಿದೆ. 


COMMERCIAL BREAK
SCROLL TO CONTINUE READING

ಎಷ್ಟಾಗಲಿದೆ ಚಿನ್ನದ ದರ ? :  
ಮುಂದಿನ ದಿನಗಳಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆಯಾಗಲಿದೆ. ಶೀಘ್ರದಲ್ಲೇ ಚಿನ್ನ 62,000 ರೂ. ತಲುಪುವ ಎಲ್ಲಾ ಸಾಧ್ಯತೆಗಳಿವೆ ಎನ್ನುತ್ತಾರೆ ತಜ್ಞರು. ಇಂದಿನ ದರವು 2020  ಆಗಸ್ಟ್ ತಿಂಗಳ ದರವನ್ನು ಕೂಡಾ ಮೀರಿದೆ. ಅಂದರೆ 2020  ಆಗಸ್ಟ್ ತಿಂಗಳಲ್ಲಿ ಚಿನ್ನದ ಬೆಲೆ 56,200 ರೂ.ಗಳ ದಾಖಲೆ ಮಟ್ಟ ತಲುಪಿತ್ತು. ಆದರೆ ಇಂದಿನ ಬೆಲೆ ಆ ದಾಖಲೆಯನ್ನು ಬದಿಗಟ್ಟಿದೆ. ಶುಕ್ರವಾರ, ಮಧ್ಯಾಹ್ನ ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್) ಚಿನ್ನವು 10 ಗ್ರಾಂಗೆ 132 ರೂ. ಏರಿಕೆ ಮೂಲಕ 56,678 ರೂ.ಗೆ ತಲುಪಿದೆ. ಅದೇ ರೀತಿ ಬೆಳ್ಳಿ ಬೆಲೆಯಲ್ಲಿ 525 ರೂ.ಗಳ ಏರಿಕೆಯೊಂದಿಗೆ 68,890 ರೂ. ಆಗಿದೆ. 


ಇದನ್ನೂ ಓದಿ : ಕಡಿಮೆ ದರದಲ್ಲಿ ವಂದೇ ಭಾರತ್ ರೈಲು ಪ್ರಯಾಣ ಇನ್ನು ಸಾಧ್ಯ.! ಸಿದ್ದವಾಗಿದೆ ಸ್ಲೀಪರ್ ಕ್ಲಾಸ್


ಬುಲಿಯನ್ ಮಾರುಕಟ್ಟೆಯಲ್ಲಿ ಭಾರೀ ಏರಿಕೆ :
ಶುಕ್ರವಾರ, ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡರ ದರಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಶುಕ್ರವಾರ ಬೆಳಗ್ಗೆ ಇಂಡಿಯಾ ಬುಲಿಯನ್ಸ್ ಅಸೋಸಿಯೇಷನ್ ​​( https://ibjarates.com ) ಬಿಡುಗಡೆ ಮಾಡಿದ ಬೆಲೆಯ ಪ್ರಕಾರ, 24 ಕ್ಯಾರೆಟ್ ಚಿನ್ನವು 320 ರೂಪಾಯಿಗಳಷ್ಟು ಏರಿಕೆಯಾಗಿ 10 ಗ್ರಾಂಗೆ 56,990 ರೂಪಾಯಿಗಳಿಗೆ ತಲುಪಿದೆ. ಬೆಳ್ಳಿಯ ದರವು 68,509 ರೂ.ಗೆ ತಲುಪಿದೆ.


ಪಾವತಿಸಬೇಕು 58,700 ರೂ. :
ಚಿನ್ನಕ್ಕೆ 56,990 ದರ ನಿಗದಿಯಾದರೆ ಆ ಬೆಲೆಯ ಮೇಲೆ 3 ಪ್ರತಿಶತ ಜಿಎಸ್‌ಟಿಯನ್ನು ಸಹ ಪಾವತಿಸಬೇಕಾಗುತ್ತದೆ. ಈ ರೀತಿಯಾಗಿ 10 ಗ್ರಾಂ ಚಿನ್ನದ ದರ  58,700 ರೂ. ಆಗುತ್ತದೆ. ಜಿಎಸ್‌ಟಿ  ಹೊರತಾಗಿ ಶುಕ್ರವಾರದ ವಹಿವಾಟಿನಲ್ಲಿ 23 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 56762 ರೂ., 22 ಕ್ಯಾರೆಟ್ 10 ಗ್ರಾಂಗೆ 52203 ಮತ್ತು 18 ಕ್ಯಾರೆಟ್ 10 ಗ್ರಾಂಗೆ 42743 ರೂ.  ಆಗಿದೆ. 


ಇದನ್ನೂ ಓದಿ : ಕೇಂದ್ರ ಬಜೆಟ್‌ಗೂ ಮೊದಲು ಸರ್ಕಾರದಿಂದ ರೈತಾಪಿ ವರ್ಗಕ್ಕೆ ಭರ್ಜರಿ ಉಡುಗೊರೆ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.